ಅಪಾಯಕಾರಿ ಚಾಲಕರು

7

ಅಪಾಯಕಾರಿ ಚಾಲಕರು

Published:
Updated:

ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಇದರ ಮಧ್ಯೆ ವಾಹನಗಳ ಚಾಲಕರು ಮೊಬೈಲ್‌ ಬಳಕೆ ಮಾಡುವುದು ಬಹಳ ಜಾಸ್ತಿಯಾಗಿದೆ. ಇವರ ಗಮನವೆಲ್ಲ ಮೊಬೈಲ್‌ ಸಂಭಾಷಣೆ ಕಡೆ ಇರುವ ಕಾರಣ ಅಕ್ಕಪಕ್ಕದ ವಾಹನಗಳು ಮತ್ತು ಸಂಚಾರ ನಿಯಮದ ಬಗ್ಗೆ ಗಮನವಿರುವುದಿಲ್ಲ. ಈ ಬೆಳವಣಿಗೆ ಪಾನಮತ್ತ ಚಾಲಕರಿಗಿಂತಲೂ ಅಪಾಯಕಾರಿ.ದಯಮಾಡಿ ಸಂಬಂಧಪಟ್ಟವರು, ಇಂತಹ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry