ಬುಧವಾರ, ಜೂನ್ 23, 2021
29 °C

ಅಪಾರ್ಟ್‌ಮೆಂಟ್ ನೆಲಸಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್: ತಾಲ್ಲೂಕಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಶಾಂತಿಪುರದ ವಿನಾಯಕ ನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿದ್ದ ಐದು ಅಂತಸ್ತಿನ ಅಪಾರ್ಟ್‌ಮೆಂಟ್ ವಾಲಿದ್ದು ಅದನ್ನು ನೆಲಸಮಗೊಳಿಸುವ ಕಾರ್ಯ ಮಂಗಳವಾರ ಸಂಜೆ ಆರಂಭವಾಯಿತು.

ಕಟ್ಟಡವನ್ನು ಇಟಾಚಿ ಮೂಲಕ ನೆಲಸಮಗೊಳಿಸುವ ಕಾರ್ಯ ಸಂಜೆ 6ಗಂಟೆಯ ವೇಳೆಗೆ ಪ್ರಾರಂಭವಾಗಿದ್ದು ಮೂರು ದಿನಗಳಲ್ಲಿ ಸಂಪೂರ್ಣ ನೆಲಸಮಗೊಳಿಸಲಾಗುವುದು ಎಂದು ಸಿವಿಲ್ ಎಂಜಿನಿಯರ್ ನಾಗೇಂದ್ರ ತಿಳಿಸಿದರು.

ಬೆಂಗಳೂರಿನ ವಿಜಯ್ ಎಂಬುವವರಿಗೆ ಸೇರಿದ ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ 16 ಮನೆಗಳನ್ನು ನಿರ್ಮಿಸಲಾಗಿತ್ತು. ಕಟ್ಟಡ ನಿರ್ಮಾಣದಲ್ಲಿ ತಾಂತ್ರಿಕ ದೋಷದಿಂದಾಗಿ ಕಟ್ಟಡವು 5ಅಡಿ ವಾಲಿದ್ದು ಯಾವ ಗಳಿಗೆಯಲ್ಲಾದರೂ ಸಹಾ ಉರುಳುವ ಸಂಭವವಿದೆ ಹಾಗಾಗಿ ಪಕ್ಕದ ಅಪಾರ್ಟ್‌ಮೆಂಟ್‌ನ 30ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ಆನೇಕಲ್ ತಹಶೀಲ್ದಾರ್ ಎಚ್.ಎನ್.ಶಿವೇಗೌಡ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.