ಅಪಹೃತ ಭಾರತೀಯನ ಬಿಡುಗಡೆ

7

ಅಪಹೃತ ಭಾರತೀಯನ ಬಿಡುಗಡೆ

Published:
Updated:

ಮಸ್ಕತ್‌ (ಪಿಟಿಐ): ಮಸ್ಕತ್‌ನಿಂದ 200 ಕಿಲೋ ಮೀಟರ್‌ ದೂರದಲ್ಲಿರುವ ಸೋಹರ್‌ ಪಟ್ಟಣದಿಂದ ಕಳೆದ ವಾರ ಅಪಹರಣಗೊಂಡಿದ್ದ  ಭಾರತೀಯನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿರುವ ಒಮನ್‌ಪೊಲೀಸರು ಇಬ್ಬರು ಪಾಕಿಸ್ತಾನಿಯರು ಸೇರಿದಂತೆ ಒಟ್ಟು ಏಳು ಮಂದಿಯನ್ನು ಸೋಮವಾರ ಬಂಧಿಸಿದ್ದಾರೆ.ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿ­ಗಳೊಂದಿಗೆ ಸತತ ಸಂಪರ್ಕ ಸಾಧಿಸಿತ್ತು. ಸೋಮವಾರ ಒಮನ್‌ ಪೊಲೀಸರು ಭಾರತೀಯನನ್ನು ರಕ್ಷಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಅಪಹರಣಕ್ಕೊಳಗಾದವನನ್ನು ಕೇರಳದ ಹನೀಫ್‌ ಎಂದು ಗುರುತಿಸಲಾಗಿದ್ದು, ಈತನ ಬಿಡುಗಡೆಗಾಗಿ ಅಪಹರಣಕಾರರು ಅಪಾರ ಮೊತ್ತದ ಹಣ  ಬೇಡಿಕೆ ಇಟ್ಟಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.‘ಈತನ ಬಿಡುಗಡೆಗೆ ಹಣದ ಬೇಡಿಕೆಯಿಟ್ಟ ಅಪಹರಣಕಾರರು ಉರ್ದು ಭಾಷಿಕರಾಗಿದ್ದರು’ ಎಂದು ವರದಿಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry