ಅಪಾಯದ ಅಂಚಿನಲ್ಲಿ 8 ಲಕ್ಷ ಜೀವ ಪ್ರಭೇದಗಳು

7

ಅಪಾಯದ ಅಂಚಿನಲ್ಲಿ 8 ಲಕ್ಷ ಜೀವ ಪ್ರಭೇದಗಳು

Published:
Updated:

ಹಾಸನ: `ಜೀವ ಸಂಕುಲದಲ್ಲಿ ಒಂದು ಕೊಂಡಿ ಕಳಚಿದರೂ ಇಡೀ ಸರಪಳಿ ನಾಶವಾಗುತ್ತದೆ. ಮಾನವನ ದುರಾಸೆಯ ಫಲವಾಗಿ ಈಗಾಗಲೇ ಎಂಟು ಲಕ್ಷಕ್ಕೂ ಅಧಿಕ ಜೀವ ಪ್ರಭೇದಗಳಿಗೆ ಅಪಾಯ ಬಂದೊದಗಿದೆ~ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್.ಎ.ಅಹಮದ್ ನುಡಿದರು.ಬಿಜಿವಿಎಸ್ ಹಾಸನ ನಗರ ಘಟಕ, ಎಸ್.ಆರ್.ಜಿ. ಶಿಕ್ಷಣ ಸಂಸ್ಥೆ, ಮುಕ್ತ ಮಹಿಳಾ ಕಲಾಯುವತಿ ಮಂಡಳಿ ಹಾಗೂ ಲಯನ್ಸ್ ಕ್ಲಬ್‌ಗಳ ಸಹಯೋಗದಲ್ಲಿ ನಗರದ ಉತ್ತರ ಬಡಾವಣೆಯ ಎಸ್.ಆರ್.ಜಿ. ಶಿಕ್ಷಣ ಸಂಸ್ಥೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪ್ರಾಣಿ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ಭಾರತ ಜ್ಞಾನ ವಿಜ್ಞಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಟಿ.ಶಿವಣ್ಣ, `ಇಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಭೂಮಿಯ ಮೇಲೆ ಸಮಾನ ಹಕ್ಕಿದೆ. ಯಾವ ಪ್ರಾಣಿಗೂ ತೊಂದರೆಯಾಗದಂತೆ ನಾವು ಬದುಕಬೇಕಾಗಿದೆ~ ಎಂದರು. ಮುಕ್ತಾ ಮಹಿಳಾ ಕಲಾ ಯುವತಿ ಮಂಡಳಿಯ ಅಧ್ಯಕ್ಷೆ ಮಮತಾ ಶಿವು ಅಧ್ಯಕ್ಷತೆ ವಹಿಸಿದ್ದರು. ಬಿಜಿವಿಎಸ್ ಹಾಸನ ತಾಲ್ಲೂಕು ಸಮಿತಿ ಸದಸ್ಯ ಜಯಪ್ರಕಾಶ ಪ್ರಾಸ್ತಾವಿಕ ಮಾತನಾಡಿದರು.ಮುಕ್ತಾ ಕಲಾಯುವತಿ ಮಂಡಳಿ ಕಾರ್ಯದರ್ಶಿ ವೇದಶ್ರೀ ಕಾರ್ಯಕ್ರಮ ನಿರೂಪಿಸಿದರು, ಎಸ್.ಆರ್.ಜಿ. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶಿವಣ್ಣ ಸ್ವಾಗತಿಸಿದರು. ಮಹಿಳಾ ಸಂಘಗಳ ಪ್ರತಿನಿಧಿ ಪದ್ಮಾಮಂಜುನಾಥ ಉಪಸ್ಥಿತರಿದ್ದರು. ಯುವತಿ ಮಂಡಳಿಯವರು ತಯಾರಿಸಿದ್ದ ಕರಕುಶಲ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry