ಅಪ್ಪ ಅವ್ವ ನಮ್ಮ ದೈವ...

7

ಅಪ್ಪ ಅವ್ವ ನಮ್ಮ ದೈವ...

Published:
Updated:

ಹಿನ್ನೆಲೆ ಗಾಯಕಿ ಡಾ.ಶಮಿತಾ ಮಲ್ನಾಡ್ ಅವರ `ಸ್ವರಸನ್ನಿಧಿ ಟ್ರಸ್ಟ್' ವಿಶಿಷ್ಟವಾದ ಕಾರ್ಯಕ್ರಮವನ್ನು ಏರ್ಪಡಿಸಿದೆ. ಅದು `ಅಪ್ಪ ಅವ್ವ ನಮ್ಮ ದೈವ' ಎಂಬ, ಅಪ್ಪ-ಅಮ್ಮನಿಗೆ ಭಾವನಮನ ಸಲ್ಲಿಸುವ ಕಾರ್ಯಕ್ರಮ. ಗೀತ, ನೃತ್ಯ, ಚಿತ್ರ ಮತ್ತು ಭಾವನಮನ ವೈಭವ ಅಲ್ಲಿರುತ್ತದೆ. ಗುರುವಂದನೆ, ಮಾದರಿ ತಂದೆ ತಾಯಿ ಪ್ರಶಸ್ತಿ ಪ್ರದಾನ ಅದರ ಹೈಲೈಟ್.ಏ.23ರ ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 4.30ಕ್ಕೆ ವೃಂದಗಾನದೊಂದಿಗೆ ಚಾಲನೆ. ಸಾನಿಧ್ಯ ಆದಿಚುಂಚನಗಿರಿ ಮಠದ ವಿಜಯನಗರ ಶಾಖೆಯ ಸೌಮ್ಯನಾಥ ಸ್ವಾಮೀಜಿ ಅವರದು. ಅಧ್ಯಕ್ಷತೆ: ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣ ಗೌಡ. ವೆಬ್‌ಸೈಟ್ ಉದ್ಘಾಟನೆ: ಸಂಗೀತ ನಿರ್ದೇಶಕ ಗುರುಕಿರಣ್. ಚಿತ್ರ ನಿರ್ಮಾಪಕಿ ಮೀನಾ ತೂಗುದೀಪ ಅವರಿಗೆ `ಮಾದರಿ ತಾಯಿ' ಹಾಗೂ ನಿರ್ಮಾಪಕರಾದ ಅನಸೂಯ ಮತ್ತು ಮಂಜುನಾಥ ರಾವ್ ಅವರಿಗೆ ಮಾದರಿ ತಂದೆತಾಯಿ ಪ್ರಶಸ್ತಿ ಪ್ರದಾನ.ಸಂಜೆ 6ಕ್ಕೆ ಗೀತ ನೃತ್ಯ ಚಿತ್ರ ಭಾವನಮನ ವೈಭವದಲ್ಲಿ ಶಮಿತಾ ಮಲ್ನಾಡ್, ಚೇತನ್ ಸಾಸ್ಥ ನೇತೃತ್ವದಲ್ಲಿ ಕುಮಾರ್ ಗಂಗೋತ್ರಿ, ಮೋಹನ್, ಸಂತೋಷ್, ಆನಂದ ಮಾದಲಗೆರೆ, ಸಚಿನ್, ರವಿರಾಜ್, ಸಂತೋಷಿ ಮತ್ತು ಮಕ್ಕಳ ತಂಡದಿಂದ ಗಾಯನ. ಚಿತ್ರ ರಚನೆ- ಕಲಾವಿದ ಬಾಗೂರು ಮಾರ್ಕಂಡೇಯ.ನೃತ್ಯ ಪ್ರಸ್ತುತಿ-ವಿದುಷಿ ಯಮುನಾ ಶ್ರೀನಿಧಿ. ಹಾಸ್ಯ ನಿರೂಪಣೆ- ಮಿಮಿಕ್ರಿ ರಮೇಶ್‌ಬಾಬು. ಸೈ ರಮೇಶ್ ಸಿಜ್ಲರ್ಸ್‌ ಮತ್ತು ತಂಡ ಹಾಗೂ ಮಾರ್ಗದರ್ಶಿ ವಿಕಲಚೇತನ ಮಕ್ಕಳ ತಂಡದಿಂದ ನೃತ್ಯ. ಹಿಮ್ಮೇಳದಲ್ಲಿ ಸುಮಾರಾಣಿ (ಸಿತಾರ್), ಅಭಿಷೇಕ್ ಮತ್ತು ಹರ್ಷವರ್ಧನ್ (ಕೀಬೋರ್ಡ್), ಪ್ರವೀಣ್ (ರಿದಂಪ್ಯಾಡ್), ಜಯಚಂದ್ರ, ಅರುಣ್ (ತಬಲಾ), ಶಿವುಮಲ್ಲು (ವಿಶೇಷ ತಾಳವಾದ್ಯ) ಸಹಕಾರವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry