ಶುಕ್ರವಾರ, ಮೇ 29, 2020
27 °C

ಅಪ್ಪು... ಇನ್ನಷ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪ್ಪು... ಇನ್ನಷ್ಟು

ಕೋಮಲ್ ಹೊಸ ಚಿತ್ರ ‘ವಾರೆವ್ಹಾ’ ಬಿಡುಗಡೆಯ ಹೊತ್ತಿಗೇ ‘ಅಪ್ಪು ಪಪ್ಪು’ ನೂರು ದಿನ ಪೂರೈಸಿದೆ. ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ಅದು ಪ್ರದರ್ಶನಗೊಂಡ ದಿನಗಳನ್ನು ಸೇರಿಸಿದರಷ್ಟೆ ನೂರು ದಿನ ಓಡಿದೆ ಎನ್ನಬಹುದು. ನಿರ್ಮಾಪಕ ಸೌಂದರ್ಯ ಜಗದೀಶ್ ಪ್ರಕಾರ ಬೆಂಗಳೂರಿನಲ್ಲೇ ಮೂರು ಲಕ್ಷ ಶಾಲಾ ಮಕ್ಕಳು ಈ ಚಿತ್ರವನ್ನು ನೋಡಿದ್ದಾರೆ. ಈ ಪ್ರತಿಕ್ರಿಯೆಯಿಂದ ಸ್ಫೂರ್ತಿ ಪಡೆದಿರುವ ಅವರು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳ ಭಾಷೆಗಳಲ್ಲೂ ‘ಅಪ್ಪು ಪಪ್ಪು’ವಿನ ಪ್ರತಿಚಿತ್ರಗಳನ್ನು ತೆಗೆಯಲು ಮುಂದಾಗಿದ್ದಾರೆ. ಶೇ 60ರಷ್ಟು ಮರು ಚಿತ್ರೀಕರಣದ ಅವಶ್ಯಕತೆ ಇದ್ದು, ರಾಮ್‌ನಾರಾಯಣ್ ಎಂಬುವರು ಈ ಯೋಜನೆಗೆ ಜೊತೆಗೂಡಿದ್ದಾರೆ. ಒಟ್ಟಿನಲ್ಲಿ ತಮ್ಮ ಮಗ ಮಾಸ್ಟರ್ ಸ್ನೇಹಿತ್‌ನನ್ನು ಎಷ್ಟು ಸಾಧ್ಯವೋ ಅಷ್ಟೂ ಮೇಲೆತ್ತುವುದು ಅವರ ಉದ್ದೇಶ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.