ಗುರುವಾರ , ಮೇ 19, 2022
20 °C

ಅಫಜಲಪುರ: ಗಬ್ಬು ನಾರುತ್ತಿರುವ ಚರಂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ:  ಪಟ್ಟಣ ಪಂಚಾಯತಿ ವಿವಿಧ ವಾರ್ಡ್‌ಗಳಲ್ಲಿ ಮಲಿನ ನೀರು ಹರಿದು ಹೋಗಲು ಚರಂಡಿ ನಿರ್ಮಾಣ ಮಾಡಿದೆ. ಆದರೆ ಮಲಿನ ನೀರು ಹರಿದು ಹೋಗದೆ ಚರಂಡಿಯಲ್ಲಿಯೆ ನಿಲ್ಲುತ್ತಿರುವುದರಿಂದ ರೋಗಗಳು ಹರಡುವ ಭೀತಿ ಉಂಟಾಗಿದೆ.

ಪಟ್ಟಣ ಪಂಚಾಯಿತಿ ಚರಂಡಿ ಸ್ವಚ್ಛಗೊಳಿಸುವ ಸಿಬ್ಬಂದಿಗಳಿಗೆ ಕಳೆದ 2 ತಿಂಗಳಿಂದ ಸಂಬಳ ನೀಡದ ಕಾರಣ ಅವರು ಕೆಲಸಕ್ಕೆ ಬರುತ್ತಿಲ್ಲ .

ಹೀಗಾಗಿ 20 ವಾರ್ಡ್‌ಗಳ ಚರಂಡಿಗಳಲ್ಲಿ ನೀರು ತುಂಬಿಕೊಂಡು ರಸ್ತೆಯ ಮೇಲೆ ಹರಿಯುತ್ತಿದೆ ಎಂದು ಹೇಳಲಾಗುತ್ತಿದೆ. ವಾರ್ಡ್‌ಗಳಲ್ಲಿ ನಿರ್ಮಿಸಿರುವ ಚರಂಡಿಗಳಲ್ಲಿ ಮಲಿನ ನೀರು ಮುಂದೆ ಹರಿಯುವುದೇ ಇಲ್ಲ.ಪಟ್ಟಣ ಪಂಚಾಯತಿ 20 ವಾರ್ಡ್‌ಗಳ ಚರಂಡಿ ನೀರನ್ನು ಪಟ್ಟಣದ ಹೊರಗಡೆ ತಗ್ಗಿನಲ್ಲಿ ಸಂಸ್ಕರಿಸಿ ಅದನ್ನು ಕೃಷಿ ಬಳಕೆಗೆ ಅಥವಾ ನದಿಗೆ ಬಿಡುವ ವ್ಯವಸ್ಥೆ ಮಾಡಬೇಕಾಗಿದೆ. ಪಟ್ಟಣ ಪಂಚಾಯಿತಿ ಈ ಸಂಬಂಧ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪಟ್ಟಣದ ನಾಗರಿಕರು ಆರೋಪಿಸುತ್ತಾರೆ. ಚರಂಡಿ ನೀರು ಸುಗಮವಾಗಿ ಮುಂದೆ ಹರಿಯುವಂತೆ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ನಾಲ್ಕೈದು ವರ್ಷಗಳಿಂದ ಚರಂಡಿ ನೀರು ಹರಿದು ಹೋಗದೇ ಗಬ್ಬು ನಾರುತ್ತಿವೆ. ಜನರು ಮೂಗು ಮುಚ್ಚಿಕೊಂಡು ಸಂಚಾರ ಮಾಡುವಂತಾಗಿದೆ.ಮಳೆಗಾಲದಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿದು ನಲ್ಲಿ ನೀರಿನ ತಗ್ಗುಗಳಲ್ಲಿ ಸೇರುತ್ತಿದೆ. ಅಲ್ಲಿಯೇ ಸಂಗ್ರಹಿಸುವ ನೀರು ಕುಡಿಯುವ ಜನಕ್ಕೆ ವಿವಿಧ ರೋಗಗಳ ಬರುವ ಆತಂಕವಿದೆ ಎನ್ನಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.