ಭಾನುವಾರ, ಏಪ್ರಿಲ್ 18, 2021
29 °C

ಅಪಾಯ ಆಹ್ವಾನಿಸುವ ರಸ್ತೆ ವಿಭಜಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರುಮಠಕಲ್: ಪಟ್ಟಣದ ಹೊರವಲಯದ ಶಹಾಪುರ - ಹೈದರಾಬಾದ್‌ಹೆದ್ದಾರಿಯಲ್ಲಿ ನಿರ್ಮಿಸಿರುವ ರಸ್ತೆ ವಿಭಜಕಗಳಿಂದ ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ.ಮೌನೇಶ್ವರ ಕೈಗಾರಿಕಾ ತರಬೇತಿ ಕೇಂದ್ರದ ಹತ್ತಿರ ಸೋಮವಾರ ಬೆಳಗ್ಗಿನ ಜಾವ ಹೈದರಾಬಾದ್‌ನಿಂದ ಶಹಾಪುರಕ್ಕೆ ತೆರಳುತ್ತಿದ್ದ ಲಾರಿಯೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.ರಸ್ತೆ ವಿಸ್ತರಣೆ: ಶಹಾಪುರ ಹೈದರಾಬಾದ್ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಹಲವು ಅಪಘಾತಗಳು ನಡೆದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿ ಗುರುಮಠಕಲ್ ಪಟ್ಟಣ ಪಂಚಾಯಿತಿಯಿಂದ ಪಟ್ಟಣದ ಹೊರವಲಯದಲ್ಲಿ 500 ಮೀ. ರಸ್ತೆ  ವಿಸ್ತರಣೆ ಕಾಮಗಾರಿಗೆ 19 ಲಕ್ಷ ರೂ.ಗಳ ಟೆಂಡರ್ ಕರೆಯಲಾಗಿತ್ತು ಸ್ಥಳಿಯ ಗುತ್ತಿಗೆದಾರರೊಬ್ಬರು ಟೆಂಡರ್ ಪಡೆದು ಕಾಮಗಾರಿ ಪೂರ್ಣ ಗೊಳಿಸಿದ್ದರು. ವಿಸ್ತರಣೆ ಮಾಡಿದ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದರಿಂದ ಇನ್ನೊಮ್ಮೆ ತಾವೇ ಸ್ವತಃ ಕಾಮಗಾರಿಯನ್ನು ಮಾಡಿಸಿರುವುದಾಗಿ ಗುತ್ತಿಗೆ ದಾರರು ಹೇಳಿದ್ದರು.ಒಟ್ಟು 1 ಕಿ.ಮೀ. ರಸ್ತೆಯನ್ನು ವಿಸ್ತರಣೆ ಮಾಡಬೇಕಿತ್ತು ಆದರೆ ಆಗ 500 ಮೀ.ರಸ್ತೆ ಕಾಮಗಾರಿಯನ್ನು ಮಾಡಿದ್ದು ಉಳಿದ ಕಾಮಗಾರಿಯ ಟೆಂಡರನ್ನು ಲೋಕೋಪಯೋಗಿ ಇಲಾಖೆಗೆ  ನೀಡಲಾಗಿದೆ ಎಂದು ಹೇಳಿದರು.ಅವೈಜಾನಿಕ ರಸ್ತೆ ವಿಭಜಕಗಳು: ಹೆದ್ದಾರಿ ಕಾಮಗಾರಿ ಮುಗಿದು ಸುಮಾರು 4 ವರ್ಷ ಕಳೆದಿದ್ದು ಪಟ್ಟಣದಿಂದ ಹಾದು ಹೋಗುವ ಹೆದ್ದಾರಿಗೆ ಪಟ್ಟಣ ಪಂಚಾಯಿತಿ ಈಗ ರಸ್ತೆ ವಿಭಜಕಗಳನ್ನು ಅವೈಜಾನಿಕವಾಗಿ ನಿರ್ಮಿಸಿರುವುದರಿಂದ ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ತಕ್ತ ಪಡಿಸಿದ್ದಾರೆ.ಅಲ್ಲದೇ ರಸ್ತೆ ವಿಭಜಕಗಳಿಗೆ ವಾಹನಗಳು ಡಿಕ್ಕಿ ಹೊಡೆಯುವುದರಿಂದ ವಿಭಜಕಗಳು ಕೂಡ ಹಾಳಾಗುತ್ತಿವೆ.

ಬೆಳಗದ ಹೈಮಾಸ್ಟ್ ದೀಪಗಳು: ಸುಮಾರು 57 ಲಕ್ಷ ರೂಪಾಯಿ ವೆಚ್ಚದಲ್ಲಿ ಹಾಕಲಾಗಿರುವ ಹೈಮಾಸ್ಟ್ ದೀಪಗಳು ಸುಮಾರು 4 ವರ್ಷಗಳು ಕಳೆದರು ಇನ್ನು ಬೆಳಕು ನೀಡುತ್ತಿಲ್ಲ ಎಂದು ನಾಗರಿಕರು ಆರೋಪಿಸುತ್ತಾರೆ.

ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.