ಅಪೌಷ್ಟಿಕತೆ ನಿವಾರಣೆ: ದಂಟಿನ ಬೀಜ ಬಳಸಿ
ದೊಡ್ಡಬಳ್ಳಾಪುರ: ಅಪೌಷ್ಟಿಕತೆ ನಿವಾರಣೆಗೆ ದಂಟಿನ ಬೀಜದ ಬಳಕೆ ಸಹ ಒಂದು ಉತ್ತಮ ಮಾರ್ಗ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮತ್ತು ಪೂರ್ಣ ಬಳಕೆಯಾಗಿರದ ಬೆಳೆಗಳ ವಿಭಾಗದ ಮುಖ್ಯಸ್ಥ ಡಾ.ನಿರಂಜನಮೂರ್ತಿ ಹೇಳಿದರು.
ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೆಂಗಳೂರು ಕೃಷಿ ವಿವಿಯ ಪೂರ್ಣ ಬಳಕೆಯಾಗಿರದ ಬೆಳೆಗಳ ವಿಭಾಗವು ರಾಷ್ಟ್ರೀಯ ಕೃಷಿ, ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ `ದಂಟಿನ ಬೀಜದ ಪೌಷ್ಟಿಕತೆ ಮತ್ತು ಮೌಲ್ಯವರ್ಧನೆ ಕುರಿತ~ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಂಟಿನ ಬೀಜವನ್ನು ನಿತ್ಯದ ಆಹಾರದ ಜೊತೆ ಪೌಷ್ಟಿಕಾಂಶವಾಗಿಯೂ ಬಳಸುವಂತೆ ಮಾಡಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕಾರ್ಯಕ್ರಮ ಆರಂಭಿಸಿದೆ. ನಮ್ಮ ದಿನನಿತ್ಯದ ಶೇಕಡ 60ರಷ್ಟು ಆಹಾರವನ್ನು ಭತ್ತ, ಗೋದಿ ಮತ್ತು ಮುಸುಕಿನ ಜೋಳದ ಬೆಳೆಗಳು ಪೂರೈಸುತ್ತಿವೆ. ಆದರೆ ಇವುಗಳಲ್ಲಿ ದೊರೆಯುವ ಪೌಷ್ಟಿಕಾಂಶ ದೇಹದ ಸರ್ವತೋಮುಖ ಬೆಳವಣಿಗೆಗೆ ಸಾಲದು.
ಈ ನಿಟ್ಟಿನಲ್ಲಿ ನಿತ್ಯದ ಆಹಾರ ಧಾನ್ಯಗಳ ಜೊತೆಯಲ್ಲಿ ಶೇಕಡ 10 ರಷ್ಟು ರಾಜಗಿರಿ ದಂಟಿನ ಬೀಜವನ್ನು ಬಳಕೆ ಮಾಡುವುದರಿಂದ ಉತ್ತಮ ಪೌಷ್ಟಿಕ ಆಹಾರ ಪಡೆಯಲು ಸಾಧ್ಯ ಎನ್ನುವುದು ಹಲವು ಪ್ರಯೋಗಗಳಿಂದ ದೃಢಪಟ್ಟಿದೆ ಎಂದು ಹೇಳಿದರು.
ತರಬೇತಿಯಲ್ಲಿ ರಾಷ್ಟೀಯ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ಕರ್ನಾಟಕ ಪ್ರಾದೇಶಿಕ ಕಚೇರಿಯ ಸಹಾಯಕ ವ್ಯವಸ್ಥಾಪಕರಾದ ಬೃಂದಾ, ಕೃಷಿ ವಿಶ್ವ ವಿದ್ಯಾನಿಲಯದ ಸಹ ಸಂಶೋಧನಾ ನಿರ್ದೇಶಕ ಡಾ.ಡಿ.ನೂತನ್, ಆಹಾರ ವಿಜ್ಞಾನ ತಜ್ಞೆ ಡಾ.ಎಸ್.ಸವಿತಾ, ಮಂಗನವಾರ್, ಡಾ.ಶಂಶದ್ ಬೇಗಂ, ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ಕೆ.ಎನ್.ಶ್ರೀನಿವಾಸಪ್ಪ, ಕೃಷಿ ವಿಶ್ವ ವಿದ್ಯಾನಿಲಯದ ವಿಜ್ಞಾನಿ ಡಾ.ಎಂ.ಎಲ್. ರೇವಣ್ಣ, ಬಿ.ಎಸ್.ಲಿಂಗಪ್ಪ, ಕೃಷಿ ಅಧಿಕಾರಿ ವಾಸಂತಿ ಬೆಂಗೇರಿ ಮತ್ತಿತರರು ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.