ಅಪಾಯದಲ್ಲಿದ್ದ ಬೆಳ್ಳಕ್ಕಿ ರಕ್ಷಣೆ

7

ಅಪಾಯದಲ್ಲಿದ್ದ ಬೆಳ್ಳಕ್ಕಿ ರಕ್ಷಣೆ

Published:
Updated:
ಅಪಾಯದಲ್ಲಿದ್ದ ಬೆಳ್ಳಕ್ಕಿ ರಕ್ಷಣೆ

ಚಿಕ್ಕಮಗಳೂರು: ಪ್ರಾಣಾಪಾಯ ದಿಂದ ಪಾರಾಗಿ ಬಂದು ನಗರದ   ಚರ್ಚ್ ರಸ್ತೆಯ ನೀಲಗಿರಿ ಮರದಲ್ಲಿ ಸಿಕ್ಕಿ ಹಾಕಿ ಕೊಂಡಿದ್ದ ಬೆಳ್ಳಕ್ಕಿಯನ್ನು ಇಬ್ಬರು ಅರಣ್ಯ  ರಕ್ಷಕರು ಸೋಮವಾರ ರಕ್ಷಿಸಿದ್ದಾರೆ.ಬೇಟೆಗಾರರ ಬಲೆಗೆ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿ ಬಂದ ಬೆಳ್ಳಕ್ಕಿ(ಇಗ್ರೇಟ್ ಹಕ್ಕಿ) ನಗರ ಹಿರಿಯ ವಕೀಲ ಎಸ್.ದಿನಕರ್‌ರಾವ್ ಅವರ ಮನೆಹಿಂದಿನ  ತೋಟದಲ್ಲಿರುವ ನೀಲಗಿರಿ ಮರದ ತುತ್ತತುದಿಗೆ ಬಂದು ಕುಳಿತಾಗ ಪಕ್ಷಿಯ ಕಾಲಿನಲ್ಲಿದ್ದ  ವೈರ್ ಮರಕ್ಕೆ ಸುತ್ತಿಕೊಂಡು ಚಿರಾಡುತ್ತಿ ದ್ದುದು ಕಂಡು ಬಂತು.ಮರ ನೋಡಿದ ವಕೀಲರಿಗೆ ಪಕ್ಷಿ ಅಪಾಯಕ್ಕೆ ಸಿಲುಕಿರುವುದು ಕಂಡುಬಂತು. ತಕ್ಷಣ ಸ್ಥಳೀಯ ಪರಿಸರಾಸಕ್ತರಿಗೆ ಕರೆಮಾಡಿ ಮಾಹಿತಿ ನೀಡಿದರು.ಸ್ಥಳಕ್ಕೆ ಆಗಮಿಸಿದ ಪರಿಸರಾಸಕ್ತರು  ಕೂಡಲೇ ಚಿಕ್ಕಮಗಳೂರು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ಅವರಿಗೆ ವಿಚಾರ ಮುಟ್ಟಿಸಿದರು. ತಕ್ಷಣ ಅಲ್ಲಿಗೆ ಆಗಮಿಸಿದ ಇಲಾಖೆಯ  ಸಿಬ್ಬಂದಿ ಹುಲಿಗೌಡ ಮತ್ತು ಸೋಮ ನಾಯ್ಕ ಹಕ್ಕಿಯನ್ನು ರಕ್ಷಿಸುವ ಮಾಗೋರ್ ಪಾಯ  ಕಂಡುಕೊಂಡರು. ಎತ್ತರದ ಮರದ ತುತ್ತತುದಿಗೆ ಹತ್ತಿ  ಹಕ್ಕಿ ಕುಳಿತಿದ್ದ ರೆಂಬೆಯನ್ನು ತನ್ನತ್ತ ಎಳೆದು ಕೊಂಡು ಪಕ್ಷಿಯನ್ನು ಕೆಳಗೆ ಇಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry