ಶನಿವಾರ, ಜೂನ್ 12, 2021
24 °C

ಅಬಕಾರಿಯಿಂದ ವೈನ್ ಮುಕ್ತಿ: ಕತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವೈನ್ ಅನ್ನು ಅಬಕಾರಿ ಇಲಾಖೆಯಿಂದ ಮುಕ್ತಗೊಳಿಸುವ ಮೂಲಕ ಉದ್ಯಮಕ್ಕೆ ಉತ್ತೇಜನ  ನೀಡಬೇಕು~ ಎಂದು ಕೃಷಿ ಸಚಿವ ಉಮೇಶ್ ಕತ್ತಿ ಹೇಳಿದರು.ರಾಜ್ಯ ಪಾನೀಯ ಮಂಡಳಿ ನಗರದ ಅರಮನೆ ಮೈದಾನದಲ್ಲಿ (ವೈಟ್‌ಪೆಟಲ್ಸ್) ಏರ್ಪಡಿಸಿರುವ ಮೂರು ದಿನಗಳ ಅಂತರರಾಷ್ಟ್ರೀಯ ವೈನ್ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.`ನೆರೆ ರಾಜ್ಯಗಳಲ್ಲಿ ಅಬಕಾರಿ ಇಲಾಖೆಯಿಂದ ವೈನ್ ಅನ್ನು ಮುಕ್ತಗೊಳಿಸಲಾಗಿದೆ. ವೈನ್‌ನಲ್ಲಿ ಶೇ14 ರಷ್ಟು ಹಾಲ್ಕೋಹಾಲ್ ಅಂಶ ಇದೆ ಎಂಬ ಕಾರಣಕ್ಕೆ ಅದನ್ನು  ಅಬಕಾರಿ ಇಲಾಖೆಯ ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗಿದೆ.ವೈನ್ ಉದ್ಯಮಕ್ಕೆ ಉತ್ತೇಜನ ನೀಡಲು ಇದನ್ನು ಮುಕ್ತಗೊಳಿಸುವ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರ ಜತೆಯೂ ಚರ್ಚಿಸಲಾಗುತ್ತದೆ~ ಎಂದು ಅವರು ಹೇಳಿದರು.`ರಾಜ್ಯದಲ್ಲಿ 20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಬೆಳೆಯಲಾಗುತ್ತಿದೆ. ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಅತ್ಯುತ್ತಮ   ದ್ರಾಕ್ಷಿ ಬೆಳೆಯ ಲಾಗುತ್ತಿದೆ. ರಾಜ್ಯದಲ್ಲಿ 14 ವೈನ್ ಉತ್ಪಾದನಾ ಘಟಕಗಳಿವೆ.ವಿದೇಶದಲ್ಲಿ ವೈನ್‌ಗೆ ಬೇಡಿಕೆ ಮತ್ತು ಹೆಚ್ಚು ಬೆಲೆ ಇದೆ. ಉತ್ಕೃಷ್ಟ ಗುಣಮಟ್ಟದ ದ್ರಾಕ್ಷಿ ಬೆಳೆದು ಅದನ್ನು ವಿದೇಶಕ್ಕೆ ರಫ್ತು ಮಾಡಬೇಕು. ಅತ್ಯುತ್ತಮವಾದ ವೈನ್ ತಯಾರಿಸಬೇಕು. ವಿಜಾಪುರದಲ್ಲಿ ವೈನ್ ಪಾರ್ಕ್ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು~ ಎಂದು ಅವರು ತಿಳಿಸಿದರು.ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, `ವೈನ್ ಉತ್ಪಾದನೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ವೈನ್ ಉತ್ಪಾದನೆ ಮಾಡಲು ಮೊದಲು ಐವತ್ತು ಸಾವಿರ ರೂಪಾಯಿ ಶುಲ್ಕ ಕಟ್ಟಬೇಕಾಗಿತ್ತು.ಈಗ ಇದನ್ನು ಒಂದು ಸಾವಿರ ರೂಪಾಯಿಗೆ ಇಳಿಸಲಾಗಿದೆ. ಆರೋಗ್ಯಕ್ಕೆ ಒಳ್ಳೆಯದಾಗಿರುವ ವೈನ್ ಬಳಕೆಯ ರೂಢಿ ಹೆಚ್ಚಾಗಬೇಕು~ ಎಂದು ಹೇಳಿದರು.ತೋಟಗಾರಿಕ ಸಚಿವ ಎಸ್.ಎ. ರವೀಂದ್ರನಾಥ್, `ವೈನ್ ಉತ್ಪಾದನೆ ಹೆಚ್ಚಿಸಿ ಹೊರ ದೇಶಕ್ಕೂರಫ್ತು ಮಾಡುವಂತಹ ವಾತಾವರಣ ನಿಮಾರ್ ಣವಾದರೆ ರೈತರಿಗೆ ಅನುಕೂಲವಾಗುತ್ತದೆ. ಜನರೂ ಸಹ ವೈನ್‌ಗೆ ಉತ್ತೇಜನ ನೀಡಬೇಕು~ ಎಂದು ಹೇಳಿದರು.ಪರಸ್ಪರ ಸಹಕಾರ ನೀಡುವುದಾಗಿ ವೈನ್ ಉತ್ಪಾದಕರು ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಂಡರು. ಸಚಿವ ರೇಣುಕಾಚಾರ್ಯ ಅವರು ವಿವಿಧ ವೈನ್ ಉದ್ಯಮಿಗಳೊಂದಿಗೆ ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡರು. ದೇಶ ಮತ್ತು ವಿದೇಶದ 38 ವೈನ್ ಉತ್ಪಾದಕರು ಈ ಉತ್ಸವದಲ್ಲಿ ಭಾಗವಹಿಸಿದ್ದರು.ಶಾಸಕ ರೋಷನ್ ಬೇಗ್ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೀರ್ ಹರಿಸಿಂಗ್, ತೋಟಗಾರಿಕಾ ಇಲಾಖೆ ಪ್ರಧಾನ ಕಾ ರ್ಯದರ್ಶಿ ವಂದಿತಾಶರ್ಮಾ, ನಿರ್ದೇಶಕಿ ಪಿ. ಹೇಮಲತಾ, ವೈನ್ ಬೋರ್ಡ್ ವ್ಯವಸ್ಥಾಪಕ ನಿರ್ದೇಶಕ ಕೆ.ಜಿ. ಸುರೇಶ ಚಂದ್ರನ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.