ಮಂಗಳವಾರ, ಮೇ 11, 2021
27 °C

ಅಭಿವೃದ್ದಿಯ ಪಥದತ್ತ ಕೊಮಾರನಹಳ್ಳಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಹೆದ್ದಾರಿ-25ಕ್ಕೆ ಹೊಂದಿಕೊಂಡ ಕೊಮಾರನಹಳ್ಳಿ ಮಲೇಬೆನ್ನೂರಿನಿಂದ 2 ಕಿ.ಮೀ . ದೂರದಲ್ಲಿದೆ.ಹಸಿರುಹೊತ್ತ ಹೊಲಗದ್ದೆ, ತೋಟ, ಗುಡ್ಡಗಳಿಂದ ಆವೃತ ಗ್ರಾಮಸ್ಥರು ನೀಡಿದ ಮಾಹಿತಿಯಂತೆ ಹೆಳವನಕಟ್ಟೆ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯ, ರಂಗನಾಥಾಶ್ರಮ, ದಾಸ ಸಾಹಿತಿ ಹೆಳವನಕಟ್ಟೆ ಗಿರಿಯಮ್ಮ ಹಾಗೂ ಹೆಳವ ಹಾಲಪ್ಪ ಕಟ್ಟಿಸಿದ ಕೆರೆ, ಶಂಕರಲಿಂಗ ಭಗವಾನ್ ಪರಮಹಂಸ ಸರಸ್ವತಿ ಆಶ್ರಮ ಹಾಗೂ ಮಧು ಹೋಟೆಲ್ ಮಿರ್ಚಿ ಹಾಗೂ ಕಾರ ಮಂಡಕ್ಕಿಗೆ ಖ್ಯಾತಿ ಪಡೆದಿದೆ.ಗ್ರಾಮದಲ್ಲಿ ಮುಖ್ಯವಾಗಿ ಹಾಲುಮತ, ಲಿಂಗಾಯತರು, ನಾಯಕರು, ಲಂಬಾಣಿ, ಬ್ರಾಹ್ಮಣ, ಸಮೇರಾಯ, ಮರಾಠ, ಬೆರಳೆಣಿಕೆಯಷ್ಟು ಮುಸ್ಲಿಂ ಸಮುದಾಯದ  ಸುಮಾರು 3 ಸಾವಿರ ಜನರು ಸೌಹಾರ್ದ ಜೀವನ ಸಾಗಿಸುತ್ತಿದ್ದಾರೆ.ಆಂಜನೇಯ, ಬೀರಲಿಂಗೇಶ್ವರ, ಸೇವಾಲಾಲ್ ಮರಿಯಮ್ಮ, ಹಟ್ಟಿದುರ್ಗಮ್ಮ, ಹೊಸೂರು ಚೌಡಮ್ಮ ದೇವಾಲಯಗಳಿವೆ.ಗ್ರಾಮದ ಜನರು ಮುಖ್ಯವೃತ್ತಿ ಕೃಷಿ. ಕೆರೆಯಾಶ್ರಿತ ಜಮೀನಿನಲ್ಲಿ ಬಾಳೆ, ಅಡಿಕೆ, ತೆಂಗಿನ ತೋಟ, ಭದ್ರಾನಾಲೆ ಪ್ರದೇಶದಲ್ಲಿ ಭತ್ತ, ಮಳೆಯಾಶ್ರಿತ ಖುಷ್ಕಿ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ.ವಿದ್ಯಾವಂತ ಸಂಖ್ಯೆ ಹೆಚ್ಚಿದ್ದು ಸರ್ಕಾರಿ ಸೇವೆ, ಸೇನೆ, ವೈದ್ಯ, ಶಿಕ್ಷಕ, ವಕೀಲ ವೃತ್ತಿ ನಿರತರು ಇದ್ದಾರೆ.ಕೆರೆಯಲ್ಲಿ ನೀರಿದ್ದಾಗ ಮೀನುಗಾರಿಕೆ ಮಾಡುವವ ಮೀಂಗುಲಿಗರು ಹಾಗೂ ಹೈನುಗಾರಿಕೆ, 150ಕ್ಕೂ ಹೆಚ್ಚು ಬಾಣಸಿಗ ವೃತ್ತಿ ಅವಲಂಬಿಸಿದ್ದಾರೆ.ಬದಲಾದ ಚಿತ್ರಣ: ಕಳೆದ 10 ವರ್ಷದಲ್ಲಿ ಗ್ರಾಮ ಸಾಕಷ್ಟು ಅಭಿವೃದ್ಧಿಗೊಂಡಿದ್ದು ಹೊಸೂರು, ಹಳೆ ಊರಿನ ಬಹುತೇಕ ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗಿದೆ. ಮೋರಿ ನಿರ್ಮಾಣವಾಗಬೇಕಿದೆಪೈಪ್, ಕಿರು ನೀರು ಸರಬರಾಜು ಟ್ಯಾಂಕ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಹೊಳೆ ನೀರಿನ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಡಿ ಶುದ್ಧ ಹೊಳೆ ನೀರಿನ ನಿರೀಕ್ಷೆ ಮಾಡುತ್ತಿದ್ದಾರೆ ನಾಗರಿಕರು.ಅಂಕುಡೊಂಕಿನಿಂದ ಕೂಡಿದ್ದ ಕೆರೆ ರಸ್ತೆ ರೂ 2 ಕೋಟಿ ವೆಚ್ಚದಲ್ಲಿ ನೇರ ರಸ್ತೆ, ದೇವಾಲಯಕ್ಕೆ ಚಿಕ್ಕ ಯಾತ್ರಿನಿವಾಸ ನಿರ್ಮಿಸಿದ್ದು, ರೂ 1.30 ಕೋಟಿ ವೆಚ್ಚದ ಕಲ್ಯಾಣ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.ತುರ್ತು ಅವಶ್ಯಕತೆ: ಗ್ರಾಮದ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೌಢಶಾಲೆ ಅಗತ್ಯ ಎನ್ನುತಾರೆ ಶ್ರೀನಿವಾಸಾಚಾರ್.ಸುಸಜ್ಜಿತ ತಂಗುದಾಣ ನಿರ್ಮಿಸಬೇಕು ಎನ್ನುವುದು ಜಿ.ವಿ. ಶಿವಕುಮಾರ್ ಬೇಡಿಕೆ.ಕೆರೆ ರಸ್ತೆಗೆ ರಿವೆಟ್‌ಮೆಂಟ್ ಹಾಗೂ ಬೇಲಿ ಹಾಕಿದರೆ ಅಪಘಾತ ತಪ್ಪಿಸಬಹುದು ಹಾಗೂ ನೂತನ ರಸ್ತೆ ಉಳಿಯುತ್ತದೆ ಎನ್ನುತ್ತಾರೆ ಪಟೇಲ್ ಮಂಜುನಾಥ್, ಸ್ಮಶಾನ ಅಭಿವೃದ್ಧಿ ಮಾಡಬೇಕು ಎನ್ನುತ್ತಾರೆ ವೀರಬಸಪ್ಪ.ಹೆಳವನಕಟ್ಟೆ ಲಕ್ಷ್ಮಿ ರಂಗನಾಥಸ್ವಾಮಿ ದೇವಾಲಯದ ಕೆರೆ ಹೂಳು ಎತ್ತಿಸಿ, ಪಕ್ಕದ ಭದ್ರಾನಾಲೆಯಿಂದ ನೀರು ಹರಿಸುವ ವ್ಯವಸ್ಥೆ ಮಾಡಿದರೆ ಮೀನುಗಾರಿಕೆಗೆ ಅನುಕೂಲವಾಗುತ್ತದೆ. ಅಂತರ್ಜಲಮಟ್ಟ ಹೆಚ್ಚುತ್ತದೆ ಎನ್ನುತ್ತಾರೆ ಪರಮೇಶ್ವರ ನಾಯ್ಕ, ಶಿವಾನಾಯ್ಕ, ರಾಜಾನಾಯ್ಕ.

ಯಾತ್ರಾರ್ಥಿಗಳ ಅನುಕೂಲಕ್ಕೆ ಸಾರ್ವಜನಿಕ ಶೌಚಾಲಯ, ಬೀದಿ ದೀಪದ ವ್ಯವಸ್ಥೆ ಅಗತ್ಯ ಎನ್ನುತ್ತಾರೆ ವಿಮಲಾ ಬಾಯಿ ಹಾಗೂ ಹನುಮಾಬಾಯಿ.ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ರಂಗನಾಥಸ್ವಾಮಿ ದೇವಾಲಯದ ರಾಜಗೋಪುರ, ಕಲ್ಯಾಣಮಂದಿರ ಹಾಗೂ ಯಾತ್ರಿನಿವಾಸ ನಿರ್ಮಿಸಿ ಯಾತ್ರಾಸ್ಥಳವನ್ನಾಗಿಸಬೇಕು ಎಂಬುದು ಅರ್ಚಕ ಮಂಜುನಾಥಾಚಾರ್ ಹಾಗೂ ವಾದಿರಾಜಾಚಾರ್ಯರ ಬೇಡಿಕೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.