ಅಬ್ಬರಿಸಿದ ರಾಬಿನ್ ಉತ್ತಪ್ಪ

7

ಅಬ್ಬರಿಸಿದ ರಾಬಿನ್ ಉತ್ತಪ್ಪ

Published:
Updated:

ಬೆಂಗಳೂರು: ನಾಯಕ ರಾಬಿನ್ ಉತ್ತಪ್ಪ (120, 99 ಎಸೆತ, 11 ಬೌಂ, 5 ಸಿಕ್ಸರ್) ಗಳಿಸಿದ ಶತಕ ಮತ್ತು ರೋನಿತ್ ಮೋರೆ (31ಕ್ಕೆ 5) ಪ್ರಭಾವಿ ಬೌಲಿಂಗ್ ನೆರವಿನಿಂದ ಕರ್ನಾಟಕ ತಂಡ ಕೆ.ಎಸ್. ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಹೈದರಾಬಾದ್ ಎದುರು 103 ರನ್‌ಗಳ ಜಯ ಸಾಧಿಸಿತು.ಜೆಐಆರ್‌ಎಸ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 343 ರನ್ ಪೇರಿಸಿತು. ಹೈದರಾಬಾದ್ 44 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲೌಟಾಯಿತು.ಈ ಗೆಲುವಿನ ಮೂಲಕ ಕರ್ನಾಟಕ ಪಾಯಿಂಟ್ ಪಟ್ಟಿಯಲ್ಲಿ (13) ಎರಡನೇ ಸ್ಥಾನಕ್ಕೇರಿದೆ. ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಕೊನೆಯ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ಆಂಧ್ರ ಪ್ರದೇಶವನ್ನು ಎದುರಿಸಲಿದೆ.ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 343 (ರಾಬಿನ್ ಉತ್ತಪ್ಪ 120, ಮಯಾಂಕ್ ಅಗರ್‌ವಾಲ್ 29, ಗಣೇಶ್ ಸತೀಶ್ 90, ಅಭಿಮನ್ಯು ಮಿಥುನ್ 20, ಸ್ಟುವರ್ಟ್ ಬಿನ್ನಿ 27, ಅಮಿತ್ ವರ್ಮಾ 27, ರವಿ ತೇಜಾ 42ಕ್ಕೆ 2, ಪ್ರಗ್ಯಾನ್ ಓಜಾ 70ಕ್ಕೆ 2). ಹೈದರಾಬಾದ್: 44 ಓವರ್‌ಗಳಲ್ಲಿ 240 (ರವಿ ತೇಜಾ 110, ಬಿ. ಸಂದೀಪ್ 38, ಆಶೀಶ್ ರೆಡ್ಡಿ 29, ರೋನಿತ್ ಮೋರೆ (31ಕ್ಕೆ 5), ಅಬ್ರಾರ್ ಖಾಜಿ 42ಕ್ಕೆ 2,  ಸುನಿಲ್ ರಾಜು 22ಕ್ಕೆ 1, ಅಭಿಮನ್ಯು ಮಿಥುನ್ 42ಕ್ಕೆ 1).

ಫಲಿತಾಂಶ: ಕರ್ನಾಟಕಕ್ಕೆ 103 ರನ್ ಗೆಲುವು

ಪಾಯಿಂಟ್: ಕರ್ನಾಟಕ; 5, ಹೈದರಾಬಾದ್; -1

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry