ಅಬೆ- ಜಪಾನ್ ನೂತನ ಪ್ರಧಾನಿ

7

ಅಬೆ- ಜಪಾನ್ ನೂತನ ಪ್ರಧಾನಿ

Published:
Updated:
ಅಬೆ- ಜಪಾನ್ ನೂತನ ಪ್ರಧಾನಿ

ಟೋಕಿಯೊ (ಐಎಎನ್‌ಎಸ್/ಎಎಫ್‌ಪಿ): ಜಪಾನ್‌ನ ನೂತನ ಪ್ರಧಾನಿಯಾಗಿ ಲಿಬರಲ್ ಡೆಮಾಕ್ರಟಿಕ್ ಪಕ್ಷದ (ಎಲ್‌ಡಿಪಿ) ಶಿನ್ಜೊ ಅಬೆ ಅವರನ್ನು ಸಂಸತ್ತಿನ ಕೆಳಮನೆ ಬುಧವಾರ ಆಯ್ಕೆ ಮಾಡಿದೆ.ಕೆಳಮನೆಯಲ್ಲಿ ಒಟ್ಟು 480 ಸ್ಥಾನಗಳ ಪೈಕಿ ಅಬೆ ಅವರು 328 ಮತಗಳನ್ನು ಪಡೆದಿದ್ದಾರೆ. 16ರಂದು ನಡೆದ ಚುನಾವಣೆಯಲ್ಲಿ ಕೆಳಮನೆಯಲ್ಲಿ ಎಲ್‌ಡಿಪಿ ಮತ್ತು ಅದರ ಮಿತ್ರ ಪಕ್ಷ 325 ಸ್ಥಾನಗಳನ್ನು ಪಡೆದಿವೆ.  ಮೇಲ್ಮನೆಯಲ್ಲಿ ಮೊದಲ ಸುತ್ತಿನ ಚುನಾವಣೆಯಲ್ಲಿ ಅಬೆ ಅವರು ಹೆಚ್ಚು ಮತಗಳನ್ನು ಪಡೆಯಲು ವಿಫಲರಾದರು. ಆದರೆ ಇದು ಅಬೆ ಪ್ರಧಾನಿಯಾಗಲು ಅಡ್ಡಿ ಆಗುವುದಿಲ್ಲ ಎನ್ನಲಾಗಿದೆ.ಅಬೆ ಈ ಹಿಂದೆ 2006ರಿಂದ 2007ರವರೆಗೆ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು.ಅಬೆ ಆಯ್ಕೆಯೊಂದಿಗೆ ಏಳು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಜಪಾನಿನಲ್ಲಿ ಏಳು ಪ್ರಧಾನಿಗಳು ಕಾರ್ಯ ನಿರ್ವಹಿಸಿದಂತೆ ಆಗಿದೆ. ಈ ಹಿಂದೆ ಯೊಷಿಹಿಕೊ ನೊಡಾ ಪ್ರಧಾನಿಯಾಗಿದ್ದರು. ಇವರ ಪಕ್ಷವು ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry