ಶನಿವಾರ, ಡಿಸೆಂಬರ್ 7, 2019
25 °C

ಅಪ್ಪನಾದ ಖುಷಿಯಲ್ಲಿ...

Published:
Updated:
ಅಪ್ಪನಾದ ಖುಷಿಯಲ್ಲಿ...

ನಡುಮನೆಯಲ್ಲಿ ದಿವಿನಾದ ಸೋಫಾ ಮೇಲೆ ಕುಳಿತ ಅಭಿಷೇಕ್ ಬಚ್ಚನ್ ಒಳಕೋಣೆಯಲ್ಲಿ ಕಂದಮ್ಮ ಅಳುವುದನ್ನು ಕೇಳಿಬಂದರೆ ದಿಢೀರನೆ ಎದ್ದು ಅತ್ತ ಸಾಗುತ್ತಾರೆ. ಅವರೀಗ ಅಪ್ಪನಾದ ಖುಷಿಯನ್ನು ಮನಃಪೂರ್ವಕವಾಗಿ ಅನುಭವಿಸುತ್ತಿದ್ದಾರೆ. ತಮ್ಮ ಬದುಕಿನ ಮಹತ್ವದ ಗಳಿಗೆ ಇದು ಎನ್ನುವ ಅವರು ಚಿತ್ರೀಕರಣವಿಲ್ಲದ ಎಲ್ಲಾ ಸಂದರ್ಭದಲ್ಲೂ ಈಗ ಮನೆಯಲ್ಲೇ ಉಳಿದುಬಿಡುತ್ತಾರೆ.ಪಾರ್ಟಿಯ ಸಹವಾಸ ಇಲ್ಲ. ಮುದ್ದಿನ ಮಡದಿ ಐಶ್ವರ್ಯಾ, ಇಷ್ಟದ `ಬಿಟಿಯಾ~ (ಮಗಳು) ಜೊತೆ ಇದ್ದಾಗ ಹೊತ್ತು ಹೋಗುವುದೇ ಗೊತ್ತಾಗಲ್ಲ ಎನ್ನುವ ಅಭಿಷೇಕ್‌ಗೆ ಒಂದು ವಿಷಯಕ್ಕೆ ಮಾತ್ರ ಸಿಟ್ಟು. ವನಿತೆಯರನ್ನು `ಸೆಕ್ಸಿ~ ಎಂದೆಲ್ಲಾ ಕರೆಯುವುದು ಅವರಿಗೆ ಇಷ್ಟವಿಲ್ಲವಂತೆ. ಯಾರಾದರೂ ಹಾಗೆಂದರೆ ನಖಶಿಖಾಂತ ಉರಿದು ಹೋಗುತ್ತದೆ ಎನ್ನುವ ಅವರು ಅದಾಗಲೇ ಎರಡು ತಿಂಗಳ ಮಗಳಿಗೆ ಒಂದಿಷ್ಟು ಬೊಂಬೆಗಳನ್ನೂ ಕೊಂಡು ತಂದಿದ್ದಾರೆ. 

ಪ್ರತಿಕ್ರಿಯಿಸಿ (+)