ಅಬಾಕಸ್ ಪೋರರು

7

ಅಬಾಕಸ್ ಪೋರರು

Published:
Updated:
ಅಬಾಕಸ್ ಪೋರರು

ಮಲೇಷಿಯದ ಕ್ವಾಲಾಲಂಪುರದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಅಬಾಕಸ್ ಮತ್ತು ಬ್ರೈನ್ ಜಿಮ್ ಸ್ಪರ್ಧೆಯಲ್ಲಿ ಬೆಂಗಳೂರಿನ ಇಬ್ಬರು ಮಕ್ಕಳಿಗೆ ಪ್ರಶಸ್ತಿ ಲಭಿಸಿದೆ.8-10 ವರ್ಷದ ಮಕ್ಕಳ ವಿಭಾಗದಲ್ಲಿ ಎಸ್‌ಐಪಿ (ಸೊಷಿಯೇಬಲ್ ಇಂಟೆಲೆಕ್ಚುವಲ್ ಪ್ರೊಗ್ರೆಸಿವ್) ಬನಶಂಕರಿ ಶಾಖೆಯಿಂದ ಸ್ಪರ್ಧಿಸಿದ್ದ ಕೆ ಖುಷಿ (2ನೇ ಲೆವೆಲ್‌ನಲ್ಲಿರನ್ನರ್ ಅಪ್) ಮತ್ತು ಕೆ. ಅನ್‌ಮೊಲ್ (ಗ್ರಾಂಡ್ ಮಾಸ್ಟರ್ ಮಟ್ಟದಲ್ಲಿ3 ನೇ ರನ್ನರ್ ಅಪ್) ಪ್ರಶಸ್ತಿಗೆ ಪಾತ್ರರಾದರು.ಒಟ್ಟು 8 ಹಂತಗಳು ಹಾಗೂ 3ಗ್ರಾಂಡ್ ಮಾಸ್ಟರ್ ಹಂತದಲ್ಲಿ ಸ್ಪರ್ಧೆ ನಡೆದಿತ್ತು. ಮಕ್ಕಳ ಮೆದುಳಿಗೆ ಕಸರತ್ತು ನೀಡುವ ಸ್ಪರ್ಧೆ ಇದಾಗಿತ್ತು. ಲೆಕ್ಕಾಚಾರದ ಕಸರತ್ತು ಇಲ್ಲಿತ್ತು. ನಾನಾ ಬಗೆಯ ಲೆಕ್ಕಗಳನ್ನು ಸ್ಪರ್ಧಿಗಳು ಅತ್ಯಂತ ಕಡಿಮೆ ಸಮಯದಲ್ಲಿ ಬಿಡಿಸಬೇಕಿತ್ತು.`ಈ ಸ್ಪರ್ಧೆ ಮಕ್ಕಳ ಕೌಶಲ್ಯ ಬೆಳವಣಿಗೆಗೆ, ಗಣಿತ ಹಾಗೂ ಅಂಕಿಸಂಖ್ಯೆಗಳ ಭಯದಿಂದ ಮುಕ್ತಗೊಳಿಸಲು ಸಹಕಾರಿ~ ಎನ್ನುತ್ತಾರೆ ಬನಶಂಕರಿ ಶಾಖೆಯ ಮುಖ್ಯ ಸಲಹೆಗಾರ ರಮೇಶ್ ಶಿರ್ಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry