ಮಂಗಳವಾರ, ಜೂನ್ 22, 2021
22 °C

ಅಪಾಯಕ್ಕೆ ಆಹ್ವಾನಿಸುವ ರಸ್ತೆ ಗುಂಡಿ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ಕ್ರಾಸ್‌ನ ಗುಮ್ಮಟದ  ಬಾವಿ ಹತ್ತಿರ ರಸ್ತೆ ಮಧ್ಯದಲ್ಲಿ ದೊಡ್ಡ ನೀರಿನ ಗುಂಡಿ ಉಂಟಾಗಿದ್ದು ಅದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಇದೇ ರಸ್ತೆಯಲ್ಲಿ ಹಿಂದೊಮ್ಮೆ ನೀರಿನ ಗುಂಡಿ ಕಾಣಿಸಿಕೊಂಡಿತ್ತು. ಆಗ ಲೋಕೋಪಯೋಗಿ ಇಲಾಖೆ ಯವರು ಮಣ್ಣಿನಿಂದ ಗುಂಡಿ ಮುಚ್ಚಿದ್ದರು. ಆದರೆ ಮತ್ತೆ ಈಗ ರಸ್ತೆಯ ಅದೇ ಸ್ಥಳದಲ್ಲಿ ನೀರಿನ ಗುಂಡಿ ನಿರ್ಮಾಣವಾಗಿದ್ದು ಸಾರ್ವ ಜನಿಕರಿಗೆ ಭಾರೀ ತೊಂದರೆ ಯಾಗುತ್ತಿದೆ.ರಸ್ತೆ ನಡುವೆ ಪದೇ ಪದೇ ನೀರಿನ ಗುಂಡಿ ಉಂಟಾಗಲು ರಸ್ತೆ ಪಕ್ಕದಲ್ಲಿ ಇರುವ ಪುರಸಭೆಯ ಸೋರುತ್ತಿರುವ ವಾಲ್ವ್ ಕಾರಣವಾಗಿದೆ. ಸೋರು ತ್ತಿರುವ ವಾಲ್ವ್‌ನಿಂದ ದಿನವೂ ನೀರು ರಸ್ತೆಯಲ್ಲಿ ಬಂದು ನಿಲ್ಲುತ್ತಿದ್ದು ಗುಂಡಿ ದೊಡ್ಡದಾಗಿ ಬೆಳೆಯಲು ಅನುಕೂಲ ವಾಗಿದೆ.ಈಗ ಮತ್ತೆ ರಸ್ತೆಯಲ್ಲಿ ದೊಡ್ಡ ತೆಗ್ಗು ಕಾಣಿಸಿಕೊಂಡಿದ್ದು ಸದರಿ ಗುಂಡಿ ತಪ್ಪಿಸಿ ವಾಹನ ಓಡಿಸಲು ಚಾಲಕರು ದೊಡ್ಡ ಸರ್ಕಸ್ಸನ್ನೇ ಮಾಡಬೇಕಾಗಿದೆ. ಹೀಗೆ ಒಮ್ಮಮ್ಮೆ ಗುಂಡಿ ತಪ್ಪಿಸುವ ಸಂದರ್ಭದಲ್ಲಿ ಚಾಲಕರ ನಿಯಂತ್ರಣ ತಪ್ಪಿದ ವಾಹನಗಳು ಸಾರ್ವಜನಿಕರಿಗೆ ಬಡಿದು ಅಪಾಯ ಸಂಭವಿಸಿದ ಘಟನೆಗಳೂ ನಡೆದಿವೆ.ಈ ರಸ್ತೆಯಲ್ಲಿ ವಾಹನ ಸಂಚಾರದ ಜೊತೆಗೆ ಜನತೆಯ ಓಡಾಟವೂ ದಟ್ಟವಾಗಿದೆ. ಲಕ್ಷ್ಮೇಶ್ವರದಿಂದ ಶಿಗ್ಲಿ, ದೊಡ್ಡೂರು, ಸೂರಣಗಿ, ಬಾಳೇ ಹೊಸೂರು ಕಡೆ ಇದೇ ರಸ್ತೆ ಮೂಲಕ ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ.ಅಲ್ಲದೆ ಎಂ.ಎ. ಕಾಲೇಜು, ಚಂದನ ಶಾಲೆ, ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ನೂರಾರು ಮಕ್ಕಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಬೆಳಿಗ್ಗೆ ಮಕ್ಕಳು ಶಾಲೆಗೆ ಹೋಗುವಾಗ ಹಾಗೂ ಸಂಜೆ ಮನೆಗೆ ಬರುವಾಗ ಈ ರಸ್ತೆ ಬಹಳ ಅಪಾಯಕಾರಿ ರೂಪ ತಾಳಿರುತ್ತದೆ.ಚಾಲಕರು ಪೈಪೋಟಿಯಿಂದ ವಾಹನ ಓಡಿಸುವಾಗ ಮುಂದೆ ಬರುತ್ತಿರುವ ಮಕ್ಕಳನ್ನು ಸಹ ಲೆಕ್ಕಿಸದೆ ನೀರಿನ ಗುಂಡಿ ತಪ್ಪಿಸುವ ಸಲುವಾಗಿ ವಾಹನಗಳನ್ನು ರಸ್ತೆ ಬದಿಗೆ ತೆಗೆದುಕೊಳ್ಳುತ್ತಾರೆ. ಆಗ ರಸ್ತೆಯಲ್ಲಿ ಸಾರ್ವಜನಿಕರು ಸುಲಭ ವಾಗಿ ಓಡಾಡಲಾರದ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತದೆ.ನಿತ್ಯವೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಈ ನೀರಿನ ಗುಂಡಿ ನೋಡುತ್ತಾ ಓಡಾ ಡುತ್ತಾರೆಯೇ ವಿನಾ ಅದನ್ನು ಮುಚ್ಚಲು ಮಾತ್ರ ಕ್ರಮಕೈಗೊಳ್ಳು ತ್ತಿಲ್ಲ. ಹೀಗಾಗಿ ಸಾರ್ವಜನಿಕರು ಪರದಾಡುವುದು ತಪ್ಪಿಲ್ಲ.ಈಗಲಾದರೂ ಸಂಬಂಧಿಸಿದವರು ನೀರಿನ ಗುಂಡಿ ಮುಚ್ಚಲು ಮುಂದಾಗ ಬೇಕಾದ ಅಗತ್ಯ ಇದೆ.

ನಾಗರಾಜ ಹಣಗಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.