ಅಭಿವೃದ್ಧಿಗೆ ಆದ್ಯತೆ ನೀಡಲು ಮನವಿ

7

ಅಭಿವೃದ್ಧಿಗೆ ಆದ್ಯತೆ ನೀಡಲು ಮನವಿ

Published:
Updated:

ಗುಲ್ಬರ್ಗ: ಗುಲ್ಬರ್ಗದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಅನುಕೂಲವಾಗುವಂಥ ಬೇಡಿಕೆಗಳ ಕುರಿತು ಒತ್ತು ನೀಡಿ, ನಿರ್ಣಯ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಒತ್ತಾಯಿಸಿದ್ದಾರೆ.ಗುಲ್ಬರ್ಗದಲ್ಲಿ 5.45 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದರೂ ರಾಜ್ಯ ಸರ್ಕಾರಿ ನೌಕರರು ಮನೆ ಬಾಡಿಗೆ ಭತ್ಯೆ ಸೇರಿದಂತೆ ಇನ್ನಿತರ ಭತ್ಯೆಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ. ಸರ್ಕಾರ ಈಗಾಗಲೇ ಹುಬ್ಬಳ್ಳಿ -ಧಾರವಾಡ, ಮೈಸೂರು, ಮಂಗಳೂರು ನಗರಗಳನ್ನು `ಬಿ~ ದರ್ಜೆಯ ನಗರಗಳನ್ನಾಗಿ ಪರಗಣಿಸಿ ಸರ್ಕಾರಿ ನೌಕರರಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಗುಲ್ಬರ್ಗವನ್ನು ಬಿ ದರ್ಜೆಯ ನಗರವನ್ನಾಗಿ ಪರಿಗಣಿಸಿ ಸೌಲಭ್ಯ ವಂಚಿತ ಸರ್ಕಾರಿ ನೌಕರರಿಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿದ್ದಾರೆ.ನಗರ ಅಭಿವೃದ್ಧಿಗೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ ಈ ಭಾಗಕ್ಕೆ ನ್ಯಾಯ ದೊರಕಿಸಿ ಕೊಡಬೇಕು. ಅಫಜಲಪುರ- ಅಳಂದ ತಾಲ್ಲೂಕುಗಳ ನಡುವೆ ಸಂಪರ್ಕ ರಸ್ತೆ ಇಲ್ಲದೇ ಇರುವುದರಿಂದ ನಿಂಬರ್ಗಾ- ದುಧನಿ ರಾಜ್ಯ ಹೆದ್ದಾರಿ ಅಭಿವೃದ್ಧಿ, ಅಫಜಲಪುರ ತಾಲ್ಲೂಕಿನ ಗಾಣಗಾಪುರ ಮುಖ್ಯ ರಸ್ತೆಯಿಂದ  ಗುಡೂರ ಮೇಳಕುಂದಾ ಗ್ರಾಮದವರೆಗೆ 10ಕಿಮೀ ರಸ್ತೆ ನಿರ್ಮಾಣಕ್ಕೆ ಅಂದಾಜು ವೆಚ್ಚ 3ಕೋಟಿ ರೂಪಾಯಿಗಳನ್ನು ಮಂಜೂರಿ, ಜೇವರ್ಗಿ ಶಾಖಾ ಕಾಲುವೆ ಕಾಮಗಾರಿಗಳ ನವೀಕರಣಗೊಳಿಸುವುದು, ಅಡ್ಡ ಕಾಲುವೆಗಳ ದುರಸ್ತಿ, ಜೇವರ್ಗಿ ತಾಲ್ಲೂಕಿನ ನೆಲೋಗಿ ಏತ ನೀರಾವರಿ ಹಾಗೂ ನಾಗರಾಣಿ ಏತ ನೀರಾವರಿಯ ಈ ಎರಡು ಯೋಜನೆಗಳನ್ನು ಕೃಷ್ಣಾ ಭಾಗ್ಯ ಜಲನಿಗಮ ವ್ಯಾಪ್ತಿಗೆ ಸೇರ್ಪಡೆ ಮಾಡುವ ಮೂಲಕ ನವೀಕರಿಸಿ ಮಂಜೂರಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಆದ್ಯತೆ ನೀಡುವಂತೆ ಅಲ್ಲಮಪ್ರಭು ಪಾಟೀಲ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry