ಅಫ್ಜಲ್ ಕ್ಷಮಾ ಅರ್ಜಿ ರಾಷ್ಟ್ರಪತಿಗೆ ಕಳಿಸಿಲ್ಲ

7

ಅಫ್ಜಲ್ ಕ್ಷಮಾ ಅರ್ಜಿ ರಾಷ್ಟ್ರಪತಿಗೆ ಕಳಿಸಿಲ್ಲ

Published:
Updated:

ನವದೆಹಲಿ (ಐಎಎನ್‌ಎಸ್): ಮರಣದಂಡನೆಗೆ ದಿನಗಣನೆ ಮಾಡುತ್ತಿರುವ ಉಗ್ರ ಅಫ್ಜಲ್ ಗುರುವಿಗೆ ಕ್ಷಮಾದಾನ ಕೋರಿ ಸಲ್ಲಿಸಿರುವ ಅರ್ಜಿಯನ್ನು ರಾಷ್ಟ್ರಪತಿಗೆ ಇನ್ನೂ ರವಾನಿಸಿಲ್ಲ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಬುಧವಾರ ತಿಳಿಸಿದರು.ರಾಜ್ಯಸಭೆಯಲ್ಲಿ ಬುಧವಾರ ಬಿಜೆಪಿ ಮುಖಂಡ ಎಸ್.ಎಸ್.ಅಹ್ಲುವಾಲಿಯಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಗೃಹ ಇಲಾಖೆಯ ವಶದಲ್ಲಿದ್ದ 25 ’ದಯೆ ಕೋರಿಕೆ ಅರ್ಜಿ’ಗಳಲ್ಲಿ 23ನ್ನು ರಾಷ್ಟ್ರಪತಿಗೆ ರವಾನಿಸಲಾಗಿದೆ.ಅಫ್ಜಲ್ ಗುರುವಿನ ಅರ್ಜಿಯ ಕ್ರಮಾಂಕ 18 ಆಗಿದ್ದರೂ, ಪ್ರಕರಣ ಪರಿಶೀಲನೆಯಲ್ಲಿರುವ ಕಾರಣಕ್ಕಾಗಿ ಅದನ್ನು ರವಾನಿಸಿಲ್ಲ ಎಂದರು.2001ರ ಡಿಸೆಂಬರ್ 13ರಂದು ಸಂಸತ್ ಭವನದ ಮೇಲೆ ನಡೆದ ದಾಳಿಯಲ್ಲಿ ಅಫ್ಜಲ್ ಗುರು ಪ್ರಮುಖ ಪಾತ್ರ ವಹಿಸಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry