ಅಬುಧಾಬಿ : ರೋಬೋಟ್

7

ಅಬುಧಾಬಿ : ರೋಬೋಟ್

Published:
Updated:

ದುಬೈ (ಪಿಟಿಐ): ರೋಬೋಟ್ (ಯಂತ್ರ ಮಾನವ) ನಿಯಂತ್ರಿತ ಕಾರು ಪಾರ್ಕಿಂಗ್ ವ್ಯವಸ್ಥೆಯನ್ನು ಅಬುಧಾಬಿಯಲ್ಲಿ ಇದೇ ಮೊದಲ ಬಾರಿಗೆ ಅಳವಡಿಸಲಾಗುತ್ತಿದೆ. ಖರಿಯತ್ ಅಲ್‌ಬೆರಿ ರೆಸಾರ್ಟ್‌ನ ‘ಟ್ರೇಡರ್ಸ್ ಹೋಟೆಲ್’ನಲ್ಲಿ ಅಳವಡಿಸಿರುವ ಈ ರೋಬೊ-ಪಾರ್ಕಿಂಗ್ ವ್ಯವಸ್ಥೆಯನ್ನು ಸ್ಥಳೀಯ ಅಲ್ ಜಬೇರ್ ಸಮೂಹ ಸಂಸ್ಥೆ ನಿರ್ವಹಿಸಲಿದೆ.ಇನ್ನೆರಡು ತಿಂಗಳಲ್ಲಿ ಇದರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಮುಂದಿನ 15 ತಿಂಗಳ ಅವಧಿಯಲ್ಲಿ ಬಳಕೆಗೆ ಮುಕ್ತವಾಗುವ ನಿರೀಕ್ಷೆ ಇದೆ. ರೋಬೋಟ್‌ಗಳಿಂದ ಚಾಲನೆ ಗೊಳ್ಳುವ ಈ ಪಾರ್ಕಿಗ್ ಜಾಗದಲ್ಲಿ 325 ಕಾರುಗಳ ನಿಲುಗಡೆಗೆ ಸ್ಥಳಾವಕಾಶವಿದೆ. ಉಕಿನ ಹಲಗೆಗಳು, ಸಣ್ಣಗಾತ್ರದ ರೋಬೋಟ್‌ಗಳನ್ನು ಅಳವಡಿಸಿ ನಿರ್ಮಿಸಲಾಗಿರುವ ಪಾರ್ಕಿಂಗ್ ವ್ಯವಸ್ಥೆ ಸಂಪೂರ್ಣ ಸ್ವಯಂಚಾಲಿತವಾಗಿರುತ್ತದೆ.ಪಾರ್ಕಿಂಗ್ ಜಾಗಕ್ಕೆ ಬರುವ ಕಾರುಗಳನ್ನು ಈ ರೋಬೋಟ್‌ಗಳೇ ತೆಗೆದುಕೊಂಡು ಹೋಗಿ ಕಾರಿಗೆ ಹಾನಿಯಾಗದಂತೆ ನಿಗದಿತ ಜಾಗಕ್ಕೆ ತಂದು ನಿಲ್ಲಿಸುತ್ತವೆ. ಇದಕ್ಕಾಗಿ ತಗಲುವ ಸಮಯ ಕೇವಲ 50 ಸೆಕೆಂಡುಗಳು ಮಾತ್ರ ಎಂದು ತಜ್ಞರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry