ಅಭಿಮಾನಿಗಳ ಪ್ರೀತಿ ಖುಷಿಯ ಕಣ್ಣೀರು ತರಿಸಿದೆ: ಸಚಿನ್

7

ಅಭಿಮಾನಿಗಳ ಪ್ರೀತಿ ಖುಷಿಯ ಕಣ್ಣೀರು ತರಿಸಿದೆ: ಸಚಿನ್

Published:
Updated:

ನವದೆಹಲಿ (ಪಿಟಿಐ): ಏಕದಿನ ಕ್ರಿಕೆಟ್ ಮಾದರಿಗೆ ಮೂರು ದಿನಗಳ ಹಿಂದೆ ನಿವೃತ್ತಿ ಪ್ರಕಟಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ತಮ್ಮ ಮೇಲೆ ಅಭಿಮಾನಿಗಳು ವ್ಯಕ್ತಪಡಿಸಿರುವ ಪ್ರೀತಿ, ಗೌರವಕ್ಕೆ ಮನಸೋತಿದ್ದಾರೆ. `ನೀವು ನನ್ನ ಮೇಲಿಟ್ಟಿರುವ ಪ್ರೀತಿಗೆ ಪ್ರತಿಕ್ರಿಯಿಸಲು ನನಗೆ ಪದಗಳೇ ಸಿಗುತ್ತಿಲ್ಲ' ಎಂದು ಲಿಟಲ್ ಚಾಂಪಿಯನ್ ಹೇಳಿದ್ದಾರೆ.ನಿವೃತ್ತಿ ಪ್ರಕಟಿಸಿದ ನಂತರ ಮೊದಲ ಸಲ ಮೌನ ಮುರಿದಿರುವ ಸಚಿನ್ ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಅಭಿಮಾನಿಗಳ ಪ್ರೀತಿಗೆ ಈ ರೀತಿಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. `ಅಭಿಮಾನಿಗಳು ವ್ಯಕ್ತಪಡಿಸಿರುವ ಪ್ರೀತಿಗೆ ಹೇಗೆ ಉತ್ತರಿಸಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಅವರ ಪ್ರೀತಿ ನನ್ನಲ್ಲಿ ಖುಷಿಯ ಕಣ್ಣೀರು ತರಿಸಿದೆ' ಮುಂಬೈಕರ್ ಭಾವುಕರಾಗಿ  `ಟ್ವಿಟ್' ಮಾಡಿದ್ದಾರೆ. ಅವರು ಭಾನುವಾರ ಪ್ರವಾಸಿ ತಾಣ ಮಸ್ಸೂರಿಗೆ ತೆರಳಿದ್ದಾರೆ.ಬ್ರಾಡ್ಮನ್‌ಗಿಂತ ಸಚಿನ್ ಶ್ರೇಷ್ಠ (ಕರಾಚಿ ವರದಿ): `ಕ್ರಿಕೆಟ್ ದಂತಕತೆ ಆಸ್ಟ್ರೇಲಿಯಾದ ಸರ್ ಡಾನ್ ಬ್ರಾಡ್ಮನ್‌ಗಿಂತ ತೆಂಡೂಲ್ಕರ್ ಶ್ರೇಷ್ಠ ಕ್ರಿಕೆಟಿಗ' ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಮಹಮ್ಮದ್ ಹನೀಫ್ ಬಣ್ಣಿಸಿದ್ದಾರೆ.`ಬ್ರಾಡ್ಮನ್ ಹಾಗೂ ಸಚಿನ್ ಇಬ್ಬರೂ  ಆಡುವುದನ್ನು ನೋಡಿದ್ದೇನೆ. ಜೀವನದಲ್ಲಿ ನಾನು ಕಂಡ ಬ್ಯಾಟ್ಸ್‌ಮನ್‌ಗಳಲ್ಲಿಯೇ ಸಚಿನ್ ಶ್ರೇಷ್ಠರು' ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry