ಅಫ್ಜಲ್ ಗುರು ಸುರಕ್ಷತಾ ವೆಚ್ಚ: ತಿಹಾರ್ ಜೈಲಿನಲ್ಲಿ ದಾಖಲೆ ಇಲ್ಲ!

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಅಫ್ಜಲ್ ಗುರು ಸುರಕ್ಷತಾ ವೆಚ್ಚ: ತಿಹಾರ್ ಜೈಲಿನಲ್ಲಿ ದಾಖಲೆ ಇಲ್ಲ!

Published:
Updated:

ನವದೆಹಲಿ (ಪಿಟಿಐ): ಸಂಸತ್ತಿನ ಮೇಲೆ ದಾಳಿ ನಡೆಸಿದ್ದಕ್ಕಾಗಿ ಮರಣದಂಡನೆಗೆ ಗುರಿಯಾಗಿರುವ ಮೊಹಮ್ಮದ್ ಅಫ್ಜಲ್ ಗುರುವಿನ ಸುರಕ್ಷತೆಗೆ ಖರ್ಚು ಮಾಡಿದ ವೆಚ್ಚದ ಬಗ್ಗೆ ತಿಹಾರ್ ಜೈಲಿನ ಅಧಿಕಾರಿಗಳು ಯಾವುದೇ ಲೆಕ್ಕಪತ್ರ ಇಟ್ಟಿಲ್ಲ ಎಂದು ತಿಳಿದು ಬಂದಿದೆ.ಜೈಲಿನ ಪ್ರತಿ ಕೈದಿಯ ಖರ್ಚಿನ ಬಗ್ಗೆ ಪ್ರತ್ಯೇಕವಾಗಿ ಲೆಕ್ಕ ಇಡುವ ಪದ್ಧತಿ ಇಲ್ಲ ಎಂದು ಜೈಲಿನ ಅಧಿಕಾರಿಗಳು ಮಾಹಿತಿ ಹಕ್ಕು ಕಾಯಿದೆಯಡಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.`ಪ್ರತಿ ಕೈದಿ ರಕ್ಷಣೆ, ಸುರಕ್ಷತೆ ಮತ್ತು ಆಹಾರದ ವೆಚ್ಚದ ಬಗ್ಗೆ ಪ್ರತ್ಯೇಕವಾಗಿ ದಾಖಲೆ ಇರುವುದಿಲ್ಲ~ ಎಂದು ತಿಹಾರ್ ಜೈಲಿನ, ಬಂದೀಖಾನೆ ಮಹಾನಿರ್ದೇಶಕರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.ಅಫ್ಜಲ್ ಗುರುವಿನ ರಕ್ಷಣೆ, ಸುರಕ್ಷತೆ ಮತ್ತು ಆಹಾರಕ್ಕಾಗಿ ಸರ್ಕಾರ ಈವರೆಗೆ ಎಷ್ಟು ವೆಚ್ಚ ಮಾಡಿದೆ ಎಂಬ ಮಾಹಿತಿ ಬಯಸಿ ಅಹಮದಾಬಾದ್ ಮೂಲದ ಎನ್‌ಜಿಒ ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟಿಸ್ ಆರ್‌ಟಿಐ ಅರ್ಜಿ ಸಲ್ಲಿಸಿತ್ತು.ಅರ್ಜಿ ಸಲ್ಲಿಸಿದ್ದ ಸರ್ಕಾರೇತರ ಸಂಸ್ಥೆಯ (ಎನ್‌ಜಿಒ) ಉಪಾಧ್ಯಕ್ಷ ಮುಖೇಶ್‌ಕುಮಾರ್ ಈಗ ಈ ಪ್ರತಿಕ್ರಿಯೆಯು `ತೃಪ್ತಿಕರವಾಗಿಲ್ಲ~ ಎಂದು ಇದರ ವಿರುದ್ಧ ಬಂದೀಖಾನೆ ಮಹಾನಿರ್ದೇಶಕರ ಕಚೇರಿಯಲ್ಲಿನ ಅಪೀಲು ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ.ಕುಖ್ಯಾತ ಅಪರಾಧಿಗಳ ಖರ್ಚು- ವೆಚ್ಚದ ಬಗ್ಗೆ ಪ್ರತಿ ಕಾರಾಗೃಹದಲ್ಲಿ ದಾಖಲೆಗಳನ್ನು ಇಡಲಾಗುತ್ತದೆ ಎಂದಿರುವ ಕುಮಾರ್ ಇದಕ್ಕೆ  ಮರಣದಂಡನೆಗೆ ಗುರಿಯಾಗಿರುವ ಪಾಕಿಸ್ತಾನದ ಉಗ್ರ ಕಸಾಬ್‌ನ ಖರ್ಚು ವೆಚ್ಚದ ಬಗ್ಗೆ ಮಹಾರಾಷ್ಟ್ರ ಸರ್ಕಾರ ದಾಖಲೆಗಳನ್ನು ಇಟ್ಟಿದೆ ಎಂದು ಉದಾಹರಿಸಿದ್ದಾರೆ.

 

ಕೇಂದ್ರ ಗೃಹ ಸಚಿವಾಲಯಕ್ಕೆ 2011ರ ಮೇ ತಿಂಗಳಲ್ಲಿ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆ ಲಭಿಸುವ ಮೊದಲು ಈ ಅರ್ಜಿಯು ಸರ್ಕಾರ ಮೂರು ಇಲಾಖೆಗಳಲ್ಲಿ ಹರಿದಾಡಿದೆ. ಕೇಂದ್ರ ಗೃಹ ಸಚಿವಾಲಯವು ಈ ಅರ್ಜಿಯನ್ನು ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಜೂನ್ 8ರಂದು ದೆಹಲಿ ಸರ್ಕಾರಕ್ಕೆ ಕಳುಹಿಸಿದೆ.

 

ದೆಹಲಿ ಸರ್ಕಾರ ಈ ವಿಷಯ ಗೃಹ ಇಲಾಖೆಗೆ ಬರುತ್ತದೆಂದು ಅಲ್ಲಿಗೆ ಕಳುಹಿಸಿದೆ. ಅಲ್ಲಿಂದ ಇದನ್ನು ತಿಹಾರ್ ಜೈಲಿನಲ್ಲಿರುವ ಬಂದೀಖಾನೆ ಮಹಾನಿರ್ದೇಶಕರ ಕಚೇರಿಗೆ ಕಳುಹಿಸಿತ್ತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry