ಅಬಾಕಸ್ ಸ್ಪರ್ಧೆ: ಬಹುಮಾನ ವಿತರಣೆ

7

ಅಬಾಕಸ್ ಸ್ಪರ್ಧೆ: ಬಹುಮಾನ ವಿತರಣೆ

Published:
Updated:

ಬೆಂಗಳೂರು: ಕಿಡ್ಸ್ ಎನ್ ಬ್ರೈನ್ಸ್ ಸಂಸ್ಥೆಯು ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗರದ ಎಡಿಎ ರಂಗಮಂದಿರದಲ್ಲಿ ಇತ್ತೀಚೆಗೆ ಬಹುಮಾನ ವಿತರಿಸಲಾಯಿತು.ಸಂಸ್ಥೆಯು ಮೊದಲ ಬಾರಿಗೆ ರಾಜ್ಯದಲ್ಲಿ ಆಯೋಜಿಸಿದ್ದ ಅಬಾಕಸ್ ಸ್ಪರ್ಧೆಯಲ್ಲಿ 5ರಿಂದ 15 ವರ್ಷ ವಯೋಮಾನದ ಸುಮಾರು 700 ಮಕ್ಕಳು ಪಾಲ್ಗೊಂಡಿದ್ದರು. ಇದೇ ವೇಳೆ ಹ್ಯಾಂಡ್ ರೈಟಿಂಗ್, ಕ್ಯಾಲಿಗ್ರಫಿ, ವೇದಿಕ್ ಮ್ಯಾಥ್ಸ್ ಮತ್ತು ಚೆಸ್ ವಿಭಾಗದಲ್ಲೂ ಸ್ಪರ್ಧೆ ನಡೆಯಿತು.ಸ್ಪರ್ಧೆಯಲ್ಲಿ ವಿಜೇತರಾದ 350 ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೇ ಹದಿನಾಲ್ಕು ಮಕ್ಕಳಿಗೆ ವಂಡರ್ ಕಿಡ್ಸ್ ಅವಾರ್ಡ್ಸ್ ನೀಡಲಾಯಿತು.ಬಹುಮಾನ ವಿತರಣೆ ಸಮಾರಂಭದಲ್ಲಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಂಸ್ಥೆಯ ಅಧ್ಯಕ್ಷೆ ಸತ್ಯ ಸುನಿಲ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry