ಅಪೂರ್ವ ರಂಗಪ್ರವೇಶ

ಗುರುವಾರ , ಮೇ 23, 2019
31 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಅಪೂರ್ವ ರಂಗಪ್ರವೇಶ

Published:
Updated:

ನೃತ್ಯಾರ್ಪಣಾ ನೃತ್ಯಶಾಲೆ: ಗುರುವಾರ ಗುರು ಭವಾನಿ ರಾಮನಾಥ್ ಅವರ ಶಿಷ್ಯೆ ಅಪೂರ್ವ ಅವರಿಂದ ಭರತನಾಟ್ಯ ರಂಗಪ್ರವೇಶ.ನಟುವಾಂಗ: ಗುರು ಭವಾನಿ ರಾಮನಾಥ್. ಗಾಯನ: ವಿದುಷಿ ರೋಹಿಣಿ ಪ್ರಭುನಂದನ. ಮೃದಂಗ: ಲಿಂಗರಾಜು. ಕೊಳಲು:  ವೇಣುಗೋಪಾಲ್. ವಯಲಿನ್: ಸೋಮಣ್ಣ.ಡಾ. ಉದಯ ಶಂಕರ್ ಮತ್ತು ಅರುಣಾಕುಮಾರಿ ಅವರ ಪುತ್ರಿ ಅಪೂರ್ವ ಯುವ ಪ್ರತಿಭಾವಂತ ನೃತ್ಯ ಕಲಾವಿದೆ. 12 ವರ್ಷದವಳಿದ್ದಾಗ ನೃತ್ಯಾರ್ಪಣಾ ಶಾಲೆಯಲ್ಲಿ ಭರತನಾಟ್ಯ ಅಭ್ಯಾಸ ಆರಂಭಿಸಿದರು. ಹಿಮಾಂಶು ಜ್ಯೋತಿ ಕಲಾಪೀಠದಲ್ಲಿ ಓದಿ ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ.ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದು, ಕ್ರೀಡಾಪಟುವೂ ಹೌದು.

ಗುರು ಭವಾನಿ ರಾಮನಾಥ್ ಅವರು ಗುರು ಮುತ್ತಯ್ಯ ಪಿಳ್ಳೈ ಮತ್ತು ಕಿಟ್ಟಪ್ಪ ಪಿಳ್ಳೈ ಅವರ ಬಳಿ ಪಂಡನಲ್ಲೂರು ಶೈಲಿಯ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ.ದೂರದರ್ಶನ ಮತ್ತು ರಂಗಕ್ಕಾಗಿ ಹಲವು ನೃತ್ಯ ರೂಪಕಗಳನ್ನು ಸಂಯೋಜಿಸಿದ್ದಾರೆ. ಅವರ ರಚಿಸಿರುವ ಜಾವಳಿ ಮತ್ತು ಲಕ್ಷಣಗೀತೆಗಳು ಹಲವರಿಂದ ಮೆಚ್ಚುಗೆಗೆ ಪಾತ್ರವಾಗಿವೆ. ಹಲವು ನಾಟಕ, ಧಾರಾವಾಹಿ, ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

 

1987ರಲ್ಲಿ ನೃತ್ಯಾರ್ಪಣಾ ಶಾಲೆ ಸ್ಥಾಪಿಸಿ ತಮ್ಮ ಕಲೆಯನ್ನು ನೂರಾರು ಶಿಷ್ಯರಿಗೆ ಧಾರೆ ಎರೆದಿದ್ದಾರೆ.ಅತಿಥಿಗಳು: ಡಾ. ಡಿ. ಎಸ್. ಕಾಮತ್, ಎಚ್. ಎನ್. ಸುರೇಶ್.

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ  ಸಂಜೆ 6.15.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry