ಭಾನುವಾರ, ನವೆಂಬರ್ 17, 2019
29 °C

ಅಪ್ಪನಿಗೆ ಅಕ್ಕರೆಯ ಉಡುಗೊರೆ

Published:
Updated:

ಪ್ರತಿಯೊಬ್ಬರ ಜೀವನದಲ್ಲಿ ಅಪ್ಪನ ಪಾತ್ರ ಮಹತ್ತರವಾದುದು. ಇದೇ ಭಾನುವಾರ ಬರುವ ಫಾದರ್ಸ್ ಡೆಯಂದು ಪ್ರೀತಿ ಪಾತ್ರ ಮಕ್ಕಳು  ಏನಾದರೂ ವಿಶೇಷವಾದದ್ದನ್ನು ನೀಡಬೇಕು ಎಂದು ಹಂಬಲಿಸುವುದು ಸಹಜ. ಅದಕ್ಕಾಗಿ ಇಲ್ಲಿದೆ ವೈವಿಧ್ಯಮಯ ಸ್ಮರಣಿಕೆ.ಶೆರಟಾನ್ ಟ್ರೀಟ್

ಯಶವಂತಪುರದ ಬ್ರಿಗೇಡ್ ಗೇಟ್ ವೇಯಲ್ಲಿನ ಶೆರಟಾನ್ ಹೋಟೆಲ್‌ನಲ್ಲಿ ಭಾನುವಾರ ಮಧ್ಯಾಹ್ನ 12ರಿಂದ 4ರ ವರೆಗೆ ವಿಶೇಷ ಆಚರಣೆ . ಈ ಸಂದರ್ಭದಲ್ಲಿ ಅಪ್ಪನಿಗೆ ವಿಶೇಷ ಟ್ರೀಟ್ ನೀಡಬಹುದು. ಖುಷಿಯಿಂದ ಸಮಯ ಕಳೆಯಬಹುದು.ವಿಂಡ್ಸರ್‌ಗೆ ಫಾದರ್

ಸ್ಯಾಂಕಿ ರಸ್ತೆಯ ತಾರಾ ಹೋಟೆಲ್ ವಿಂಡ್ಸರ್ ಮ್ಯಾನರ್‌ನ ರಾಜ್ ಪೆವಿಲಿಯನ್‌ನಲ್ಲಿ ಮಕ್ಕಳು ಅಪ್ಪನಿಗೆ ಭಾನುವಾರ ಭೂರಿ ಭೋಜನದ ಟ್ರೀಟ್ ಕೊಡಿಸಬಹುದು. ಅದಕ್ಕಾಗಿ ಅದು ವಿಶೇಷ ಮೆನುಗಳನ್ನು ಸಿದ್ಧಪಡಿಸಿದೆ. ಇನ್ನೊಂದು ಆಕರ್ಷಣೆ ಎಂದರೆ ಅಪ್ಪನ ಊಟಕ್ಕೆ ಅರ್ಧ ದರ ಮಾತ್ರ. ಮಾಹಿತಿಗೆ: 2226 9898.ರಿಲಯನ್ಸ್ ಆಫರ್

ಅಪ್ಪನನ್ನು ಕರೆದುಕೊಂಡು ಹೋಗಿ ಬಗೆಬಗೆಯ ಉಡುಪು ಕೊಡಿಸುವ ಆಸೆ ಇದೆಯೇ? ಅಂಥವರಿಗಾಗಿ ರಿಲಯನ್ಸ್ ಟ್ರೆಂಡ್ಸ್ ಭಾನುವಾರ ಒಂದು ದಿನದ ಅತ್ಯಾಕರ್ಷಕ ಆಫರ್ ಪ್ರಕಟಿಸಿದೆ.ಇಲ್ಲಿ ಕನಿಷ್ಠ 1999 ರೂಪಾಯಿ ಮೊತ್ತದ ಉಡುಪುಗಳನ್ನು ಖರೀದಿಸಿದರೆ ಅಪ್ಪನ ವಯಸ್ಸಿನ ಹತ್ತು ಪಟ್ಟು ಮೊತ್ತದ ಉಚಿತ ಶಾಪಿಂಗ್ ಮಾಡಬಹುದು. ಅಂದರೆ ಅಪ್ಪನ ವಯಸ್ಸು 70 ಆಗಿದ್ದರೆ 700 ರೂ ಶಾಪಿಂಗ್ ಉಚಿತ.ಡಾಟೆಡ್

ಅಪ್ಪನಿಗೆ ಉಡುಗೊರೆ ನೀಡುವ ಮಕ್ಕಳ ಆಸೆ ಈಡೇರಿಸಲು ಡಾಟೆಡ್ ಪ್ರೀತಿಯ ಸಂದೇಶವನ್ನುಳ್ಳ ವಿಶೇಷ ವಿನ್ಯಾಸದ ಚಾಕೊಲೇಟ್ ಹಾಗೂ ಕೇಕ್, ಫಂಕಿ ಯುಎಸ್‌ಬಿ ಡ್ರೈವ್ಸ್ ಹೊರತಂದಿದೆ. ಮಾಹಿತಿಗೆ 4152 8753. ಅಂತರ್ಜಾಲ: ಡಿಡಿಡಿ.ಟಠಿಠಿಛಿಜಿ.ಜ್ಞಿಮ್ಯಾಕ್ಸ್

ಫ್ಯಾಷನ್ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಮ್ಯಾಕ್ಸ್‌ನಲ್ಲಿ ಕಾರ್ಗೋ ಶಾರ್ಟ್ಸ್, ಚಮತ್ಕಾರಿಕ ಕಲೆಯುಳ್ಳ ಹಾಗೂ ಉತ್ಕೃಷ್ಟ ಫೋಟೊ ಪ್ರಿಂಟ್ ಉಳ್ಳ ನಿಯಾನ್ ಕಲರ್‌ನ ಆಕರ್ಷಕ ವಸ್ತ್ರಗಳು ಇಂಟರ್‌ನ್ಯಾಷನಲ್ ರೇಂಜ್‌ನಲ್ಲಿ ಲಭ್ಯ.ರೂ.1500 ಹಾಗೂ ಅದಕ್ಕಿಂತ ಹೆಚ್ಚಿನ ಮ್ಯಾಕ್ಸ್ ಉತ್ಪನ್ನಗಳನ್ನು ಖರೀದಿಸಿದರೆ ರೂ. 500 ಬೆಲೆಯ ಗಿಫ್ಟ್ ವೋಚರ್ ದೊರೆಯುತ್ತದೆ. ಆದರೆ ಈ ಕೊಡುಗೆ ಕಮರ್ಶಿಯಲ್ ಸ್ಟ್ರೀಟ್, ಓಯಸಿಸ್ ಮಾಲ್, ಸಿಎಂಎಚ್ ರೋಡ್, ರಾಯಲ್ ಮೀನಾಕ್ಷಿ ಮಾಲ್, ಮಂತ್ರಿ ಮಾಲ್ ಮ್ಯಾಕ್ಸ್ ಸ್ಟೋರ್‌ಗಳಲ್ಲಿ ಜೂನ್ 19ರ ವರೆಗೆ ಮಾತ್ರ.ಬೆನ್‌ರಿಚ್

ಸ್ಕಾಟ್‌ಲ್ಯಾಂಡ್‌ನ ಅತ್ಯಂತ ಹಳೆಯದಾದ ವಿಸ್ಕಿ ಬ್ರ್ಯಾಂಡ್ ಬೆನ್‌ರಿಚ್ ಅಪ್ಪಂದಿರ ದಿನಕ್ಕಾಗಿ ಶೇ 10 ವಿಶೇಷ ರಿಯಾಯ್ತಿ ನೀಡುತ್ತಿದೆ. ನಗರದ ವಿವಿಧೆಡೆಯ ಡ್ರಾಪ್ಸ್ ಟೋಟಲ್ ಸ್ಪಿರಿಟ್‌ನಲ್ಲಿ ಈ ಕೊಡುಗೆ ಲಭ್ಯ.

ಟೈಟಾನ್ ವಾಚ್

ಪ್ರೀತಿ ಪಾತ್ರ ಅಪ್ಪನಿಗೆ ಉಡುಗೊರೆ ನೀಡುವ ಗೊಂದಲಕ್ಕೆ ಟೈಟಾನ್ ಗುಡ್‌ಬೈ ಹೇಳಿದೆ. ವಿಶೇಷ ವಾಚ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆಕರ್ಷಕ ವಿನ್ಯಾಸ, ಮನಸೆಳೆಯುವ ಡಿಸೈನ್‌ನಲ್ಲಿ ಲಭ್ಯವಿರುವ ಈ ಆಟೋಮ್ಯಾಟಿಕ್ ವಾಚ್‌ಗಳು ಉಡುಗೊರೆ ನೀಡಲು ಸೂಕ್ತ. ಎಲ್ಲ ಟೈಟಾನ್ ಮಳಿಗೆಗಳಲ್ಲಿ ಲಭ್ಯ.ಏರ್‌ಟೆಲ್ ಪ್ರಿಂಟ್

`ಎಕ್ಸ್‌ಪ್ರೆಸ್ ಯುವರ್‌ಸೆಲ್ಫ್~ ಎಂಬ ಕ್ಯಾಚಿ ಟ್ಯಾಗ್‌ಲೈನ್‌ನ ಏರ್‌ಟೆಲ್ ಮೊಬೈಲ್, ಮನಸ್ಸಿನ ಭಾವನೆಗಳಿಗೆ ಮತ್ತಷ್ಟು ಬಣ್ಣ ತುಂಬಿ, ರಸಮಯ ಕ್ಷಣಗಳನ್ನು ಚಿರಸ್ಥಾಯಿಯಾಗಿಸುವ ಕಾರ್ಯಕ್ಕೆ ಮುಂದಾಗಿದೆ.ಕಪ್‌ಗಳು, ಮಗ್‌ಗಳು, ಟೀ ಶರ್ಟ್‌ಗಳು, ಫೋಟೊ ಬುಕ್ಸ್, ಕ್ಯಾಲೆಂಡರ್ಸ್‌ ಹಾಗೂ ಫೋಟೊ ಪ್ರಿಂಟ್‌ಗಳ ಮೇಲೆ ಅಪ್ಪನ ಭಾವನೆಗಳು, ಚಿತ್ರಗಳನ್ನು ಮೂಡಿಸಬಹುದು. ಈ ಮೂಲಕ ಅಪ್ಪನ ಮುಖದಲ್ಲಿ ನಗು ಅರಳಿಸಬಹುದು.ಬುಲ್ಚಿ

ಬೆಲ್ಟ್‌ಗಳು, ಹ್ಯಾಂಡ್ ಬ್ಯಾಗ್ ತಯಾರಿಕೆಯಲ್ಲಿ ವಿಶ್ವ ಮಟ್ಟದಲ್ಲಿ ಹೆಸರಾದ ಬುಲ್ಚಿ ಅಪ್ಪಂದಿರ ದಿನದ ಅಂಗವಾಗಿ ವಿಶೇಷ ಚರ್ಮದ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಒಂದು ಕೊಂಡರೆ ಮತ್ತೊಂದು ಉಚಿತ ಕೊಡುಗೆ ನೀಡುತ್ತಿದೆ.ಐರಿಸ್ ಸುಗಂಧ

ಸುಗಂಧ ಬ್ರಾಂಡ್ `ಐರಿಸ್~ ರೀಡ್ ಡಿಫ್ಯುಸರನ್ನು ಕೊಂಡು ಅಪ್ಪನ ಕೋಣೆಯಲ್ಲಿಟ್ಟರೆ ಸಾಕು. ಅದು  24 ಗಂಟೆಗಳ ಕಾಲ ಸೂಸುವ ಸುಗಂಧಕ್ಕೆ ಅಪ್ಪ ಮನಸೋಲದಿದ್ದರೆ ಹೇಳಿ. ಬೂದಿ ಇಲ್ಲದ ಈ ರೀಡ್ ಡಿಫ್ಯುಸರ್ಸ್‌ ಸಿನ್ನಮನ್, ಗಂಧ, ಲೆಮನ್, ಗ್ರಾಸ್, ಬಾಸಿಲ್, ಮತ್ತು ಅಂಬರ್ ರೋಸ್ ಶ್ರೇಣಿಗಳಲ್ಲಿ ಪ್ರಮುಖ ಮಳಿಗೆಗಳಲ್ಲಿ ಲಭ್ಯ.ಡನ್‌ಹಿಲ್

ಪುರುಷರ ಬ್ರಾಂಡೆಡ್ ಉತ್ಪನ್ನಗಳಿಗೆ ಹೆಸರುವಾಸಿಯಾದ ಆಲ್‌ಫ್ರೆಡ್ ಡನ್‌ಹಿಲ್, ಅಪ್ಪನಿಗೆ ನೆನಪಿನ ಕಾಣಿಕೆಗಳ ಸರಣಿಯನ್ನೇ ಹೊರ ತಂದಿದೆ. ಕ್ರೀಡಾಭಿಮಾನಿ ಟಪ್ಪನಿಗೆ ಗಾಲ್ಫ್ ಕೇಸ್, ಸಂಚಾರದಲ್ಲಿ ಇರುವಾಗ ಮೊಬೈಲ್ ಚಾರ್ಜ್ ಮಾಡುವ ಟೆಕ್ ಟ್ರಾವೆಲರ್ ಇತ್ಯಾದಿ ಈ ಶ್ರೇಣಿಯಲ್ಲಿದೆ.ಬ್ಲಿಸ್ ಲಾಂಜ್

ಯುಬಿ ಸಿಟಿಯಲ್ಲಿನ ಬ್ಲಿಸ್ ಲಾಂಜ್ ಅಪ್ಪಂದಿರಿಗೆ ಸವಿಯಾದ ಉಡುಗೊರೆ ಕೊಡು ವಿವಿಧ ಬಗೆಯ ಚಾಕೋಲೆಟ್ ಹೊರತಂದಿದೆ. ಡೆಸೆರ್ಟ್ಸ್, ಪ್ರೀಮಿಯಮ್ ಯುರೋಪಿಯನ್ ಸ್ವೀಟ್‌ಗಳು, ತಂಪು ಪಾನೀಯ ಮೊದಲಾದವುಗಳು ಈ ಸವಿ ಹೆಚ್ಚಿಸಲಿವೆ.  

 

 

ಪ್ರತಿಕ್ರಿಯಿಸಿ (+)