ಶುಕ್ರವಾರ, ಏಪ್ರಿಲ್ 23, 2021
22 °C

ಅಪಹೃತ ಹಿಂದೂ ಬಾಲಕಿ ಇಸ್ಲಾಂಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ ವರದಿ: ಎರಡು ದಿನಗಳ ಹಿಂದೆ ದೇಶದ ಸಿಂಧ್ ಪ್ರಾಂತದಿಂದ ಅಪಹರಿಸಲ್ಪಟ್ಟಿದ್ದ 14 ವರ್ಷದ ಹಿಂದೂ ಬಾಲಕಿ ಮನಿಶಾ ಕುಮಾರಿ ಪಾಕಿಸ್ತಾನದಲ್ಲಿಯ ಮುಸ್ಲಿಂ ಯುವಕನೊಬ್ಬನನ್ನು ಮದುವೆಯಾಗುವ ಮೂಲಕ ಇಸ್ಲಾಂಗೆ ಮತಾಂತರವಾಗಿದ್ದಾಳೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.ಆದರೆ ಈ ಘಟನೆಯಿಂದ ತೀವ್ರವಾಗಿ ದಿಗಿಲುಗೊಂಡಿರುವ ಮನಿಶಾ ತಂದೆ `ನನ್ನ ಮಗಳು ಎಂದೂ ತನ್ನ ಧರ್ಮ ಬಿಟ್ಟುಕೊಡಲಾರಳು, ಇದನ್ನೆಲ್ಲ ಬಲವಂತವಾಗಿ ಮಾಡಲಾಗಿದೆ~ ಎಂದು ಆರೋಪಿಸಿದ್ದಾರೆ.

ತಾನೀಗ ಮಾವಿಶ್ ಎಂದು ಬದಲಾಗಿದ್ದಾಗಿ ಆಕೆ ಅಜ್ಞಾತ ಸ್ಥಳವೊಂದರಿಂದ ಪಾಲಕರಿಗೆ ಕರೆ ಮಾಡಿದಾಗಲೇ ಮತಾಂತರದ ವಿಷಯ ಬೆಳಕಿಗೆ ಬಂದಿದೆ.ಮತಾಂತರ ಸ್ವಯಂಪ್ರೇರಿತವಾಗಿ ನಡೆದದ್ದು ಹಾಗೂ ಗುಲಾಮ ಮುಸ್ತಫಾ ಚನ್ನಾ ಎಂಬಾತನನ್ನು ತಾನು ಪ್ರೀತಿಸಿ ಮದುವೆಯಾಗಿದ್ದಾಗಿ ಆಕೆ ಹೇಳಿದ್ದಾಳೆ ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.