ಅಬ್ಬಬ್ಬಾ, ವಿಶ್ವಕಪ್ ಮೆನು!

7

ಅಬ್ಬಬ್ಬಾ, ವಿಶ್ವಕಪ್ ಮೆನು!

Published:
Updated:

ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡ ತಂಡಗಳು ಭಾರತೀಯ ಹೊಟೆಲ್‌ಗಳ ‘ಮೆನು’ವಿನ ಭಾಗವಾದರೆ ಯಾವ ತಂಡ ಯಾವ ತಿನಿಸಿನ ರೂಪದಲ್ಲಿ ಕಾಣಬಹುದು? ಇಲ್ಲಿದೆ ಒಂದು ಝಲಕ್. ಇಂಟರ್‌ನೆಟ್‌ನಲ್ಲಿ ಹಾರಾಡುತ್ತಿರುವ ಈ ಮೆನುವನ್ನು  ಇಲ್ಲಿ ಕೊಡಲಾಗಿದೆ  (ಕಡ್ಡಾಯವಾಗಿ ಓದಿ ಖುಷಿಪಡಲು ಮಾತ್ರ ಈ ಮೆನು!).ಆಸ್ಟ್ರೇಲಿಯಾ: ಆಲೂ ಸಾಗು - ಹದವಾದ ಸಂಯೋಜನೆ; ಕಡೆಗಣಿಸಲು ಆಗದು

ಬಾಂಗ್ಲಾದೇಶ: ವೆಜ್ ಬಿರ್ಯಾನಿ - ದೊಡ್ಡ ಹುಡುಗರ ಜೊತೆ ಗುದ್ದಾಡಲು ಬಾಡಿನ ಅಭಾವ

ಕೆನಡಾ: ಲಿಂಬೆಹಣ್ಣಿನ ಉಪ್ಪಿನಕಾಯಿ - ತಿಂದಿದ್ದು ನೆನಪಿನಲ್ಲಿ ಉಳಿಯುವುದೇ ಇಲ್ಲ

ಇಂಗ್ಲೆಂಡ್: ಲ್ಯಾಂಬ್ (ಕುರಿಮರಿ) ಕೂರ್ಮಾ - ಅಸಂತೋಷದಲ್ಲಿ ಕೊನೆಗಾಣಿಸುವ ಸಪ್ಪೆ ಪಲ್ಯ

ಭಾರತ: ಚೆಪ್ಸ್ ಸ್ಪೇಶಲ್ - ಜೂಜುಕೋರರಿಗೆ ಹೇಳಿಮಾಡಿಸಿದ ಭೂರಿ ಭೋಜನ

ಐರ್ಲೆಂಡ್: ಫೈವ್ ಪಿಂಟ್ಸ್ ಆಫ್ ಕಿಂಗ್‌ಫಿಶರ್ - ತಮಾಷೆಗಾಗಿ ಮೀಸಲಾದ ಪೇಯ

ಕೀನ್ಯಾ: ಪಪ್ಪಾ ದಮ್ಸ್ - ಆರಂಭದಲ್ಲಿ ಜೀರ್ಣಿಸಿಕೊಳ್ಳಲು ತುಂಬಾ ಸುಲಭ

ಹಾಲೆಂಡ್: ಫಲಾವ್ - ಅಪಾಯಕಾರಿಯಲ್ಲದ ಉಪ ತಿನಿಸು

ನ್ಯೂಜಿಲೆಂಡ್: ತರ್ಕಾ ದಾಲ್ - ರುಚಿ ನೀಡದ ಖಾದ್ಯ; ಹಾಗೇ ಬಿಟ್ಟರೆ ಅಪಾಯ

ಪಾಕಿಸ್ತಾನ: ವಿಂಡ್‌ಆಲೂ (ಮಸಾಲೆ ಕರಿ) - ರುಚಿ ಹೇಗಿದೆ ತಿಳಿಯುವುದು ಕಷ್ಟ; ಸ್ಫೋಟಗೊಂಡರೆ ನಮಗೆ ಗೊತ್ತಿಲ್ಲ

ದಕ್ಷಿಣ ಆಫ್ರಿಕಾ: ಪ್ರಾನ್ ಜಲ್‌ಫ್ರೇಜಿ - ನೋಡಿದ ಕೂಡಲೇ ತಿನ್ನಬೇಕೆನಿಸುತ್ತದೆ; ಆಮೇಲೆ ವಿಷಾದ ಆವರಿಸುತ್ತದೆ

ಶ್ರೀಲಂಕಾ: ಮಾವಿನಕಾಯಿ ಚಟ್ನಿ - ಎಲ್ಲರಿಗೂ ಸಮಾನವಾಗಿ ರುಚಿ ನೀಡುವುದು ಗ್ಯಾರಂಟಿ

ವೆಸ್ಟ್ ಇಂಡೀಸ್: ಚಿಕನ್ ಟಿಕ್ಕಾ ಮಸಾಲಾ - 70ರ ದಶಕದಲ್ಲಿ ಪ್ರಸಿದ್ಧವಾಗಿತ್ತು; ಈಗ ಮೊದಲಿನ ನಾವೀನ್ಯ ಇಲ್ಲ

ಜಿಂಬಾಬ್ವೆ: ಉಳ್ಳಾಗಡ್ಡಿ ಭಜಿ - ನಿಮ್ಮನ್ನು ಅಳಿಸಲು ಬೇರೇನೂ ಬೇಕಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry