ಭಾನುವಾರ, ಮೇ 16, 2021
22 °C

ಅಬಕಾರಿ ಕಾಯ್ದೆಗೆ ಶೀಘ್ರ ತಿದ್ದುಪಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೀಟ್‌ರೂಟ್, ಟೊಮೆಟೊ, ಅನಾನಸ್ ಮತ್ತಿತರ ಹಣ್ಣು ತರಕಾರಿಗಳಿಂದ ಮದ್ಯ ತಯಾರಿಸಲು ಅನುಮತಿ ನೀಡುವ ಸಂಬಂಧ ಅಬಕಾರಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಬುಧವಾರ ಇಲ್ಲಿ ತಿಳಿಸಿದರು.ಬೀಟ್‌ರೂಟ್‌ನಿಂದ ಮದ್ಯ ತಯಾರಿಸಲು ರೇಣುಕಾ ಷುಗರ್ಸ್‌, ಗೋದಾವರಿ ಷುಗರ್ಸ್‌ನವರು ಮುಂದೆ ಬಂದಿದ್ದಾರೆ. ತಾಂತ್ರಿಕ ಸಮಿತಿಯೂ ಇದಕ್ಕೆ ಒಪ್ಪಿಗೆ ನೀಡಿದೆ. ಆದರೆ ಈಗಿರುವ ಕಾಯ್ದೆಯಲ್ಲಿ ಬೀಟ್‌ರೂಟ್‌ನಿಂದ ಮದ್ಯ ತಯಾರಿಸಲು ಅವಕಾಶ ಇಲ್ಲ.

ಆದ್ದರಿಂದ ಸಂಬಂಧಪಟ್ಟ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು. 1 ಟನ್ ಬೀಟ್‌ರೂಟ್‌ನಿಂದ 350 ಲೀಟರ್ ಮದ್ಯ ತಯಾರಿಸಬಹುದು. ಇದರಿಂದ ರೈತರಿಗೂ ಅನುಕೂಲ. ನಿವೃತ್ತ ಸೇನಾಧಿಕಾರಿಯೊಬ್ಬರು ಕೋಲಾರದಲ್ಲಿ ಟೊಮೆಟೊದಿಂದ ಮದ್ಯ ತಯಾರಿಸುತ್ತಿದ್ದಾರೆ.

ಅನಾನಸ್‌ನಿಂದ ಮದ್ಯ ತಯಾರಿಸಲು ಸೊರಬದಿಂದ ಪ್ರಸ್ತಾವ ಬಂದಿದೆ. ಹಣ್ಣು- ತರಕಾರಿಗಳಿಂದ ಮದ್ಯ ತಯಾರಿಸಲು ಅನುಮತಿ ನೀಡುವುದರಿಂದ ರೈತರಿಗೆ ಲಾಭವಾಗಲಿದೆ ಎಂದರು.500 ಲೀಟರ್ ಮದ್ಯ ತಯಾರಿಸುವ ಸಣ್ಣ ಘಟಕ ಸ್ಥಾಪಿಸಲು ಚಾನ್ಸರಿ ಹೋಟೆಲ್‌ನವರಿಗೆ ಅನುಮತಿ ನೀಡಲಾಗಿದೆ. ಇದೇ ರೀತಿ ಇನ್ನೂ ಎರಡು ಪ್ರಸ್ತಾವಗಳು ಬಂದಿದ್ದು, ನಿಯಮಾವಳಿ ಪ್ರಕಾರ ಇದ್ದರೆ ಅನುಮತಿ ನೀಡಲಾಗುವುದು ಎಂದು ಹೇಳಿದರು.

ಈ ವರ್ಷ 9,200 ಕೋಟಿ ರೂಪಾಯಿ ಅಬಕಾರಿ ತೆರಿಗೆ ಸಂಗ್ರಹಿಸುವ ಗುರಿ ಇತ್ತು. ಅದನ್ನು ಮೀರಿ ಅಂದರೆ 9,500 ಕೋಟಿ ರೂಪಾಯಿ ಸಂಗ್ರಹವಾಗುವ ನಿರೀಕ್ಷೆ ಇದೆ. ಈಗಾಗಲೇ 4,061 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 670 ಕೋಟಿ ರೂಪಾಯಿ ಹೆಚ್ಚಿಗೆ ಸಂಗ್ರಹವಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.