ಅಫಜಲಪುರ: ಕಾಂಗ್ರೆಸ್ ವೀಕ್ಷಕರಿಂದ ಅಭಿಪ್ರಾಯ ಸಂಗ್ರಹ

ಮಂಗಳವಾರ, ಜೂಲೈ 16, 2019
28 °C

ಅಫಜಲಪುರ: ಕಾಂಗ್ರೆಸ್ ವೀಕ್ಷಕರಿಂದ ಅಭಿಪ್ರಾಯ ಸಂಗ್ರಹ

Published:
Updated:

ಅಫಜಲಪುರ: ಅಫಜಲಪುರದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಗೆ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಕ್ಕೂ ಅಧಿಕ ಕಾರ್ಯಕರ್ತರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಫಜಲಪುರದ ಮತ ಕ್ಷೇತ್ರದ  ಅಭ್ಯರ್ಥಿಯಾಗಿ ಮಾಲೀಕಯ್ಯ ಗುತ್ತೇದಾರರನ್ನು ನಿಲ್ಲಿಸಬೇಕೆಂದು ವೀಕ್ಷಕರನ್ನು ಆಗ್ರಹಿಸಿದರು.ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶರಣಪ್ರಕಾಶ ಪಾಟೀಲ ಮಾತನಾಡಿ, `ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕಾಗಿದೆ~ ಎಂದರು.ವೀಕ್ಷಕರಾಗಿದ್ದ ಶೇಖ ಮಸ್ತಾನ ವಲಿ ಅವರು, ಒಬ್ಬೊಬ್ಬರನ್ನು ಕೋಣೆಗೆ ಕರೆಯಿಸಿ ಅಭಿಪ್ರಾಯ ಸಂಗ್ರಹಿಸಿದರು. ಅಫಜಲಪುರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಮತ್ತು ಪರ್ತಾಬಾದ ಬ್ಲಾಕ ಕಾಂಗ್ರೆಸ್ ವತಿಯಿಂದ ಮನವಿ ಸಲ್ಲಿಸಿದ ರೀತು ಗುತ್ತೇದಾರ ಹಾಗೂ ಪಾಶಾ ಮಣೂರ, ಶಾಸಕ ಮಾಲೀಕಯ್ಯ ಗುತ್ತೇದಾರ ಅವರನ್ನು ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ನಿಲ್ಲಿಸಬೇಕೆಂಬ ಮನವಿಯನ್ನು ವೀಕ್ಷಕರಿಗೆ ಸಲ್ಲಿಸಿದರು.ಸಭೆಯಲ್ಲಿ ಕಾಂಗ್ರೆಸ ಹಿರಿಯು ಮುಖಂಡರಾದ ರಜಾಕ್ ಪಟೇಲ, ಬಸವಣ್ಣಪ್ಪ ಪಾಟೀಲ ಅಂಕಲಗಿ, ಸಿದ್ದು ಹಳೆಗೋದಿ, ಶಿವಪುತ್ರಪ್ಪ ಸಂಗೋಳಗಿ, ಗುರುಬಾಳಪ್ಪ ಜಕಾಪುರೆ, ಗುರಣ್ಣ ಪಡಶೆಟ್ಟಿ, ಅಂಜು ಕುಲಕರ್ಣಿ, ಸಂತೋಷ ಪಾಟೀಲ, ಸಂಜು ನಿಂಬಾಳ, ಶಿವು ಪಾರಗೊಂಡ, ಮಲ್ಲಿನಾಥ ಪಾಟೀಲ, ತಾಲ್ಲೂಕು ಕಾಂಗ್ರಸ್ ಸಮಿತಿ ಅಧ್ಯಕ್ಷ ವಿಶ್ವನಾಥ ರೇವೂರ, ತಾ.ಪಂ ಸದಸ್ಯರಾದ ಶಿವಪುತ್ರಪ್ಪ ಗೌಡಂಗಾವ್, ಮಲ್ಲಿನಾಥ ಕುಂಬಾರ ಹಾಗೂ ಸಿದ್ದು ದಿಕ್ಸಂಗಿ, ಹಣುಮಂತರಾವ್ ಜವಳಿ, ಮಾಂತಪ್ಪ ಮುದಬಾಸ್ ಮುಂತಾದವರು ಭಾಗವಹಿಸಿದ್ದರು. ಮಾಂತೇಶ ಪಾಟೀಲ ಸ್ವಾಗತಿಸಿ, ವಂದಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry