ಅಭಿವೃದ್ಧಿಗೆ ಇಚ್ಛಾಶಕ್ತಿ ಕೊರತೆ

7

ಅಭಿವೃದ್ಧಿಗೆ ಇಚ್ಛಾಶಕ್ತಿ ಕೊರತೆ

Published:
Updated:
ಅಭಿವೃದ್ಧಿಗೆ ಇಚ್ಛಾಶಕ್ತಿ ಕೊರತೆ

ಹುಮನಾಬಾದ್: ಇಚ್ಛಾಶಕ್ತಿ ಕೊರತೆಯಿಂದಾಗಿ ದಲಿತ ಜನಾಂಗದ ಅಭಿವೃದ್ಧಿ ಕುಂಟಿತಗೊಳ್ಳುತ್ತಿದೆ ಎಂದು ಶಾಸಕ ರಾಜಶೇಖರ ಪಾಟೀಲ ಅಭಿಪ್ರಾಯಪಟ್ಟರು.

ಮಂಗಳವಾರ ರಾತ್ರಿ ಜರುಗಿದ ಡಾ.ಬಾಬು ಜಗಜೀವನರಾಮರ 104ನೇ  ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆವಹಿಸಿ ಮಾತನಾಡಿದರು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗ ಸರ್ವತೋಮುಖ ಅಭಿವೃದ್ದಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆ ರೂಪಿಸಿವೆ. ಅವುಗಳನ್ನು ಪಡೆಯುವಲ್ಲಿ ದಲಿತರು ತಾಳುತ್ತಿರುವ ನಿರ್ಲಕ್ಷ ಧೋರಣೆಯಿಂದಾಗಿ ನಿರೀಕ್ಷಿತ ಪ್ರಗತಿ ಆಗಿಲ್ಲ ಎಂದು ತಿಳಿಸಿದರು. ಮೀಸಲಾತಿ ಆಧಾರಿಸಿ, ಕ್ಷೇತ್ರದಲ್ಲಿ ಪ.ಜಾ, ಪ.ಪಂ ಜನಾಂಗದ 200ಕೊಳವೆ ಬಾಬಿ ಪ್ರಯೋಜನ ಪಡೆದಿದ್ದಾರೆ. ಮಹಾತ್ಮರ ಜಯಂತಿ ಕಾಟಾಚಾರದ ಕಾರ್ಯಕ್ರಮ ಆಗದೇ ಅವರ ಆದರ್ಶ ನಿತ್ಯ ಜೀವನದಲ್ಲಿ ಮೈಗೂಡಿಸಿಕೊಂಡಲ್ಲಿ ಜಯಂತಿಗೆ ಅರ್ಥಬರಲು ಸಾಧ್ಯ ಎಂದರು.ಜನಸಂಖ್ಯೆ ಆಧರಿಸಿ ಮೀಸಲಾತಿ ನಿಗದಿ ಆದಲ್ಲಿ ದೇಶದ ಪ್ರತಿಯೊಂದು ಜನಾಂಗಕ್ಕೆ ಸರ್ಕಾರ ಯೋಜನೆ ತಲುಪಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಶಾಸಕ ಪಾಟೀಲ ಅವರು ವಿಧಾನಸೌಧದಲ್ಲಿ ಧ್ವನಿ ಎತ್ತಬೇಕು ಎಂದು ಪ್ರೊ.ಆರ್.ಕೆ.ಹುಡಗಿ ಮನವಿ ಮಾಡಿದರು. ಕೃಷಿ, ವ್ಯಾಪಾರ, ಕೈಗಾರಿಕಾ, ಶಿಕ್ಷಣ ಸೇರಿದಂತೆ ಯಾವುದೇ ಮಹತ್ವದ ಕ್ಷೇತ್ರಗಳಲ್ಲಿ ಬೆರಳೆಣಿಕೆ ಸಂಖ್ಯೆಯ ಜನ ತೊಡಗಿಸಿಕೊಂಡಿದ್ದು ಬಿಟ್ಟರೆ ಬಹುತೇಕ ದಲಿತರು ತುಳಿತಕ್ಕೆ ಒಳಗಾಗಿದ್ದಾರೆ ಅಂಥವರನ್ನು ಮೇಲೆತ್ತಲು ಇಂದಿನ ರಾಜಕಾರಣಿಗಳು ಜಾತ್ಯತೀತ ಮನೋಭಾವನೆ ತಾಳಬೇಕು ಎಂದು ಹುಡಗಿ ತಿಳಿಸಿದರು.ಪ್ರೊ.ಎ.ಜಿ ಹುಗ್ಗಿ ವಿಶೇಷ ಉಪನ್ಯಾಸ ನೀಡಿದರು. ಸಂಗಾನಂದ ಭಂತೆ ಸಾನಿಧ್ಯವಹಿಸಿದ್ದರು.ತಹಸೀಲ್ದಾರ ಎಸ್.ಎನ್.ವಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತಯ್ಯ ತೀರ್ಥ, ಪುರಸಭೆ ಅಧ್ಯಕ್ಷ ಪದ್ಮಾವತಿ ಶಿವಾಜಿರಾವ ಮಚಕೂರಿ, ಉಪಾಧ್ಯಕ್ಷ ಎಸ್.ಎ.ಬಾಸೀತ್, ದುಬಲಗುಂಡಿ ಗ್ರಾ.ಪಂ ಅಧ್ಯಕ್ಷೆ ಪ್ರತಿಭಾ ವಿಜಯಕುಮಾರ ನಾತೆ, ಧುಮ್ಮನಸೂರ ಗ್ರಾ,ಪಂ ಅಧ್ಯಕ್ಷೆ ಶಕುಂತಲಾ, ಗಣ್ಯರಾದ ಲಕ್ಷ್ಮಣರಾವ ಬುಳ್ಳಾ, ಪ್ರಭುರಾವ ತಾಳಮಡಗಿ, ಅಪ್ಸರಮಿಯ್ಯ, ಡಿ.ಆರ್.ಚಿದ್ರಿ ಮೊದಲಾದ ಗಣ್ಯರು ವೇದಿಕೆಯಲ್ಲಿ ಇದ್ದರು.ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾಜಿ ಡೋಣಿ ಸ್ವಾಗತಿಸಿದರು. ಬಸವರಾಜ ವರವಟ್ಟಿ ನೀರೂಪಿಸಿದರು. ಗೌತಮ ಅರಳಿ ವಂದಿಸಿದರು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಡಾ.ಬಾಬು ಜಗಜೀವನರಾಮ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry