ಶುಕ್ರವಾರ, ನವೆಂಬರ್ 15, 2019
26 °C

ಅಬಕಾರಿ ದಾಳಿ: ರೂ1.23 ಲಕ್ಷ ಮೌಲ್ಯದ ಮದ್ಯ ವಶ

Published:
Updated:

ವಿಜಾಪುರ: ತಳೇವಾಡ ಹಾಗೂ ಇಟ್ಟಂಗಿಹಾಳ ಗ್ರಾಮದಲ್ಲಿ ಪ್ರತ್ಯೇಕ ದಾಳಿ ನಡೆಸಿ ಅಂದಾಜು ರೂ1.23ಲಕ್ಷ  ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆಯವರು ತಿಳಿಸಿದ್ದಾರೆ.ಬೈಕ್ ಮೇಲೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಟ್ಟಂಗಿಹಾಳ ಗ್ರಾಮದ ಸುನೀಲ್ ತುಕಾರಾಮ ರಾಠೋಡ (22), ದಾವಲಸಾಬ ಹುಸೇನಸಾಬ ಶೇಖ (58) ಎಂಬವರನ್ನು ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳದವರು ಬಂಧಿಸಿದ್ದಾರೆ.ಬಸವನ ಬಾಗೇವಾಡಿ ತಾಲ್ಲೂಕಿನ ತಳೇವಾಡ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ರೂ 20,000 ಮೌಲ್ಯದ ಕಳ್ಳಭಟ್ಟಿ ಸಾಗಿಸುತ್ತಿದ್ದಾಗ ಜಪ್ತಿ ಮಾಡಿಲಾಗಿದೆ. ಇದೇ ರಸ್ತೆಯಲ್ಲಿ ಕಲ್ಯಾಣಿ ಶಂಕರ ಬರಡೋಲ, ಸಿದ್ದಪ್ಪ ಗುರಪ್ಪ ಕೋಟ್ಯಾಳ ಎಂಬವರನ್ನು ಬಂಧಿಸಿ ರೂ 50,000 ಮೌಲ್ಯದ ಅಕ್ರಮ ಮದ್ಯ ವಶ ಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆಯ ಪ್ರಕಟಣೆ ತಿಳಿಸಿದೆ.ವಿಜಾಪುರ ತಾಲ್ಲೂಕಿನ ಗೊಣಸಗಿ ಗ್ರಾಮದ ಬಳಿ ಬೈಕ್‌ನಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಜತ್ತ ತಾಲ್ಲೂಕು ಕಾಗನರಿ ಗ್ರಾಮದ ಸಾಯಬಣ್ಣ ಬಸಪ್ಪ ಕಮತಗಿ ಎಂಬುವನನ್ನು ಬಂಧಿಸಲಾಗಿದೆ ಎಂದು ಅಬಕಾರಿ ಇಲಾಖೆಯವರು ತಿಳಿಸಿದ್ದಾರೆ.ಬೈಕ್ ಕಳುವು: ತಾಳಿಕೋಟೆ ವಿದ್ಯಾ ನಗರದ ತಮ್ಮ ಮನೆ ಎದುರು ನಿಲ್ಲಿಸಿದ್ದ ಬೈಕ್ ಕಳ್ಳತನ ವಾಗಿದೆ ಎಂದು ನಾಗೇಶ ಕಾಶೀನಾಥ ರಂಗರೇಜ ಎಂಬುವರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಾಲಕ ಸಾವು: ಕುರಿ ಕಾಯುತ್ತಿದ್ದ ಅಮಸಿದ್ದ ವಿಠ್ಠಲ ನಂದರಗಿ (6) ಎಂಬ ಬಾಲಕ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಇಂಡಿ ತಾಲ್ಲೂಕಿನ ಝಳಕಿ ಗ್ರಾಮದಲ್ಲಿ ಭಾನುವಾರ ನಡೆದಿದೆ ಎಂದ ಪೊಲೀಸರು ಹೇಳಿದ್ದಾರೆ. ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೆಜೆಪಿ ಅಭ್ಯರ್ಥಿ ಬಂಧನ

ಬೆಳಗಾವಿ: ಜಮಖಂಡಿ ತಾಲ್ಲೂಕಿನ ತೇರದಾಳ ಪಟ್ಟಣ ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ 2010ರಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ತೇರದಾಳ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಬಸವರಾಜ ಬಾಳಿಕಾಯಿ ಅವರನ್ನು ಭಾನುವಾರ ಸವದತ್ತಿ ಪೊಲೀಸರು ಬಂಧಿಸಿದ್ದಾರೆ.ತೇರದಾಳ ಪಟ್ಟಣ ಪಂಚಾಯ್ತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ  ಚುನಾವಣೆಯ ಹಿನ್ನೆಲೆಯಲ್ಲಿ ಸದಸ್ಯರನ್ನು ಅಪಹರಿಸಿ ಗುಂಪೊಂದು ಸವದತ್ತಿಗೆ ತಂದಿತ್ತು. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಬಸವರಾಜ ಬಾಳಿಕಾಯಿ ಪಟ್ಟಣ ಪಂಚಾಯ್ತಿ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ಥಳೀಯ ನ್ಯಾಯಾಲಯ ವಾರಂಟ್ ಜಾರಿ ಮಾಡಿದ್ದರೂ ಬಾಳಿಕಾಯಿ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಭಾನುವಾರ ಸವದತ್ತಿ ಪೊಲೀಸರು ಬಾಳಿಕಾಯಿ ಬಂಧಿಸಿದ್ದಾರೆ.

ಪ್ರತಿಕ್ರಿಯಿಸಿ (+)