`ಅಪೌಷ್ಟಿಕತೆ ಸಮಾಜಕ್ಕೆ ಅವಮಾನ'

7

`ಅಪೌಷ್ಟಿಕತೆ ಸಮಾಜಕ್ಕೆ ಅವಮಾನ'

Published:
Updated:

ಹಾಸನ: `ಅಪೌಷ್ಟಿಕತೆಯಿಂದ ಮಕ್ಕಳು ಸಾಯುತ್ತಾರೆ ಎಂಬುದು ನಾಗರಿಕ ಸಮಾಜಕ್ಕೆ ಅವಮಾನದ ವಿಚಾರ. ಇದನ್ನು ಸಂಪೂರ್ಣವಾಗಿ ನಿವಾರಿಸಲು ದಿಟ್ಟ ಹೆಜ್ಜೆಗಳನ್ನು ಇಡಬೇಕು' ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಬಿ. ಚಂಗಪ್ಪ ಹೇಳಿದರು.ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಆಶ್ರಯದಲ್ಲಿ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ `ಅಪೌಷ್ಟಿಕತೆ ನಿಯಂತ್ರಣ' ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಅಪೌಷ್ಟಿಕತೆ ಭಾರತಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಹಲವು ದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಇದು ಕಾಣಿಸಿಕೊಂಡಿದೆ. ಈ ಸಮಸ್ಯೆ ನಿವಾರಣೆಗೆ ಸರ್ಕಾರ ಐದು ವರ್ಷಗಳ ಹಿಂದೆಯೇ ನಿರ್ಧಾರ ಕೈಗೊಂಡಿದೆ. ಆದರೂ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಲಭಿಸಿಲ್ಲ ಎಂದರು.ಈಗ ಅಪೌಷ್ಟಿಕತೆ ನಿಯಂತ್ರಿಸುವ ಹಂತದಲ್ಲಿ ನಾವಿದ್ದೇವೆ. ರಾಜ್ಯದ ಕೆಲವೆಡೆ ನವಜಾತ ಶಿಶುವನ್ನು ಕೆಲವು ದಿನಗಳ ಕಾಲ ತಾಯಿಯಿಂದ ದೂರ ಇಡುವ ಮೂಢ ಸಂಪ್ರದಾಯ ಜಾರಿಯಲ್ಲಿದೆ. ಶಿಕ್ಷಣದ ಕೊರತೆಯೇ ಇದಕ್ಕೆ ಕಾರಣ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಅಂಗನವಾಡಿ ಕಾರ್ಯಕರ್ತೆಯರು ನಿಸ್ವಾರ್ಥ ಸೇವೆ ಸಲ್ಲಿಸಬೇಕು' ಎಂದು ಸಲಹೆ ನೀಡಿದರು.ಜಿಲ್ಲೆಯಲ್ಲಿ ಡಿ.16ರ ವರೆಗೆ ಈ ಪ್ರಚಾರಾಂದೋಲನ ನಡೆಯಲಿದೆ. ವಿವಿಧ ಗ್ರಾಮಗಳಲ್ಲಿ ಬೀದಿನಾಟಕ, ಆರೋಗ್ಯ ತಪಾಸಣೆ ಮತ್ತಿತರ ಕಾರ್ಯಕ್ರಮ ಮ್ಮಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry