ಅಭಿವೃದ್ಧಿಗೆ ನಿವೃತ್ತರ ಅನುಭವ ಸಿಗಲಿ

7

ಅಭಿವೃದ್ಧಿಗೆ ನಿವೃತ್ತರ ಅನುಭವ ಸಿಗಲಿ

Published:
Updated:

ಪಾವಗಡ: ತಾಲ್ಲೂಕಿನ ಅಭಿವೃದ್ಧಿಗೆ ನಿವೃತ್ತ ಸರ್ಕಾರಿ ನೌಕರರ ಅನುಭವದ ಕೊಡುಗೆ ಸಿಗುವಂತಾಗಲಿ ಎಂದು ಶಾಸಕ ವೆಂಕಟರಮಣಪ್ಪ ಅಭಿಪ್ರಾಯಪಟ್ಟರು.ಪಟ್ಟಣದಲ್ಲಿ ಸೋಮವಾರ ನಡೆದ ನಿವೃತ್ತರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಶಾಸಕರು, ವಿವಿಧ ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆಗೈದು ನಿವೃತ್ತರಾಗಿರುವವರ ಅನುಭವ ತಾಲ್ಲೂಕಿಗೆ ಅಭಿವೃದ್ಧಿಗೆ ಬೇಕಿದೆ ಎಂದರು.ಸ್ವಾಮಿ ಜಪಾನಂದಜೀ ಮಾತನಾಡಿ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಘಟಕದಿಂದ ನಿವೃತ್ತರಾದವರಿಗೆ ಹೃದಯ, ಕ್ಯಾನ್ಸರ್ ಚಿಕಿತ್ಸೆಗಾಗಿ ಉಚಿತ ಆರೋಗ್ಯಸೇವೆ ಕಾರ್ಡ್ ನೀಡುವುದಾಗಿ ತಿಳಿಸಿದರು.ಸಮಾರಂಭದಲ್ಲಿ 80 ವರ್ಷ ದಾಟಿದ ಹಿರಿಯ ನಿವೃತ್ತರನ್ನು, ಸ್ವಾಮಿ ಜಪಾನಂದಜೀ, ಡಾ.ಜಿ.ವೆಂಕಟರಾಮಯ್ಯ, ವಿಜ್ಞಾನಿ ಡಾ.ಎಂ.ವಿ .ವೆಂಕಟಸ್ವಾಮಿ, ಆರ್.ಟಿ ಖಾನ್ ಅವರನ್ನು ಸನ್ಮಾನಿಸಲಾಯಿತು.ಕೆ.ಎಸ್.ರಾಮಾಂಜನೇಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘದ ಖಾಜಾಂಚಿ ಲಕ್ಷ್ಮೀಕಾಂತ್, ರಾಮಾಂಜಿನಪ್ಪ, ನೌಕರರ ಸಂಘದ ಅಧ್ಯಕ್ಷ ವೈ.ಎಸ್.ಹನುಮಂತರಾಯ, ಪಿ.ಎಚ್.ಸುಬ್ಬರಾಯಪ್ಪ, ಡಾ.ಜಿ.ವೆಂಕಟರಾಮಯ್ಯ, ರೇಷ್ಮೆ ಮಂಡಳಿ ಸದಸ್ಯ ನರಸಿಂಹಯ್ಯ, ಚಿಕ್ಕನಾಗಪ್ಪ, ಡಾ.ಎಂ.ವಿ.ವೆಂಕಟಸ್ವಾಮಿ, ಆರ್.ಟಿ.ಖಾನ್, ಮೈಲಪ್ಪ, ವೆರ್ಟನರಿ ಉಗ್ರಪ್ಪ, ಲಕ್ಷ್ಮೀನರಸಿಂಹಯ್ಯ, ಸತ್ಯನಾರಾಯಣರಾವ್ ರೋಟರಿ ನಾರಾಯಣಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry