ಭಾನುವಾರ, ಮೇ 9, 2021
26 °C

ಅಪಾರ ಪ್ರಮಾಣದಲ್ಲಿ ಅರಣ್ಯ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಾದ್ಯಂತ ವಿವಿಧ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಹಿಂದೆಂದೂ ಕಂಡರಿಯದಷ್ಟು ಪ್ರಮಾಣದಲ್ಲಿ ಅರಣ್ಯ ಸಂಪತ್ತು ಬರಿದಾಗಿದೆ.ಪರಿಸರ ಕಾಳಜಿಯನ್ನು ಲೆಕ್ಕಿಸದೇ ಉಷ್ಣ ವಿದ್ಯುತ್ ಸ್ಥಾವರ ಹಾಗೂ ಕಲ್ಲಿದ್ದಲು ಗಣಿಗಾರಿಕೆಗಳಿಗೆ ಲಕ್ಷೋಪಲಕ್ಷ ಹೆಕ್ಟೇರ್ ಭೂಮಿ ಮಂಜೂರಾತಿಗೆ ಕೇಂದ್ರವು ಪರಿಸರ ಅನುಮತಿ ನೀಡಿದೆ. ಅಲ್ಲದೇ  ನೀರಾವರಿ ಯೋಜನೆ ಅಡಿಯಲ್ಲಿ ಅಪಾರ ಪ್ರಮಾಣದ ನೀರನ್ನು ಇಂಧನ ಘಟಕ ಸ್ಥಾಪಿಸಲು ಬಳಸಿಕೊಳ್ಳಲಾಗುತ್ತಿದೆ.2007ರಿಂದ 2011ರ ಆಗಸ್ಟ್‌ವರೆಗೆ ಕೇಂದ್ರ ಪರಿಸರ ಸಚಿವಾಲಯವು 8284 ಯೋಜನೆಗಳಿಗೆ 2,03,576 ಹೆಕ್ಟೇರ್ ಅರಣ್ಯ ಭೂಮಿ ಮಂಜೂರಾತಿಗೆ ಪರಿಸರ ಅನುಮತಿ ನೀಡಿದೆ. 2009ರಲ್ಲಿಯೇ ಸರಿಸುಮಾರು 87,883.67 ಹೆಕ್ಟೇರ್ ಅರಣ್ಯ ಭೂಮಿಯನ್ನು ಕೈಗಾರಿಕಾ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ.ಸಚಿವಾಲಯವು 181 ಕಲ್ಲಿದ್ದಲು ಯೋಜನೆ, 267 ಉಷ್ಣ ವಿದ್ಯುತ್ ಸ್ಥಾವರಗಳು, 188 ಉಕ್ಕು  ಹಾಗೂ 106 ಸಿಮೆಂಟ್ ಕಾರ್ಖಾನೆಗಳಿಗೆ ಪರಿಸರ ಅನುಮತಿ ನೀಡಿದೆ. 2009ರ ಜೂನ್‌ನಿಂದ ಜೈರಾಂ ರಮೇಶ್ ಪರಿಸರ ಖಾತೆ ವಹಿಸಿಕೊಂಡಿದ್ದರು. ಅದಕ್ಕಿಂತ ಮುನ್ನ  ಪ್ರಧಾನಿ ಸಿಂಗ್ ಎರಡು ವರ್ಷಗಳವರೆಗೆ ಈ ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು.ಈ ಐದು ವರ್ಷಗಳಲ್ಲಿ ಸಿಮೆಂಟ್, ಕಲ್ಲಿದ್ದಲು ಗಣಿಗಾರಿಕೆ, ಕಬ್ಬಿಣ ಮತ್ತು ಉಕ್ಕು, ಉಷ್ಣ ವಿದ್ಯುತ್ ಸ್ಥಾವರ ಹಾಗೂ ಇತರ ಗಣಿಗಾರಿಕೆಗೆ ಪ್ರತಿ ವರ್ಷವೂ 8.3 ಶತಕೋಟಿ ಘನ ಮೀಟರ್ ನೀರು ಬಳಕೆಯಾಗಿದೆ. ಈ ಪ್ರಮಾಣ ಪ್ರತಿ ನಿತ್ಯವೂ 250 ದಶಲಕ್ಷ ಜನರಿಗೆ ಅಗತ್ಯವಿರುವ 100 ಲೀಟರ್ ನೀರಿಗೆ ಸಮನಾಗಿದೆ.ಅಲ್ಲದೆ ಈ ಅವಧಿಯಲ್ಲಿ ಈ ಮೇಲಿನ ಐದು ವಲಯಗಳಿಗೆ 3.8 ಲಕ್ಷ ಹೆಕ್ಟೇರ್ ಜಮೀನು ಮಂಜೂರು ಮಾಡಲಾಗಿದೆ ಎನ್ನುವ ಅಂಶವನ್ನು ಕೇಂದ್ರ ವಿಜ್ಞಾನ ಹಾಗೂ ಪರಿಸರ ಕೇಂದ್ರ ತಿಳಿಸಿದೆ.ಕಳೆದ ಐದು ವರ್ಷಗಳಲ್ಲಿ ಒಡಿಶಾದ ಮಹಾನಂದಿ ಹಾಗೂ ಅದರ ಉಪನದಿಗಳ ಸಮೀಪ 19,500 ಮೆಗಾವಾಟ್ ಸಾಮರ್ಥ್ಯದ 24 ಉಷ್ಣ ವಿದ್ಯುತ್ ಸ್ಥಾವರಗಳಿಗೆ ಅನುಮೋದನೆ ನೀಡಲಾಗಿದೆ.

ಈ ಯೋಜನೆಗಳಿಗೆ ಪ್ರತಿನಿತ್ಯವೂ ಒಟ್ಟು 1.55 ದಶಲಕ್ಷ ಘನ ಮೀಟರ್ ನೀರು ಬಳಕೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.