ಅಪ್ಪನ ಹತ್ಯೆಯ ಸೇಡು ತೀರಿಸುವೆ: ಗಡ್ಡಾಫಿ ಪುತ್ರನ ಪ್ರತಿಜ್ಞೆ

7

ಅಪ್ಪನ ಹತ್ಯೆಯ ಸೇಡು ತೀರಿಸುವೆ: ಗಡ್ಡಾಫಿ ಪುತ್ರನ ಪ್ರತಿಜ್ಞೆ

Published:
Updated:

ಕೈರೋ (ಐಎಎನ್ ಎಸ್/ ಆರ್ ಐ ಎ ನೊವೊಸ್ತಿ): ರಾಷ್ಟ್ರೀಯ ಸಂಧಿಕಾಲ ಮಂಡಳಿ ಯೋಧರಿಂದ ಸಿರ್ಟೆಯಲ್ಲಿ ಹತರಾದ ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡ್ಡಾಫಿ ಅವರ ಪುತ್ರರಲ್ಲಿ ಒಬ್ಬರಾದ ಸೀಫ್ ಅಲ್- ಇಸ್ಲಾಂ ತಾನು ತನ್ನ ತಂದೆಯ ಹತ್ಯೆಯ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.ಸಿರಿಯಾ ಮೂಲದ ಗಡ್ಡಾಫಿ ಆಡಳಿತಕ್ಕೆ ನಿಷ್ಠವಾಗಿರುವ ಅಲರೈ ಟಿವಿ ವಾಹಿನಿಯಲ್ಲಿ ಶನಿವಾರ ರಾತ್ರಿ ಕಾಣಿಸಿಕೊಂಡ  ಅಲ್- ಇಸ್ಲಾಂ, ತಾನು ಜೀವಂತ ಇದ್ದು ಲಿಬಿಯಾದಲ್ಲಿಯೇ ಇರುವುದಾಗಿಯೂ, ಬಂಡಕೋರರ ವಿರುದ್ಧ ಭೀಕರ ಯುದ್ಧ ನಡೆಸಲಿರುವುದಾಗಿಯೂ ಘೋಷಿಸಿದ್ದಾರೆ.~ನಾವು ನಮ್ಮ ಪ್ರತಿರೋಧವನ್ನು ಮುಂದುವರೆಸಿದ್ದೇವೆ. ನಾನು ಲಿಬಿಯಾದಲ್ಲಿಯೇ ಇದ್ದೇನೆ. ಜೀವಂತವಾಗಿದ್ದೇನೆ, ಸ್ವತಂತ್ರನಾಗಿದ್ದೇನೆ ಮತ್ತು ಸೇಡು ತೀರಿಸಿಕೊಳ್ಳಲು ಕೊನೆಯವರೆಗೂ ಸಮರ ಮುಂದುವರೆಸಲು ಇಚ್ಛಿಸಿದ್ದೇನೆ~ ಎಂದು ಹೇಳಿದರು.ಇದಕ್ಕೆ ಮುನ್ನ ಗಡ್ಡಾಫಿ ಬೆಂಬಲಿಗರ ವೆಬ್ ಸೈಟ್ ಒಂದು ಕೂಡಾ ಸೀಫ್ ಅಲ್- ಇಸ್ಲಾಂ ಅವರನ್ನು ಲಿಬಿಯಾದ ಸರ್ವಾಧಿಕಾರಿಯ ಉತ್ತರಾಧಿಕಾರಿಯಾಗಿ ನೇಮಿಸಲಾಗಿದ್ದು ಅವರಿಗೆ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೇನಾ ಪಡೆಗಳ ಸೇನಾಧಿಪತ್ಯವನ್ನು ವಹಿಸಲಾಗಿದೆ ಎಂಬ ಹೇಳಿಕೆಯನ್ನು ಪ್ರಕಟಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry