ಶನಿವಾರ, ಜೂನ್ 12, 2021
24 °C
ಕುಟುಂಬ ಸಹಿತ ಧರಣಿ ಯುವಕರಿಂದ ಎಚ್ಚರಿಕೆ

ಅಬಕಾರಿ ಅಧಿಕಾರಿಗಳಿಂದ ವಂಚನೆ: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಗಿರಿ: ಪರಿಶಿಷ್ಟ ವಿಭಾಗಕ್ಕೆ ಸೇರಿದ ಇಬ್ಬರು ನಿರುದ್ಯೋಗಿ ಯುವಕರು  ಅಬಕಾರಿ ಇಲಾಖೆಯಿಂದ ವಂಚನೆಗೆ ಒಳಗಾಗಿರುವುದಾಗಿ ದೂರಿದ್ದಾರೆ. ಸಮಸ್ಯೆ ಪರಿಹರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.ಪರಿಶಿಷ್ಟ ಜಾತಿಯ  ಮೋಚಿಗೇರ ಕಾಲೊನಿಯ ಚನ್ನಬಸವ ಸೂಡಿ, ಪರಿಶಿಷ್ಟ ಪಂಗಡ ವಾಲ್ಮೀಕಿ ನಾಯಕ ಸಮಾಜದ ನಾಗರಾಜ ನಾಯಕ ಅವರು ಕಳೆದ ವರ್ಷದ ಹಿಂದೆ ದ್ರಾಕ್ಷಿರಸ (ವೈನ್ ಟವರಿನ್) ಅಂಗಡಿ ತೆರೆಯಲು ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದರು. ಆದರೆ ಪರವಾನಗಿ ಲಭಿಸಿಲ್ಲ ಎಂಬುದು ಇವರ ಅಹವಾಲು.  ಅಬಕಾರಿ ಇಲಾಖೆ ಅಧಿಕಾರಿಗಳ ಸೂಚನೆ ಮೆರೆಗೆ ದ್ರಾಕ್ಷಿರಸ  ಅಂಗಡಿ ತೆರೆಯಲು ಸರ್ಕಾರದ ನೀತಿ ನಿಯಮಕ್ಕೆ ಅನುಗುಣವಾಗಿ  ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು ತಾಲ್ಲೂಕು, ಜಿಲ್ಲಾ ಮಟ್ಟದ ಅಬಕಾರಿ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದರು, ತಿಂಗಳ ಹಿಂದೆ ಜಿಲ್ಲಾ­ಧಿಕಾರಿ ಕೆ. ಪಿ. ಮೋಹನರಾಜ್ ಅವರು ಸಹ  ಎರಡು ನಿಯೋಜಿತ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿನ  ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದು­ಕೊಂಡಿದ್ದರೂ ಈಗ ಪರವಾನಗಿ ನೀಡುತ್ತಿಲ್ಲ, ಸತಾಯಿಸು­ತ್ತಿದ್ದಾರೆ ಎಂದು ನೊಂದ ಯುವಕರು ದೂರಿದ್ದಾರೆ.ಅಬಕಾರಿ ಅಂಗಡಿಗಳ ಲಾಬಿಗೆ ಮಣಿ­ದಿರುವ ಅಧಿಕಾರಿಗಳು ಅಂಗಡಿ ಮಂಜೂ­ರಾತಿಗೆ ಮೀನ ಮೇಷ ಎಣಿಸು­ತ್ತಿದ್ದು  ಆರಂಭ ಮಾಡುವ ಮುಂಚೆ ನೀಡಬೇಕಾಗಿದ್ದ ಮಾಹಿತಿ­ಯನ್ನು ಈಗ ನೀಡಿ ಸಂಕಷ್ಟಕ್ಕೆ ನೂಕಿದ್ದಾರೆ ಎಂದು ಅವರು ಅಳಲು ವ್ಯಕ್ತಪಡಿಸಿದ್ದಾರೆ.ಬಡ ಕುಟುಂಬದಿಂದ ಬಂದ ತಾವು­ಗಳು ಸಾಲ ಮಾಡಿ ಮಳಿಗೆ ಪಡೆದಿದ್ದು ಬಾಡಿಗೆ ಹಣ ಕಟ್ಟುತ್ತಿದ್ದೇವೆ,  ದ್ರಾಕ್ಷಿರಸ­ದಂಗಡಿಗಳಿಗೆ ಇರಬೇಕಾದ ನಿಯಮ­ಗಳು ಬ್ರ್ಯಾಂಡಿ (ವಿಸ್ಕಿ)  ಅಂಗಡಿಗಳಿಗೆ ಏಕೆ ಅನ್ವಯವಾಗುತ್ತಿಲ್ಲ ಎಂದು ಯುವ­ಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರೈತರ ಬೆಳೆಯಾದ ದ್ರಾಕ್ಷಿಯ  ವೈನ್ ಟವರಿನ್ ಶಾಪ್ ತೆರೆಯಲು ಸರ್ಕಾರ ಮಲತಾಯಿ ಧೋರಣೆ ಅನುಸರಿ­ಸುತ್ತಿದೆ ಎಂದು ಸೂಡಿ, ನಾಯಕ ಆರೋಪಿಸಿದರು.  ವೈನ್ ಶಾಪ್ ತೆಗೆಯಲು ಪರವಾನಗಿ ನೀಡದಿದ್ದರೆ ಕುಟುಂಬ ಸಮೇತ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಅವರು ಎಚ್ಚರಿಕೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.