ಶುಕ್ರವಾರ, ನವೆಂಬರ್ 22, 2019
20 °C

ಅಬ್ಬಾ... ನ್ಯೂಸಿಯಂ

Published:
Updated:

ಮಿನುಗು ಮಿಂಚು

ನ್ಯೂಸಿಯಂ ಎಂದರೇನು, ಅದು ಎಲ್ಲಿದೆ?

ಸುದ್ದಿ ಹಾಗೂ ಪತ್ರಿಕೋದ್ಯಮ ಸಂವಹನದ ವಿಶೇಷ ಮ್ಯೂಸಿಯಂಗೆ `ನ್ಯೂಸಿಯಂ' ಎನ್ನುತ್ತಾರೆ. ಅದು ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿದೆ. ಸುದ್ದಿ ಸಂಗ್ರಹದಲ್ಲಾದ ಮಹತ್ವದ ಬದಲಾವಣೆಗಳು ಹಾಗೂ ಇತಿಹಾಸವನ್ನು ಇದು ಒಳಗೊಂಡಿದೆ.ನ್ಯೂಸಿಯಂನಲ್ಲಿ ಏನೇನು ಇವೆ?

60 ಸಾವಿರ ಚದರ ಮೀಟರ್‌ನಷ್ಟು ಪ್ರದೇಶದಲ್ಲಿ ಪ್ರದರ್ಶನ ವ್ಯವಸ್ಥೆ ಇದೆ. ಏಳು ಅಂತಸ್ತುಗಳಲ್ಲಿ 15 ಥಿಯೇಟರ್‌ಗಳಿವೆ. ಸಂವಹನಕ್ಕೆ ಅನುಕೂಲವಾಗುವ ಕೊಠಡಿ, ಪ್ರಸಾರ ಸೌಕರ್ಯ ಇರುವ ಸ್ಟುಡಿಯೊ ಕೂಡ ಇವೆ.ನ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಟ್ಟಿರುವುದರಲ್ಲಿ ಮುಖ್ಯವಾದದ್ದು ಏನು?

ಬಹಳ ಹಳೆಯ ವೃತ್ತಪತ್ರಿಕೆಗಳಿಂದ ಹಿಡಿದು ಈಗಿನ ಡಿಜಿಟಲ್ ಮಾಧ್ಯಮದವರೆಗೆ ಮಾಹಿತಿ ಭಂಡಾರವಿದೆ. ಆಡಿಯೊ-ವಿಷುಯಲ್ ವ್ಯವಸ್ಥೆಯ ಮೂಲಕ ಪ್ರದರ್ಶನ ಇರುವುದರಿಂದ ವಿಷಯ ಅರ್ಥ ಮಾಡಿಕೊಳ್ಳುವುದು ಸುಲಭ. ಸಂಗ್ರಹ ವಿಭಾಗದಲ್ಲಿ 35 ಸಾವಿರ ಮುಖಪುಟಗಳಿದ್ದು, 500 ವರ್ಷಗಳಷ್ಟು ಹಳೆಯ ಪತ್ರಿಕೆಯ ಮುಖಪುಟವೂ ಸೇರಿದೆ. ವಿಶ್ವದ ವಿವಿಧೆಡೆಯ 600 ಪತ್ರಿಕೆಗಳ ಮುಖಪುಟಗಳು ಇಲ್ಲಿ ಲಭ್ಯ.ನ್ಯೂಸಿಯಂನಲ್ಲಿ ಕಲಾತ್ಮಕ ಸಂಗತಿ ಏನಾದರೂ ಇದೆಯೇ?

`ವಾಲ್‌ಸ್ಟ್ರೀಟ್ ಜರ್ನಲ್'ನ ಪ್ರತಿನಿಧಿ ಡೆನಿಯೆಲ್ ಪರ್ಲ್ ಬಳಸುತ್ತಿದ್ದ ಲ್ಯಾಪ್‌ಟಾಪ್ ಇಲ್ಲಿ ಪ್ರದರ್ಶನಕ್ಕೆ ಇದೆ. ಪಾಕಿಸ್ತಾನದಲ್ಲಿ ಉಗ್ರರು ಡೇನಿಯಲ್ ಪರ್ಲ್ ಅವರನ್ನು ಕೊಂದಿದ್ದರು. ಬರ್ಲಿನ್ ಗೋಡೆಯ ಪಳೆಯುಳಿಕೆಗಳು ಹಾಗೂ 9/11 ಉಗ್ರರ ದಾಳಿಗೆ ತುತ್ತಾದ `ವರ್ಲ್ಡ್ ಟ್ರೇಡ್ ಸೆಂಟರ್'ನಲ್ಲಿದ್ದ ಆಂಟೆನಾ ಕೂಡ ಇಲ್ಲಿ ಪ್ರದರ್ಶನಕ್ಕೆ ಇವೆ.ಅಲ್ಲಿಗೆ ಭೇಟಿ ನೀಡುವವರು ಸಂವಾದ ನಡೆಸಬಹುದಾದ ವ್ಯವಸ್ಥೆ ಇದೆಯೇ?

ಸಂವಹನ, ಸಂವಾದ ಕೊಠಡಿಯಲ್ಲಿ ಯಾರು ಬೇಕಾದರೂ ಟೀವಿ ವರದಿಗಾರ ಆಗಬಹುದು ಅಥವಾ ಸಂಕಲನ ಮಾಡಬಹುದು. ಪತ್ರಿಕೋದ್ಯಮ ಸಂಹಿತೆ ಕುರಿತ ರಸಪ್ರಶ್ನೆಯಲ್ಲಿಯೂ ಭಾಗವಹಿಸಬಹುದು. ಖ್ಯಾತ ಸುದ್ದಿಗಾರರ ಜೊತೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವಂಥ ಆಟಗಳನ್ನು ಆಡಬಹುದು. 

 

ಪ್ರತಿಕ್ರಿಯಿಸಿ (+)