ಬುಧವಾರ, ನವೆಂಬರ್ 13, 2019
18 °C

ಅಫ್ತಾಬ್‌ರ ಮಸ್ತಿ

Published:
Updated:

`ಪ್ಲೇಯರ್ಸ್‌', `1920 ಇವಿಲ್ ರಿಟರ್ನ್ಸ್' ಚಿತ್ರಗಳ ನಂತರ ಅಫ್ತಾಬ್ ಶಿವದಾಸಾನಿ ಅವರಿಗೆ ಅವಕಾಶಗಳಿರಲಿಲ್ಲ. ಇದೀಗ ಅರ್ಧಕ್ಕೆ ನಿಂತಿದ್ದ `ಗ್ರ್ಯಾಂಡ್‌ಮಸ್ತಿ' ಚಿತ್ರ ಆರಂಭವಾಗುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿಕೊಂಡಿದೆ.`ನನಗೆ ಅವಕಾಶಗಳೇ ಇಲ್ಲ. ಬಂದರೂ ಬಹುತಾರಾಗಣದ ಚಿತ್ರಗಳಲ್ಲಿ ಮಾತ್ರ ಅವಕಾಶ ಬರುತ್ತಿದೆ. ಇದೀಗ ಇಂದ್ರಕುಮಾರ್ ನಿರ್ದೇಶನದ  `ಗ್ರ್ಯಾಂಡ್‌ಮಸ್ತಿ'ಯಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ಖುಷಿಯಾಗುತ್ತಿದೆ.2004ರಲ್ಲಿ ತೆರೆ ಕಂಡಿದ್ದ `ಮಸ್ತಿ' ಚಿತ್ರದ ರೀಮೇಕ್ ಇದು. ವಿವೇಕ್ ಒಬೆರಾಯ್, ರಿತೇಶ್ ದೇಶಮುಖ್ ಅವರೊಂದಿಗೆ ನಾನು ಕಾಣಿಸಿಕೊಂಡಿದ್ದೆ. ಈಗಲೂ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದೆ. ಇನ್ನಾದರೂ ನನ್ನ ವೃತ್ತಿಬದುಕು ಏರುಗತಿಯಲ್ಲಿ ಸಾಗಬಹುದು' ಎಂದು ಅಫ್ತಾಬ್ ಹೇಳಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)