ಅಪೇಕ್ಷಿತ ತಾರೆಯರು

7
ಐಶ್ವರ್ಯಾ, ಕತ್ರಿನಾ

ಅಪೇಕ್ಷಿತ ತಾರೆಯರು

Published:
Updated:

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್, ಉತ್ತರದ ಜನತೆಯ ಮನ ಗೆದ್ದಂತೆ ಕಾಣುತ್ತಿದೆ. ತಾಜ್ ವೆಡ್ಡಿಂಗ್ ಬ್ಯಾರೋಮೀಟರ್‌ನ ಸಮೀಕ್ಷೆಯಲ್ಲಿ ಕತ್ರಿನಾ ಕೈಫ್ ಭಾರತೀಯ ಮದುವೆಗಳಲ್ಲಿ ‘ಅತ್ಯಂತ ಅಪೇಕ್ಷಿತ ತಾರೆ’ ಎಂಬುದು ಸಾಬೀತಾಗಿದೆ. ಸಮೀಕ್ಷೆ ಪ್ರಕಾರ ಶೇ.11ರಷ್ಟು ಮಂದಿ ಈಕೆಯನ್ನು ಸೆಲೆಬ್ರೆಟಿಯಾಗಿ ಆಯ್ಕೆಮಾಡಿದ್ದಾರೆ.

ಉತ್ತರ ಭಾರತದಲ್ಲಿ ಇವರ ಪರ ಹೆಚ್ಚು ಒಲವಿದೆ. ಕತ್ರಿನಾ ನಂತರದ ಸ್ಥಾನದಲ್ಲಿ ಐಶ್ವರ್ಯಾ ರೈ ಬಚ್ಚನ್ ಇದ್ದು, ಇವರು ಶೇ.9 ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಸಾಟಿಯಿಲ್ಲದ ಬ್ಯೂಟಿಗೆ ದಕ್ಷಿಣದ ಮಂದಿ ತಲೆದೂಗಿದ್ದಾರೆ. 1994ರಲ್ಲಿ ಮಿಸ್ ವರ್ಲ್ಡ್ ಆಗಿದ್ದ ಐಶ್ವರ್ಯ ರೈ, ಅವರ ಬುದ್ಧಿವಂತಿಕೆ ಮತ್ತು ಸೌಂದರ್ಯದಿಂದ ವಿಶ್ವದ ಮನ ಗೆದ್ದಿದ್ದಾರೆ.

ದಕ್ಷಿಣದಲ್ಲಿನ ಬಂಗಾರಕ್ಕಿಂತ ಕತ್ರಿನಾ ಅವರ ಪಂಜಾಬಿ ತಡ್ಕ ಮತ್ತು ಬಿಂದಾಸ್ ನಡತೆ ಉತ್ತರದ ಜನರ ಹೃದಯ ಗೆದ್ದಿದೆ. ತಾಜ್ ವೆಡ್ಡಿಂಗ್ ಬ್ಯಾರೋಮೀಟರ್ ಪ್ರಕಾರ ಯುವ ಜೋಡಿಗಳು ಮಹಿಳೆಯರಿಗಿಂತ ಪುರುಷ ತಾರೆಯರನ್ನು ಇಷ್ಟಪಡುತ್ತಿದ್ದಾರೆ. ಅವರು ಮದುವೆಯಲ್ಲಿ ಭಾಗಿಯಾಗುವುದನ್ನು ಬಯಸುತ್ತಾರೆ. ಶಾರೂಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮಿತಾಬ್‌ಬಚ್ಚನ್ ಅತ್ಯಂತ ಹೆಚ್ಚು ಜನಪ್ರಿಯರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry