ಅಭಿಮಾನಿ ಯುವಕ ಸೇನೆಗೆ ಬೆಂಬಲ

ಭಾನುವಾರ, ಮೇ 26, 2019
32 °C

ಅಭಿಮಾನಿ ಯುವಕ ಸೇನೆಗೆ ಬೆಂಬಲ

Published:
Updated:

ಸುರಪುರ: ಇಲ್ಲಿನ ಗೋಸಲ ವಂಶದ ಅರಸರ ಹಾಗೂ ಭವ್ಯ ಇತಿಹಾಸದ ಜಾಗೃತಿಯ ಬಗ್ಗೆ ಏರ್ಪಡಿಸಿದ್ದ ಸಂಘಟನಾ ಯಾತ್ರೆ (ಬೈಕ್ ರ‌್ಯಾಲಿ)ಗೆ ಬೆಂಬಲ ವ್ಯಕ್ತವಾಗಿದೆ.  ಈ ಕಾರ್ಯಕ್ರಮ ತಾಲ್ಲೂಕಿನ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿದೆ ಎಂದು ಅರಸು ಮನೆತನದ ಯುವರಾಜಾ ರಾಜಾ ಕೃಷ್ಟಪ್ಪ ನಾಯಕ್ ಭಾವಾವೇಶದಿಂದ ನುಡಿದರು.ಅರಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಬೃಹತ್ ಬೈಕ್ ರ‌್ಯಾಲಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಗೋಸಲ ವಂಶದ ಇತಿಹಾಸ ಪುರುಷ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ಹೆಸರಿನಲ್ಲಿ ಅಭಿಮಾನಿ ಯುವಕ ಸೇನೆ ಅಸ್ತಿತ್ವಕ್ಕೆ ಬಂದಿದೆ. ಈ ಸೇನೆಯನ್ನು ಪ್ರತಿ ಗ್ರಾಮಗಳಲ್ಲಿ ಸಂಘಟಿಸಲಾಗುವುದು. ಇದರ ಮೂಲಕ ಜನರಲ್ಲಿ ಇಲ್ಲಿನ ಇತಿಹಾಸದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಭ್ರಷ್ಟಾಚಾರ, ಅನ್ಯಾಯ, ಶೋಷಣೆಯನ್ನು ಸೇನೆ ತಡೆಗಟ್ಟಲಿದೆ ಎಂದು ಸೇನೆಯ   ಗೌರವಾಧ್ಯಕ್ಷ  ರಾಜಾ ಕೃಷ್ಟಪ್ಪ ನಾಯಕ್ ವಿವರಿಸಿದರು.ಸಂಸ್ಥಾನಿಕ ರಾಜಾ ವೆಂಕಟಪ್ಪ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೇನೆಯ ಪ್ರಮುಖರಾದ ದೇವಿಂದ್ರಪ್ಪ ಬಳಿಚಕ್ರ, ಉಸ್ತಾದ್ ವಜಾಹತ್ ಹುಸೇನ್, ಇಬ್ರಾಹಿಂಸಾಬ ತಿಂಥಣಿ, ಗಂಗಾಧರನಾಯಕ್, ದಶರಥ ದೊರೆ, ಚಂದ್ರಶೇಖರ ಗುಂತಾನವರ್ ಇತರರು ಮಾತನಾಡಿದರು.ಬಸವರಾಜ ದೇಸಾಯಿ ಸ್ವಾಗತಿಸಿದರು. ವಿನೋದನಾಯಕ್ ದೊರೆ ನಿರೂಪಿಸಿದರು. ತಿಮ್ಮನಗೌಡ ತೀರ್ಥ ವಂದಿಸಿದರು.ರಾಜಾ ಲಕ್ಷ್ಮೀನಾರಾಯಣ ನಾಯಕ್, ರಾಜಾ ಪಿಡ್ಡನಾಯಕ್, ಮುದ್ದಣ್ಣ ಸರಪಟ್ಟಣಶೆಟ್ಟಿ, ಎಸ್.ಎಂ. ರಹೆಮಾನ್ ದಖನಿ, ಭಾಸ್ಕರರಾವ ಮುಡಬೋಳ, ಭೀಮರಾಯ ಹೊಟ್ಟಿ, ಸಿದ್ದಣ್ಣ ಮುದ್ನೂರ್, ಭೀಮನಗೌಡ ಕಚಕನೂರ, ನಿಂಗಣ್ಣ ಸಾಹು ಮಾಲಗತ್ತಿ, ವಿನೋದ ಸಜ್ಜನ್ ಹಗರಟಿಗಿ, ಮಲ್ಲಿಕಾರ್ಜುನ ಬೆಂಡೆಬೆಂಬಳಿ, ನಾಗೂ ದೇಸಾಯಿ ಹಳಿಸಗರ, ಮಹೇಶಗೌಡ ಪಾಟೀಲ, ಮಹೇಶ ಪಾಟೀಲ ಸುಗೂರ, ಭೀಮಣ್ಣ ದೊರಿ ವಜ್ಜಲ್, ಜಡೆಪ್ಪಗೌಡ ದೇವತಕಲ್, ತಿರುಪತಿ ಮಾಸ್ಟರ್ ಬೆನಕನಹಳ್ಳಿ, ಬಸವಂತರಾಯಗೌಡ ಮೇಟಿ ಗುಳಬಾಳ, ಚಂದ್ರಶೇಖರ ದ್ಯಾಮನಾಳ, ಮಾಳಪ್ಪಗೌಡ ಗೆದ್ದಲಮರಿ, ನಿಂಗಣ್ಣ ಬೂದಗುಂಪಿ, ಪುರುಷೋತ್ತಮ ಪತ್ತಾರ, ತಿಮ್ಮಣ್ಣ ಜಂಗಳಿ, ಗಂಗನಗೌಡ ಪಾಟೀಲ ಬಂಡೋಳಿ, ತಿಪ್ಪಣ್ಣ ಕುರ್ಲಿ, ಮಲ್ಲಿಕಾರ್ಜುನ ಸ್ವಾಮಿ ಕಲ್ಲದೇವನಹಳ್ಳಿ, ಮದರಸಾಬ ಯಡಹಳ್ಳಿ, ಈರನಗೌಡ ಕೋಟೆಗುಡ್ಡ, ಯಮನಪ್ಪ ಜಂಗಿನಗಡ್ಡಿ, ಕೃಷ್ಣೆಗೌಡ ಜಂಗಿನಗಡ್ಡಿ, ಅಮರೇಶನಾಯಕ್ ನಾರಾಯಣಪುರ, ಈರಣ್ಣ ಅಂಬಿಗೇರ ದೇವಪುರ, ಪ್ರಾಣೇಶ ಪತ್ತಾರ ದೇವಪುರ, ಹುಸೇನಸಾಬ ಲಿಂಗದಳ್ಳಿ, ಗ್ಯಾನಪ್ಪಗೌಡ ಲಿಂಗದಳ್ಳಿ, ಮಾನಪ್ಪ ಗುಗಲಗಟ್ಟಿ, ಭೀಮರಾಯ ಹುಣಸಿಹೊಳೆ, ರಸೂಲಪಟೇಲ ಅರಿಕೇರಾ, ಹಣಮಂತ ಪಾಟೀಲ ಶಾಂತಪುರ, ಮಾನಪ್ಪ ಪಿರಗಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry