ಗುರುವಾರ , ಮೇ 26, 2022
23 °C

ಅಫಜಲಪುರ ಅಭಿವೃದ್ಧಿಗೆ ಮಾಜಿ ಶಾಸಕ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ:ಎಂ.ವೈ.ಪಾಟೀಲ ಅವರ ಶಾಸಕರ ಅವಧಿಯಲ್ಲಿ ನಾನು ಯಾವುದೆ ಆರೋಪ ಮಾಡಿಲ್ಲ ಆದರೂ ನಾನು ಸರಿಯಾಗಿ ಕೆಲಸ ಮಾಡುತ್ತಿದ್ದರೂ ಅವರ ಕಾರ್ಯಕರ್ತರು ಟೀಕೆ ಮಾಡುತ್ತಿದ್ದಾರೆ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಆರೋಪಿಸಿದರು.ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಸರ್ಕಾರಿ ಪಿಯು ಕಾಲೇಜ್ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು ಅಫಜಲಪುರ ಶಿರವಾಳ ರಸ್ತೆ ಸಂಪೂರ್ಣ ಹದಗೆಟ್ಟಿದೆ ಅದನ್ನು ದುರಸ್ತಿ ಮಾಡಿಸಿ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಪ್ರಕಾಶ ಜಮಾದಾರ ಹೇಳಿದ ಮಾತಿಗೆ    ತಾಲ್ಲೂಕಿನ ಅಭಿವೃದ್ಧಿಗೋಸ್ಕರ ಸಾಕಷ್ಟು ಯೋಜನೆಗಳು ಜಾರಿಗೊಳಿಸಿದ್ದರೂ ಅವುಗಳಿಗೆ ಅಡ್ಡಿಯಾಗುತ್ತಿದೆ. ಗುಲ್ಬರ್ಗ-ಹೊಸುರ ರಾಜ್ಯ ಹೆದ್ದಾರಿ ಆರಂಭವಾಗಿದೆ ಅದಕ್ಕೂ ಅಡ್ಡಿ ಮಾಡುತ್ತಿದ್ದಾರೆ. ಮೊನ್ನೆ ಉಡಚಾಣಕ್ಕೆ ಕಾರ್ಯಕ್ರಮವೊಂದಕ್ಕೆ ವಸತಿ ಸಚಿವ ಸೋಮಣ್ಣ ಬರುವದಾಗಿ ಪ್ರವಾಸ ಸೂಚಿ ಪ್ರಕಟವಾಗಿತ್ತು. ಅವರ ರೇಲ್ವೆ ಟಿಕೇಟ್ ಕೂಡ ಮಾಡಲಾಗಿತ್ತು.ಕೊನೆಯ ಘಳಿಗೆಯಲ್ಲಿ ಮುಖ್ಯಮಂತ್ರಿಗಳು ಬೇಡ ಎನ್ನತ್ತಾರೆಂದು ನೆಪ ಹೇಳಿದರೆಂದು ಅವರು ತಿಳಿಸಿದರು.

ಬಸ್ ಡಿಪೋ ನಿರ್ಮಾಣವಾಗಿ ಆರು ತಿಂಗಳು ಕಳೆದರೂ ಸಾರಿಗೆ ಸಚಿವ ಆರ್ ಅಶೋಕ ಅವರು ಎರಡು ಮೂರು ಬಾರಿ ಬರುವದಾಗಿ ಹೇಳಿ ಕೊನೆಗೆ ಬರಲಿಲ್ಲ. ಜನರ ತೊಂದರೆ ನಿವಾರಣೆಗಾಗಿ ಉದ್ಘಾಟನೆಯಿಲ್ಲದೆ ಬಸ್ ಓಡಿಸಲಾಯಿತು ಎಂದು ಅವರು ತಿಳಿಸಿದರು. ಈ ಹಿಂದೆ ಗುಲ್ಬರ್ಗ ಹೊಸುರ ರಸ್ತೆಗೆ 3 ಕೋಟಿ ರೂ. ಅನುದಾನ ಮಂಜೂರಾಗಿತ್ತು ಅದರಲ್ಲಿ ಮುಖ್ಯಮಂತ್ರಿಗಳು 2 ಕೋಟಿ ರೂ. ಘೋಷಣೆ ಮಾಡಿದ್ದಾರೆ ಇದು ಹೊಸದೆನಲ್ಲ ಎಂದು ಅವರು ಹೇಳಿದರು.ಕುಡಿಯುವ ನೀರಿಗೆ 5 ಕೋಟಿ ರೂ. ಮಾಶಾಳ ಗ್ರಾಮಕ್ಕೆ ವಿಶೇಷ ಅನುದಾನದಲ್ಲಿ 5.70 ಕೋಟಿ ರೂ. ವೆಚ್ಚದಲ್ಲಿ ಶಾಸ್ವತ ಹಾಗೂ ಶುದ್ಧ ಕುಡಿಯುವ ನೀರು ಯೋಜನೆಗೆ ಟೆಂಡರ್ ಕರೆಯಲಾಗುವುದು ಮಳೆ ಬರದಿದ್ದರೆ ದಸಾರ ಹಬ್ಬದ ನಂತರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.ಟಿಎಸಿ ಸಮಿತಿಗೆ ಬೊಮ್ಮಾಯಿ ಅಧ್ಯಕ್ಷ ಏಕೆ ? ಕರ್ನಾಟಕ ಇತಿಹಾಸದಲ್ಲಿಯೆ ಇದೆ ಮೊದಲ ಬಾರಿಗೆ ಟಿಎಸಿ ತಾಂತ್ರಿಕ ಸಲಹಾ ಮಂಡಳಿಗೆ ಬೊಮ್ಮಾಯಿ ಏಕೆ ಅಧ್ಯಕ್ಷರಾಗಬೇಕು ಸಾಮಾನ್ಯವಾಗಿ ಎಂಜನಿಯರ್‌ಗಳು ಅಧ್ಯಕ್ಷರಾಗಿರುತ್ತಾರೆ. ಇದೆಲ್ಲವು ಒಂದು ರೀತಿಯ ದುಡ್ಡು ಹೊಡೆಯುವ ಕೆಲಸವಾಗಿದೆಂದು ಅವರು ತಿಳಿಸಿದರು.ಜಿ.ಪಂ. ಸದಸ್ಯ ಪ್ರಕಾಶ ಜಮಾದಾರ ಅವರು ಜಿಲ್ಲಾ ಪಂಚಾಯತಿಯಿಂದ ಅಫಜಲಪುರ ತಾಲ್ಲೂಕಿಗೆ 18 ಶಾಲಾ ಕೋಣೆ ಮಂಜೂರು ಮಾಡಲಾಗಿದೆ. ಅದರಲ್ಲಿ 4 ಕೋಣೆಗಳು ಮಾಶಾಳ ಗ್ರಾಮಕ್ಕೆ ನೀಡಲಾಗಿದೆಂದು ಅವರು ತಿಳಿಸಿದರು.ತಾ.ಪಂ. ಅಧ್ಯಕ್ಷೆ ಕಾಶಿಬಾಯಿ ನಾಮಗೊಂಡ, ಗ್ರಾ.ಪಂ. ಅಧ್ಯಕ್ಷ ಖಾತನುಬಿ ಭಾಗವಾನ, ಉಪಾಧ್ಯಕ್ಷ ಭೀಮಾಶಂಕರ ಹೈದ್ರಾ ಮುಖಂಡರಾದ ಸಿದ್ಧು ಹಳಗೋಧಿ, ಬಸವಣ್ಣಪ್ಪ ಪಾಟೀಲ ಅಂಕಲಗಿ, ಶಿವು ಪಾರಗೊಂಡ, ಬಸಯ್ಯ ಹಿರೇಮಠ, ಶಿವುಪುತ್ರಪ್ಪ ಗೌಡಗಾಂವ, ಪ್ರಾಚಾರ್ಯ ಮಲ್ಲಿಕಾರ್ಜುನ ಗಂಜಿ, ವಿಶ್ವನಾಥ ರೇವೂರ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.