ಅಭಿಮಾನವಿಲ್ಲದೆ ಕಲೆ ಶೂನ್ಯ: ಚಿಟ್ಟಾಣಿ

7

ಅಭಿಮಾನವಿಲ್ಲದೆ ಕಲೆ ಶೂನ್ಯ: ಚಿಟ್ಟಾಣಿ

Published:
Updated:

ಕುಮಟಾ: ಅಭಿಮಾನವಿಲ್ಲದೆ ಕಲೆ ಶೂನ್ಯ, ಕಲಾ ಸಾಧನೆಯಲ್ಲಿ ವಿನಯ, ದೃಢತೆ ಹಾಗೂ ತನ್ಮಯತೆ ಬೇಕೇ ಬೇಕು ಎಂದು `ಪದ್ಮಶ್ರೀ~ ಪ್ರಶಸ್ತಿ ಪುರಸ್ಕೃತ ಹೆಸರಾಂತ ಯಕ್ಷಗಾನ ಕಲಾ ವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ನುಡಿದರು.ಕುಮಟಾ ಮಣಕಿ ಮೈದಾದಲ್ಲಿ ಭಾನುವಾರ ರವಿರಾಜ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆದ `ಡ್ಯಾನ್ಸ್ ಧಮಾಕಾ~ ಕಾರ್ಯಕ್ರಮದಲ್ಲಿ ಏರ್ಪಡಿ ಸಲಾದ ಸನ್ಮಾನಕ್ಕೆ ಉತ್ತರಿಸಿ ಅವರು ಮಾತನಾಡಿದರು.`ಈ ವೇದಿಕೆಯಲ್ಲಿ ನಡೆಯುವ ಡ್ಯಾನ್ಸ್‌ನಂತೆ ನಾನೂ ಒಂದು ರೀತಿಯ ಕುಣಿತದವ. ಜೀವನದಲ್ಲಿ ಆಕಸ್ಮಿಕವಾಗಿ ಪ್ರವೇಶಿಸಿದ ಕಲೆಯಿಂದ ನನ್ನ ಜೀವ ನವೇ ಉದ್ಧಾರವಾಗಿ ಹೋಯಿತು. `ಪದ್ಮಶ್ರೀ~ ಪ್ರಶಸ್ತಿ ಬಂದಿರುವುದು ` ಚಿಟ್ಟಾಣಿ~ಗಲ್ಲ, ಬದಲಾಗಿ ಯಕ್ಷಗಾನ ಕಲೆಗೆ ಎಂದರು.ದಿ. ಮೋಹನಶೆಟ್ಟಿ ಮೆಮೋರಿ ಯಲ್ ಟ್ರಸ್ಟ್ ಉಪಾಧ್ಯಕ್ಷ ರವಿ ಕುಮಾರ ಶೆಟ್ಟಿ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದರು. ಉದ್ಯಮಿ ಯಶೋಧರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಸಾಯಿ ಗಾಂವ್ಕರ್, ಬಾಲ ವಿದ್ವಾನ್  ಕುಮಾರ ಸಂಜೀವ, ಸಿ.ಪಿ.ಐ.ಎನ್.ಆರ್. ಮುಕ್ರಿ, ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ ಆನಂದ ಕವರಿ,  ರವಿರಾಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಚೇತನ ಶೇಟ್, ಉದ್ಯಮಿ ರಘುಚೇತನ ಯಶೋಧರ ನಾಯ್ಕ ಮೊದಲಾದವರಿದ್ದರು. ಇದೇ ಸಂದರ್ಭದಲ್ಲಿ ಸರಕಾರಿ ವೈದ್ಯರಾದ ಡಾ. ಶ್ರೀನಿವಾಸ ನಾಯಕ ಹಾಗೂ ರಾಷ್ಟ್ರಪತಿ ಪೊಲೀಸ್ ಪದಕ ಪಡೆದ ಬೆಳಗಾವಿಯ ಸಿ.ಪಿ.ಐ.  ಅರುಣ ನಾಯ್ಕ ಕೊಡಕಣಿ ಅವರನ್ನು ಸನ್ಮಾನಿ ಸಲಾಯಿತು. ರವಿರಾಜ ಸ್ಪೋರ್ಟ್ಸ್ ಕ್ಲಬ್‌ನ ಮಂಜುನಾಥ ಹೆಗಡೆ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry