ಅಭಿವೃದ್ಧಿಗೆ ರೂ.1 ಕೋಟಿ: ಪುಟ್ಟರಂಗಶೆಟ್ಟಿ

ಶನಿವಾರ, ಜೂಲೈ 20, 2019
27 °C

ಅಭಿವೃದ್ಧಿಗೆ ರೂ.1 ಕೋಟಿ: ಪುಟ್ಟರಂಗಶೆಟ್ಟಿ

Published:
Updated:

ಚಾಮರಾಜನಗರ: ನಂಜನಗೂಡು- ಬಿಳಿಗಿರಿರಂಗನ ಬೆಟ್ಟದ ರಸ್ತೆಯ ಆಯ್ದಭಾಗದ ದುರಸ್ತಿಗೆ 1.30 ಕೋಟಿ ರೂ ಮಂಜೂರಾಗಿದ್ದು, ಶಾಸಕ ಸಿ. ಪುಟ್ಟರಂಗಶೆಟ್ಟಿ ಸೋಮವಾರ ಗುದ್ದಲಿಪೂಜೆ ನೆರವೇರಿಸಿದರು.ತಾಲ್ಲೂಕಿನ ಕೆ. ಗುಡಿಯ ಕುಂಟಗುಡಿ ದೇವಸ್ಥಾನದ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಚಾ.ನಗರದಿಂದ ಕೆ.ಗುಡಿ ಮಾರ್ಗವಾಗಿ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುವ ರಸ್ತೆ ತೀವ್ರ ಹದಗೆಟ್ಟಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದರು.ರಸ್ತೆ ಅಭಿವೃದ್ಧಿ ಯೋಜನೆಯಡಿ 1.30 ಕೋಟಿ ರೂ ಮಂಜೂರಾಗಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ತಾ.ಪಂ. ಸದಸ್ಯರಾದ ನಾಗಬಸವಣ್ಣ, ಮಹದೇವಮ್ಮ, ಗ್ರಾ.ಪಂ. ಅಧ್ಯಕ್ಷೆ ಕುಮಾರಿಬಾಯಿ, ಉಪಾಧ್ಯಕ್ಷ ಶಾಂತಮ್ಮ, ಸದಸ್ಯರಾದ ಮೂರ್ತಿ, ಉಲ್ಲಾಸ್ ನಾಯಕ್, ಸಿದ್ದರಾಜು, ಜಡೆಯಪ್ಪ, ಮಹದೇವಗೌಡ, ಮುಖಂಡರಾದ ಕುಮಾರ್‌ನಾಯಕ್, ನಾಗಯ್ಯ, ಪಟೇಲ್‌ಕುಮಾರ್, ವೀರಭದ್ರಸ್ವಾಮಿ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry