ಗುರುವಾರ , ಅಕ್ಟೋಬರ್ 17, 2019
21 °C

ಅಪಾಯ ಆಹ್ವಾನಿಸುತ್ತಿರುವ ವಿದ್ಯುತ್ ಪರಿವರ್ತಕ

Published:
Updated:
ಅಪಾಯ ಆಹ್ವಾನಿಸುತ್ತಿರುವ ವಿದ್ಯುತ್ ಪರಿವರ್ತಕ

ಕೆಂಭಾವಿ: ಇಲ್ಲಿಗೆ ಸಮೀಪದ ರಾಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿರುವ ವಿದ್ಯುತ್ ಪರಿವರ್ತಕ ಅಪಾಯವನ್ನು ಆಹ್ವಾನಿಸುವಂತಿದೆ.ವಿದ್ಯಾರ್ಥಿಗಳು ಶಾಲೆಯ ಮೈದಾನದಲ್ಲಿ ಆಟವಾಡುತ್ತಿರುವಾಗ ನಿತ್ಯ ಇದರ ಸುತ್ತ ಓಡಾಡುವುದು ಸಹಜ, ಅಲ್ಲದೆ ಈ ವಿದ್ಯುತ್ ಪರಿವರ್ತಕವು ಮಕ್ಕಳ ಕೈಗೆಟಕುವಷ್ಟು ಕೆಳಗಡೆ ಇದ್ದು ಅಪಾಯವನ್ನು ಆಹ್ವಾನಿಸುತ್ತದೆ, ಶಾಲೆಯ ಕೋಣೆಗೆ ಅಂಟಿಕೊಂಡಂತಿರುವ ಈ ವಿದ್ಯುತ್ ಪರಿರ್ವತಕ್ಕೆ ಯಾವುದೇ ಬೇಲಿಯಾಗಲಿ, ಕಂಪೌಂಡಾಗಲಿ ಇಲ್ಲದೇ ಇರುವುದು ಇಲ್ಲಿನ ಶಿಕ್ಷಕರು ಹಾಗೂ ಪಾಲಕರಿಗೆ ನಿತ್ಯ ಚಿಂತೆ ಗೀಡುಮಾಡಿದೆ.ಜೆಸ್ಕಾಂ ಅಧಿಕಾರಿಗಳಿಗೆ ಶಾಲೆಯ ಮುಖ್ಯೋಪಾದ್ಯಾಯರು ಹಲವಾರು ಬಾರಿ ವಿದ್ಯುತ್ ಪರಿವರ್ತಕ ಸ್ಥಳಾಂತರಿಸುವಂತೆ ಮನವಿಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಮಕ್ಕಳನ್ನು ಎಷ್ಟು ಎಂದು ನೋಡಲು ಸಾಧ್ಯ, ಮಕ್ಕಳು ಆಟವಾಡುತ್ತಾ ನಿತ್ಯ ಹಲವಾರು ಬಾರಿ ಈ ಪರಿವರ್ತಕದ ಕಡೆ ಹೋಗುತ್ತಾರೆ, ಅದರಲ್ಲಿ ಕ್ರಿಕೆಟ್ ಆಡುವಾಗ ಬಾಲ್ ತರಲು ಹೋಗುದನ್ನು ನಾವೆ ನೋಡುತ್ತೇವೆ, ಮಕ್ಕಳನ್ನು ಆಟವಾಡ ಬೇಡಿ ಎಂದು ಹಿಡಿದಿಡಲು ಸಾಧ್ಯವೇ, ಶಾಲೆಯ ಶಿಕ್ಷಕರು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಇದುವರೆಗೂ ಯಾರೂ ಬಂದಿಲ್ಲ ಪಾಠದ ಜೊತೆ ನಮಗೆ ಇದೂ ಒಂದು ಕೆಲಸವಾಗಿ ಬಿಟ್ಟಿದೆ ಎಂದು ಶಿಕ್ಷಕಿಯೊಬ್ಬರು ತಮ್ಮ ನಿತ್ಯದ ತೊಂದರೆಯನ್ನು ಹೇಳಿಕೊಂಡರು.ಇದನ್ನೆಲ್ಲ ಗಮನಿಸಿದರೂ ಜೆಸ್ಕಾಂ ಅಧಿಕಾರಿಗಳು ತಮಗೇನು ಗೊತ್ತಿಲ್ಲದಂತೆ ವರ್ತಿಸುತ್ತಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.ಅಧಿಕಾರಿಗಳು ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದನ್ನು ಬಿಟ್ಟು ವಿದ್ಯುತ್ ಪರಿವರ್ತಕದ ಸ್ಥಳ ಬದಲಾಯಿಸಿ ಇಲ್ಲವೆ ಅದಕ್ಕೆ ಎತ್ತರದ ಕಂಪೌಂಡ್ ಗೋಡೆಕಟ್ಟಿ ಸುರಕ್ಷತೆಒದಗಿಸಿ ಎಂಬುವುದು ಶಾಲೆಯ ಶಿಕ್ಷಕ ವೃಂದ ಹಾಗೂ ಪಾಲಕರ ಮನವಿಯಾಗಿದೆ.

Post Comments (+)