ಅಬಕಾರಿಯಿಂದ ಐಎಎಸ್‌ಗೆ ...

7

ಅಬಕಾರಿಯಿಂದ ಐಎಎಸ್‌ಗೆ ...

Published:
Updated:

ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾದ ರಾಜ್ಯದ ಪ್ರತಿಭೆಶ್ರೀನಿವಾಸಪುರ:
ಇಲ್ಲಿನ ಅಬಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ಜಿ.ಸತೀಶ್ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ 768ನೇ ರ‌್ಯಾಂಕ್ ಪಡೆದು ಆಯ್ಕೆಯಾಗಿದ್ದಾರೆ.ಮೂಲತಃ ಬೆಂಗಳೂರಿನವರಾದ ಇವರು ಬಿಇ ಮೆಕ್ಯಾನಿಕಲ್ ಪದವೀಧರ. ತಂದೆ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಗುರುಮೂರ್ತಿ, ತಾಯಿ ಶಂಕರಮ್ಮ. ಜಿ.ಸತೀಶ್ ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೊ ಮ್ಯಾನೇಜರ್ ಆಗಿಯೂ ಆಯ್ಕೆಯಾಗಿದ್ದರು. ಅಬಕಾರಿ ಇಲಾಖೆಯಲ್ಲಿ ಏಳು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.ಐಎಎಸ್ ಮಾಡಬೇಕೆಂಬ ತುಡಿತ ಓದುವ ದಿನಗಳಿಂದಲೂ ಇತ್ತು. ಅದಕ್ಕಾಗಿ ಇಷ್ಟಪಟ್ಟು ಓದಿದೆ. ತಂದೆ ತಾಯಿ ಆಶೀರ್ವಾದ, ಪತ್ನಿ ಬೆಂಬಲ ಹಾಗೂ ಸ್ನೇಹಿತರ ಸಹಕಾರದಿಂದ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯ ಲ್ಲಿ ಉತ್ತೀರ್ಣನಾಗಲು ಸಾಧ್ಯವಾಯಿತು ಎಂದು `ಪ್ರಜಾವಾಣಿ~ಗೆ ತಿಳಿಸಿದರು.ಪರೀಕ್ಷೆಗೆ ಸಾಮಾನ್ಯ ವಿಷಯಗಳ ಜೊತೆಗೆ ಕನ್ನಡ ಸಾಹಿತ್ಯವನ್ನು ಒಂದು ವಿಷಯವನ್ನಾಗಿ ತೆಗೆದುಕೊಂಡಿದ್ದ ಅವರು, ಕಷ್ಟಪಟ್ಟು ಓದುವುದರಿಂದ ಪ್ರಯೋಜನ ಆಗುವುದಿಲ್ಲ. ಸಾಧನೆ ಮಾಡಬೇಕಾದರೆ ಇಷ್ಟಪಟ್ಟು ಯೋಜನಾಬದ್ಧವಾಗಿ ಅಭ್ಯಾಸ ಮಾಡಬೇಕು. ಸತತ ಪರಿಶ್ರಮದಿಂದ ಮಾತ್ರ ಸಾಧನೆಯ ಹಾದಿ ಸುಲಭವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry