ಶುಕ್ರವಾರ, ಜೂನ್ 25, 2021
27 °C

ಅಬಕಾರಿ ಅಧಿಕಾರಿಗೆ ಜಾಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಚೇರಿಯಲ್ಲಿ ಮದ್ಯ ದಾಸ್ತಾನು ಮಾಡಿಕೊಂಡಿದ್ದ ಆರೋಪದ ಮೇಲೆ ಬಂಧಿತರಾಗಿರುವ ಅಬಕಾರಿ ಇಲಾಖೆಯ ಪೂರ್ವ ವಿಭಾಗದ ಉಪಆಯುಕ್ತ ಎಲ್.ಎನ್.ಮೋಹನ್‌ಕುಮಾರ್ ಅವರಿಗೆ ಜಾಮೀನು ನೀಡಿ ಲೋಕಾಯುಕ್ತ ವಿಶೇಷ ಕೋರ್ಟ್ ಸೋಮವಾರ ಆದೇಶಿಸಿದೆ.ಒಂದು ಲಕ್ಷ ರೂಪಾಯಿಗಳ ಭದ್ರತೆ ನೀಡುವಂತೆ, ವಿಚಾರಣೆಗೆ ಹಾಜರು ಆಗುವಂತೆ ಹಾಗೂ ಸಾಕ್ಷ್ಯಾಧಾರಗಳನ್ನು ನಾಶಪಡಿಸದಂತೆ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಷರತ್ತು ವಿಧಿಸಿದ್ದಾರೆ.`ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ಬೇಡಿಕೆಯಂತೆ ವಿದೇಶಿ ಮದ್ಯದ ಬಾಟಲಿಗಳನ್ನು ತಂದು, ಕಚೇರಿಯಲ್ಲಿ ದಾಸ್ತಾನು ಮಾಡಲಾಗಿತ್ತು. ಮುಖ್ಯ ಅರೋಪಿ ರೇಣುಕಾಚಾರ್ಯ ಅವರನ್ನು ಬಂಧಿಸದೇ ಇರುವಾಗ, ಮೋಹನ್ ಅವರನ್ನು ಬಂಧಿಸಿರುವುದು ಸರಿಯಲ್ಲ~ ಎಂದು ಅವರ ಪರ ವಕೀಲರು ಮಾಡಿದ ವಾದವನ್ನು ನ್ಯಾಯಾಧೀಶರು ಪುರಸ್ಕರಿಸಿದರು. ಲೋಕಾಯುಕ್ತ ಪೊಲೀಸರು 22ರಂದು ಮೋಹನ್ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.