ಶನಿವಾರ, ಸೆಪ್ಟೆಂಬರ್ 21, 2019
24 °C

ಅಪಾಯಕಾರಿ ಮರ

Published:
Updated:

ಬಾಪೂಜಿನಗರ ಬಡಾವಣೆ 4ನೇ ಮುಖ್ಯ ರಸ್ತೆಯಲ್ಲಿರುವ ಮರ ದೊಡ್ಡದಾಗಿ ಬೆಳೆದಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಅಪಾಯದಲ್ಲಿದೆ.ಇತ್ತೀಚಿಗೆ ಧೋ... ಎಂದು ರಭಸದ ಮಳೆ ಸುರಿಯುವಾಗ ಇದರ ಸುತ್ತಮುತ್ತ ಇದ್ದವರು  ಜೀವ ಕೈಯಲ್ಲಿ ಹಿಡಿದುಕೊಂಡಿದ್ದರು. ಈ ಮರದ ಪಕ್ಕ ಹಾಗೂ ಎದುರುಗಡೆ ಹೆಂಚು ಮತ್ತು ಶೀಟ್ ಮನೆಗಳಿವೆ.ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ವಿಳಂಬ ಮಾಡದೆ ತುರ್ತಾಗಿ ಸ್ಥಳಕ್ಕೆ ಭೇಟಿ ನೀಡಿ ಮರದ ಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಮನವಿ.

 

Post Comments (+)