ಅಭಿವೃದ್ಧಿಗೆ ರಾಜಕಾರಣ ಅಡ್ಡಿಯಾಗದಿರಲಿ

7

ಅಭಿವೃದ್ಧಿಗೆ ರಾಜಕಾರಣ ಅಡ್ಡಿಯಾಗದಿರಲಿ

Published:
Updated:

ತರೀಕೆರೆ: ಉದ್ಯೋಗ ಖಾತರಿ ಯೋಜನೆಯನ್ನು ಗ್ರಾಮ ಪಂಚಾಯಿತಿಗಳು ಪರಿಣಾಮಕಾರಿಯಾಗಿ ಜಾರಿಗೆ ತಂದಲ್ಲಿ ಮಾತ್ರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು ಸಾಧ್ಯವೆಂದು ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.ತಾಲ್ಲೂಕಿನಲ್ಲಿ ಶನಿವಾರ ಗ್ರಾಮ ಪ್ರವಾಸ ಕೈಗೊಂಡ ಅವರು ನೇರಲಕೆರೆ ಗ್ರಾಮದಲ್ಲಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯದಲ್ಲಿ ರಾಜಕಾರಣ ಮಾಡಬಾರದು, ಗ್ರಾಮ ಪಂಚಾಯಿತಿಗಳಿಗೆ ನೀಡುತ್ತಿರುವ ಅನುದಾನದಲ್ಲಿ ಸಿಬ್ಬಂದಿ  ವೇತನ ಮತ್ತು ವಿದ್ಯುತ್ ಬಿಲ್ ಪಾವತಿಸಲು ಮಾತ್ರ ಸಾಕಾಗುತ್ತಿದೆ,. ಕೇಂದ್ರ ನೀಡಿರುವ ಉದ್ಯೋಗ ಖಾತರಿ ಯೋಜನೆಯ ಹಣವನ್ನು ರಾಜ್ಯ ಸರ್ಕಾರ ಕೂಡಲೇ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡಬೇಕು ಎಂದರು.ಅಡಿಕೆ ಬೆಲೆ ಗಣನೀಯವಾಗಿ ಏರಿಕೆ ಕಾಣುತ್ತಿದ್ದು, ವಿದೇಶದಿಂದ ಅಡಿಕೆಯನ್ನು ಆಮದು ಮಾಡುವುದನ್ನು ನಿಲ್ಲಿಸಿರುವ ಕಾರಣ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಮತ್ತು ರೇಖೆದಾರರಿಗೆ ಅನುಕೂಲವಾಗಲಿದೆ ಎಂದರು.ಉಬ್ರಾಣಿ-ಅಮೃತಾಪುರ ಏತ ನೀರಾವರಿ ಯೋಜನೆಯ ಫಲದಿಂದಾಗಿ ಗ್ರಾಮದ ಗುಡ್ಡದ ಮಲ್ಲೇದೇವರ ಕೆರೆಗೆ ನೀರು ಹರಿದಿದ್ದು, ಈ ನೀರು ರೈತರಿಗೆ ಉಪಯೋಗವಾಗುವಂತೆ ಪೈಪ್‌ಲೈನ್ ಅಳವಡಿಸಲು ಮತ್ತು ಪ್ರಸ್ತುತ ಯೋಜನೆಯ ವಿದ್ಯುತ್ ಬಿಲ್ಲನ್ನು ಸರ್ಕಾರವೇ ಪಾವತಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಗ್ರಾಮಸ್ಥರು ಸಂಸದರಲ್ಲಿ ಮನವಿ ಮಾಡಿದರು.ಮಾಜಿ ಶಾಸಕ ಎಸ್.ಎಂ.ನಾಗರಾಜ್, ಕೆಪಿಸಿಸಿ ಸದಸ್ಯ ಟಿ.ವಿಶಿವಶಂಕರಪ್ಪ, ರಾಜ್ಯ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಎಚ್.ಓಂಕಾರಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಿ.ಎಚ್.ಶ್ರೀನಿವಾಸ್, ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಎನ್.ಲೋಹಿತ್ ಮತ್ತು ಮುಖಂಡ ಕೆ.ಆರ್.ಧ್ರುವಕುಮಾರ್, ಗ್ರಾಮಸ್ಥರಾದ ಹಿತ್ತಲಮನೆ ಮಲ್ಲಿಕಾರ್ಜುನ್, ಬಸವರಾಜ್, ಸುಧಾಕರ್ ಮತ್ತಿತರರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry