ಶುಕ್ರವಾರ, ಮೇ 14, 2021
31 °C

ಅಫಜಲಪುರ: ನೀರಿಗಾಗಿ ಗ್ರಾಮಸ್ಥರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ: ತಾಲ್ಲೂಕಿನ ಹಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದ ಭೀಮಾ ನದಿಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿರುವುದರಿಂದ ಜನರು ಸಂಕಷ್ಟು ಅನುಭವಿಸುತ್ತಿದ್ದಾರೆ. ತೋಟದ ಬೆಳೆಗಳು ಸಂಪೂರ್ಣ ಒಣಗಲಾರಂಭಿಸಿವೆ.ನದಿಯಲ್ಲಿ ನೀರು ಖಾಲಿಯಾಗಿ ನಾಲ್ಕು ತಿಂಗಳಾಯಿತು. ಅಲ್ಲಲ್ಲಿ ಒರತೆ ತೆಗೆದು ಕೆಲವು ರೈತರು ಬೆಳೆಗಳ ಜೀವ ಕಾಪಾಡಿಕೊಂಡಿದ್ದರು. ಇದೀಗ ನದಿ ಸಂಪೂರ್ಣ ಬತ್ತಿರುವುದರಿಂದ 20 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಸೊನ್ನ ಭೀಮಾ ಬ್ಯಾರೇಜ್‌ನಿಂದ ಒಂದು ವಾರದ ಹಿಂದೆ ಜಾಕವೆಲ್‌ಗೆ ನೀರು ಪೂರೈಸಿದ್ದರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಷ್ಟ್ರದ ಉಜನಿ ಅಣೆಕಟ್ಟಿನಿಂದ ಭೀಮಾ ನದಿಗೆ ನೀರು ಬಿಡಿಸುವ ವ್ಯವಸ್ಥೆ ಮಾಡಬೇಕು ಎಂದು ಜೈಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಅವಟೆ ಮನವಿ ಮಾಡಿದ್ದಾರೆ.ಟ್ಯಾಂಕ್ ನೀರು ಪೂರೈಸಲು ಒತ್ತಾಯ: ತಾಲ್ಲೂಕು ಗಡಿಭಾಗದ ಮಾಶಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದ್ದು, ಗ್ರಾಮಸ್ಥರು ನೀರು ಪಡೆಯಲು ಪರದಾಡುತ್ತಿದ್ದಾರೆ! ಹೆಚ್ಚಿನ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಸರ್ಕಾರವು ಸಾಕಷ್ಟು ಕೊಳವೆ ಬಾವಿಗಳನ್ನು ಕೊರೆಸಿದೆ. ಅಂತರ್ಜಲ ಕುಸಿತದಿಂದಾಗಿ ಪ್ರತಿದಿನ ಒಂದೊಂದು ಕೊಳವೆಬಾವಿ ಸ್ಥಗಿತಗೊಳ್ಳುತ್ತಿರುವುದರಿಂದ ನೀರಿಗಾಗಿ ಇಡೀರಾತ್ರಿ ಕಾಯಬೇಕಾಗಿದೆ.ಸುಮಾರು 30 ಹಳೆ ತೆರೆದ ಬಾವಿಗಳಲ್ಲೂ ನೀರು ಖಾಲಿಯಾಗಿದೆ. ಹೀಗಾಗಿ ಎಲ್ಲರೂ ಕೊರೆದ ಬಾವಿಗಳ ಎದುರು ಸರದಿಯಲ್ಲಿ ಕಾಯುವಂತಾಗಿದೆ. ಗ್ರಾಮದಲ್ಲಿ ಈಗಾಗಲೇ ಆರಂಭವಾಗಿರುವ ಚೌಡೇಶ್ವರಿ ಜಾತ್ರೆ ಎರಡು ವಾರ ನಡೆಯುತ್ತದೆ.  ಹೀಗಾಗಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದವರು ಗ್ರಾಮಕ್ಕೆ 2 ಹೊತ್ತು ಟ್ಯಾಂಕ್ ಮೂಲಕ ಕುಡಿಯುವ ನೀರು ಪೊರೈಕೆ ಮಾಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೇವೂರ  ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.