ಮಂಗಳವಾರ, ಡಿಸೆಂಬರ್ 10, 2019
26 °C
ಪಂಚರಂಗಿ

ಅಭಿಮಾನಿಗಳ ಪ್ರೀತಿಗೆ ‘ಬಾಸ್’ ಖುಷಿ

Published:
Updated:
ಅಭಿಮಾನಿಗಳ ಪ್ರೀತಿಗೆ ‘ಬಾಸ್’ ಖುಷಿ

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಇತ್ತೀಚೆಗಷ್ಟೆ ತಮ್ಮ 46ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ನೂರಾರು ಅಭಿಮಾನಿಗಳು ಶುಭಾಷಯ ಕೋರಿದ್ದರು.ಆದರೆ ಅವರ ಕೆಲ ಅಭಿಮಾನಿ ಸಂಘಗಳು ಹುಟ್ಟುಹಬ್ಬದ ಸಂದರ್ಭದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳಿಂದ ಅಕ್ಷಯ್ ಭಾವುಕರಾಗಿದ್ದಾರೆ. ಕೆಲವರು ವೃದ್ಧಾಶ್ರಮಗಳಲ್ಲಿ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕ್ರಮ ಆಯೋಜಿಸಿದ್ದರು. ಯುವಕರು ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡಿದ್ದರು. ಇದಕ್ಕಾಗಿ ಅಕ್ಷಯ್‌ ಕುಮಾರ್ ಅಭಿಮಾನಿಗಳನ್ನು ಅಭಿನಂದಿಸಿದ್ದಾರೆ.‘ನಿಮ್ಮ ಪ್ರೀತಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ನೀವೆಲ್ಲ ನಿಮ್ಮದೇ ಹುಟ್ಟುಹಬ್ಬದಂತೆ ನನ್ನ ಹುಟ್ಟುಹಬ್ಬ ಆಚರಿಸಿದ್ದೀರಿ. ಕೇಕ್‌ ಕತ್ತರಿಸಿದ್ದೀರಿ, ಶುಭ ಹಾರೈಸಿದ್ದೀರಿ. ಆದರೆ ನನ್ನ ಹೃದಯವನ್ನು ಹೆಚ್ಚು ತಟ್ಟಿದ ಸಂಗತಿ ಎಂದರೆ ಕೆಲವರು ವೃದ್ಧಾಶ್ರಮಗಳಲ್ಲಿ ನನ್ನ ಹುಟ್ಟುಹಬ್ಬ ಆಚರಿಸಿದ್ದೀರಿ. ರಕ್ತದಾನ ಶಿಬಿರಗಳನ್ನು ನಡೆಸಿದ್ದೀರಿ.ಇದು ನನ್ನನ್ನು ಹೆಚ್ಚು ತಟ್ಟಿದೆ. ‘ಬಾಸ್‌’ನ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿದ್ದಕ್ಕೆ ಥ್ಯಾಂಕ್ಸ್ ಎಂದು ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಅಕ್ಷಯ್‌ ಕುಮಾರ್ ‘ಬಾಸ್‌’ ಚಿತ್ರದ ಪ್ರೊಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ.

ಪ್ರತಿಕ್ರಿಯಿಸಿ (+)